ಕನ್ನಡ ಕಿರುತೆರೆಗೆ ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ: ಸ್ಪಷ್ಟನೆ ಕೊಟ್ರು ನೀರ್ ದೋಸೆ ನಟಿ

Published : Apr 10, 2024, 01:28 PM IST

ಇತ್ತೀಚೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸ್ಯಾಂಡಲ್ ವುಡ್ ನಟಿ ಹರಿಪ್ರಿಯ ವಕೀಲೆಯಾಗಿ ಕಿರುತೆರೆಗೆ ಬರ್ತಿದ್ದಾರೆ ಎನ್ನುವ ಪ್ರೋಮೋ ಬಿಡುಗಡೆಯಾಗಿದ್ದು, ಅದು ಭಾರಿ ವೈರಲ್ ಆಗಿತ್ತು. ಇದೀಗ ನಟಿ ಹರಿಪ್ರಿಯ ಆ ಬಗ್ಗೆ ಮೌನ ಮುರಿದಿದ್ದು, ಮುಂದಿನ ಚಿತ್ರದ ಬಗ್ಗೆ ಸುಳಿವು ಕೊಟ್ಟಿದ್ದಾರೆ.  

PREV
17
ಕನ್ನಡ ಕಿರುತೆರೆಗೆ ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ: ಸ್ಪಷ್ಟನೆ ಕೊಟ್ರು ನೀರ್ ದೋಸೆ ನಟಿ

ಸ್ಯಾಂಡಲ್ ವುಡ್ ನ ಜನಪ್ರಿಯ ನಟಿ ಹರಿಪ್ರಿಯಾ ಸಿಂಹ (Haripriya Simha). ಸದ್ಯ ನಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ನಟಿಯ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. ಇವೆಲ್ಲದರ ಮಧ್ಯೆ ಹರಿಪ್ರಿಯ ಸೀರಿಯಲ್ ನಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಬಹಳ ದಿನಗಳಿಂದ ಭಾರಿ ಸದ್ದು ಮಾಡುತ್ತಿದೆ. 
 

27

ಸಿನಿಮಾ ರಂಗದಲ್ಲಿ ಕೈತುಂಬಾ ಅವಕಾಶಗಳು ಇರೋವಾಗ ಸೀರಿಯಲ್ ಗೆ ಯಾಕೆ ಬಂದ್ರು ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಇದಕ್ಕೆ ಕಾರಣ ಸ್ಟಾರ್ ಸುವರ್ಣ (Star Suvarna) ವಾಹಿನಿ ಕೆಲ ದಿನಗಳ ಹಿಂದೆ ಹರಿಪ್ರಿಯ ವಕೀಲೆಯಾಗಿ ನಟಿಸಿರುವ ಒಂದು ಪ್ರೋಮೋ ಬಿಡುಗಡೆ ಮಾಡಿತ್ತು. 
 

37

ನ್ಯಾಯದ ಪರ ಹೋರಾಡೋಕೆ ಅಡ್ವೊಕೇಟ್ ಅಹನಾ ಅಗ್ನಿಹೋತ್ರ ಆಗಿ ಬರ್ತಿದ್ದಾರೆ ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ (beauty queen) ಹರಿಪ್ರಿಯಾ ಶೀಘ್ರದಲ್ಲಿ! ಎಂದು ಮಾತ್ರ ಕ್ಯಾಪ್ಶನ್ ನಲ್ಲಿ ಬರೆದಿದ್ದು, ಇದು ಜನರಲ್ಲಿ ಬಹಳಷ್ಟು ಕುತೂಹಲ ಕೆರಳಿಸಿತ್ತು. 
 

47

ಕಿರುತೆರೆಯ ಹೊಸ ಸೀರಿಯಲ್ ನಲ್ಲಿ ನಾಯಕಿಯಾಗಿ ಹರಿಪ್ರಿಯ ನಟಿಸ್ತಿದ್ದಾರ? ಯಾವುದೋ ಸೀರಿಯಲ್ ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆಯೇ? ಹರಿಪ್ರಿಯ ಕೈಯಲ್ಲಿ ಸಾಕಷ್ಟು ಸಿನಿಮಾ ಅವಕಾಶಗಳು ಇರೋವಾಗ ಅದನ್ನೆಲ್ಲಾ ಬಿಟ್ಟು ಸೀರಿಯಲ್ ಗೆ ಯಾಕ್ ಬಂದ್ರು ಎನ್ನುವ ಪ್ರಶ್ನೆಗಳೆ ಜಾಸ್ತಿಯಾಗಿದ್ದವು. 
 

57

ಅಭಿಮಾನಿಗಳಂತೂ ಮೇಡಂ ನೀವು ಸಿನಿಮಾ ರಂಗದಲ್ಲಿಯೇ ಇರಿ, ಕಿರುತೆರೆಗೆ ಎಂಟ್ರಿ ಕೋಡೋದೆ ಬೇಡ, ಅತಿಥಿ ಪಾತ್ರ ಆದ್ರೆ ಓಕೆ, ಆದರೆ ಕಿರುತೆರೆಯಲ್ಲಿ ನಾಯಕಿಯಾಗಿ ಬೇಡ, ನಿಮ್ಮನ್ನು ಬಿಗ್ ಸ್ಕ್ರೀನ್ ಮೇಲೆ ನೋಡಲು ನಾವು ಕಾಯ್ತಿದ್ದೇವೆ ಎಂದು ಹಲವರು ಕೋರಿಕೆಯೂ ಇಟ್ಟಿದ್ದರು. 
 

67

ಇದೀಗ ಮೊದಲ ಬಾರಿಗೆ ನಟಿ ಹರಿಪ್ರಿಯ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಾವು ಸೀರಿಯಲ್ ನಲ್ಲಿ ನಟಿಸುವ ಸುದ್ದಿಯ ಬಗ್ಗೆ ಮೌನ ಮುರಿದು ಮಾತನಾಡಿದ್ದಾರೆ. ಧಾರಾವಾಹಿ ನಟನೆ ಬಗ್ಗೆ ಅಷ್ಟಕ್ಕೂ ಹೇಳಿದ್ದೇನು ಗೊತ್ತಾ?
 

77

ನಮಸ್ಕಾರ, ಎಲ್ಲರೂ ಹೇಗಿದ್ದೀರಿ?? ನಾನು ಯಾವುದೇ ಧಾರವಾಹಿಯನ್ನು ಒಪ್ಪಿಲ್ಲ.. ನಾನು ನಿರ್ವಹಿಸಿರುವುದು ಒಂದೆರೆಡು ದಿನಗಳ ಅತಿಥಿ ಪಾತ್ರವಷ್ಟೇ (guest appearance).. ಒಂದೊಳ್ಳೇ ಸಿನಿಮಾದ ಸುದ್ದಿಯೊಂದಿಗೆ ನಿಮ್ಮ ಮುಂದೆ ಶೀಘ್ರದಲ್ಲೇ ಬರಲಿದ್ದೇನೆ.. ಎಂದಿನಂತೆ ನಿಮ್ಮ ಪ್ರೀತಿ, ಹಾರೈಕೆಗಳಿರಲಿ..!! ಎಂದು ಹರಿಪ್ರಿಯ ಹೇಳಿದ್ದಾರೆ. ಆ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. 
 

Read more Photos on
click me!

Recommended Stories