ಗೋವಾ ಬೀಚ್‌ನಲ್ಲಿ ಇದ್ರೆ ನೆಮ್ದಿಯಾಗ್ ಇರ್ಬೇಕು.. ಹೇಟರ್ಸ್ ಇನ್ನೂ ಉರ್ಕೊಂಡು ಸಾಯಿರಿ ಎಂದ ಸೋನು ಗೌಡ!

Published : Oct 15, 2025, 09:19 AM IST

ಸೋನು ಶ್ರೀನಿವಾಸ್ ಗೌಡ ಇದೀಗ ಗೋವಾದ ಬೀಚ್‌ನ ಫೋಟೋಗಳನ್ನು ಹಂಚಿಕೊಂಡು ಸದ್ದು ಮಾಡುತ್ತಿದ್ದಾರೆ. 'ಹೇಟರ್ಸ್ ಇನ್ನೂ ಉರ್ಕೊಂಡು ಸಾಯಿರಿ' ಎಂದು ಸೋನು ಗೌಡ ಸ್ಪೆಷಲ್ ಕ್ಯಾಪ್ಷನ್ ನೀಡಿದ್ದಾರೆ.

PREV
18
ಗೋವಾದ ಬೀಚ್‌ನಲ್ಲಿ ಸೋನು

ಸೋನು ಶ್ರೀನಿವಾಸ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಇವರಿಗೆ ಸಾಕಷ್ಟು ಮಂದಿ ಫಾಲೋವರ್ಸ್ ಕೂಡ ಇದ್ದಾರೆ. ಇದೀಗ ಗೋವಾದ ಬೀಚ್‌ನ ಫೋಟೋಗಳನ್ನು ಹಂಚಿಕೊಂಡು ಸದ್ದು ಮಾಡುತ್ತಿದ್ದಾರೆ.

28
ಇನ್‌ಸ್ಟಾಗ್ರಾಮ್‌ನಲ್ಲಿ ಹವಾ

ಬಿಗ್ ಬಾಸ್ ಒಟಿಟಿ ಸೀಸನ್ 1ರಲ್ಲಿ ಸ್ಪರ್ಧಿಯಾಗಿದ್ದ ಸೋನು ಶ್ರೀನಿವಾಸ್ ಗೌಡ ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಹವಾ ಮಾಡುತ್ತಿದ್ದಾರೆ. ಆಗಾಗ ವಿವಾದಕ್ಕೂ ಒಳಗಾಗರುವ ಸೋನು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಾರೆ.

38
ಬೀಚ್‌ನಲ್ಲಿ ಮಸ್ತ್ ಎಂಜಾಯ್

ಸದ್ಯ ಅವರು ಗೋವಾದ ಬೀಚ್‌ನ ಸಮುದ್ರ ತೀರದಲ್ಲಿ ಶಾರ್ಟ್ ವೈಟ್ ಡ್ರೆಸ್ ಧರಿಸಿ ಮಸ್ತ್ ಎಂಜಾಯ್ ಮಾಡಿದ್ದಾರೆ. ಆ ಫೋಟೋಗಳನ್ನು ಕೂಡ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

48
ಇದ್ರೆ ನೆಮ್ದಿಯಾಗ್ ಇರ್ಬೇಕು

ಫೋಟೋಗಳನ್ನು ಹಂಚಿಕೊಂಡಿರುವ ಸೋನು ಗೌಡ 'ಒಮ್ಮೆ ಡಿ ಬಾಸ್ ಹೇಳಿದ್ರು.. ಇದ್ರೆ ನೆಮ್ದಿಯಾಗ್ ಇರ್ಬೇಕು.. ಹೇಟರ್ಸ್ ಇನ್ನೂ ಉರ್ಕೊಂಡು ಸಾಯಿರಿ' ಅಂತ ವಿಶೇಷವಾದ ಕ್ಯಾಪ್ಷನ್ ನೀಡಿದ್ದಾರೆ.

58
ತರೇಹವಾರಿ ಕಮೆಂಟ್‌ಗಳು

ಫೋಟೋಗಳನ್ನು ನೋಡಿದ ನೆಟ್ಟಿಗರು ಸಹ, ಇದ್ರೆ ನೆಮ್ಮದಿಯಾಗಿ ಸೋನು ತರ ಇರಬೇಕು, ನೀನ್ ನೆಮ್ಮದಿಯಾಗಿ ಇರ್ತೀಯ ಆದ್ರೆ ನಮ್ ಗಂಡ್ ಹೈಕ್ಳು ಕಥೆ ಏನು, ಕಲರ್‌ಫುಲ್ ಬ್ಯೂಟಿ ಅಂತೆಲ್ಲಾ ತರೇಹವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.

68
ಬಿಗ್​ಬಾಸ್​ ಒಟಿಟಿ ಸೀಸನ್​ 1ರ ಮಾಜಿ ಸ್ಪರ್ಧಿ

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಒಟಿಟಿ ಸೀಸನ್​ 1ರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್​ ಗೌಡ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಿಗ್​ಬಾಸ್ ಮನೆಗೆ​ ಹೋಗಿದ್ದಾಗಲೂ ಸಖತ್​ ಸುದ್ದಿಯಲ್ಲಿದ್ದರು ಸೋನು ಗೌಡ.

78
ಮೊನ್ನೆಯಷ್ಟೇ ಶಾಕ್​ ಕೊಟ್ಟಿದ್ದರು

ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದೇನೆ ಅಂತ ಹೇಳಿ ಶಾಕ್​ ಕೊಟ್ಟಿದ್ದರು. ಆದರೆ ಹುಡುಗ ಯಾರು ಅಂತ ಅವರು ರಿವೀಲ್ ಮಾಡಿರಲಿಲ್ಲ. ಕುಟುಂಬಸ್ಥರು ನಿಶ್ಚಿಯಿಸಿದ ಅರೇಂಜ್ ಮ್ಯಾರೇಜ್ ಇದಾಗಿದೆ ಎಂದಿದ್ದರು.

88
ಇನ್​ಸ್ಟಾಗ್ರಾಮ್​​ನಲ್ಲಿ 11 ಲಕ್ಷ ಫಾಲೋವರ್ಸ್

ಸೋಶಿಯಲ್ ಮೀಡಿಯಾದಲ್ಲಿ ಸೋನು ಆಗಾಗ ಟ್ರೋಲ್ ಆಗುತ್ತಾರೆ. ಕೆಟ್ಟ ಕಮೆಂಟ್ ಮಾಡೋರಿಗೆ ಸೋನು ಗೌಡ ಇತ್ತೀಚೆಗೆ ಕ್ಲಾಸ್ ತೆಗೆದುಕೊಂಡಿದ್ದರು. ಸದ್ಯ ಸೋನು ಗೌಡಗೆ ಇನ್​ಸ್ಟಾಗ್ರಾಮ್​​ನಲ್ಲಿ 11 ಲಕ್ಷ ಫಾಲೋವರ್ಸ್ ಇದ್ದಾರೆ.

Read more Photos on
click me!

Recommended Stories