ಹಾಟ್ನೆಸ್ ಓವರ್ ಲೋಡೆಡ್; ಸಂಯುಕ್ತಾ ಜಿಮ್ ಸೆಲ್ಫಿಗಳಿಗೆ ಫಾಲೋವರ್ಸ್ ಫಿದಾ

First Published | Jan 21, 2024, 6:23 PM IST

ಬೋಲ್ಡ್ ಫೋಟೋಸ್ ಹಾಕೋದ್ರಲ್ಲಿ ಕಿರಿಕ್ ಪಾರ್ಟಿ ಸಂಯುಕ್ತ ಹೆಗ್ಡೆ ಯಾವತ್ತೂ ಹಿಂದೆ ಬಿದ್ದಿಲ್ಲ. ಈ ಬಾರಿ ಅವರು ತಮ್ಮ ಬೋಲ್ಡ್ ಜಿಮ್ ಲುಕ್ ಹಂಚಿಕೊಂಡಿದ್ದಾರೆ.

ತಮ್ಮ ಬೋಲ್ಡ್ ಲುಕ್ ಫೋಟೋಸ್ ಹಾಕೋದ್ರಲ್ಲಿ ಕಿರಿಕ್ ಪಾರ್ಟಿ ಚಿತ್ರದ ಬೆಡಗಿ ಸಂಯುಕ್ತ ಹೆಗ್ಡೆ ಯಾವತ್ತೂ ಹಿಂದೆ ಬಿದ್ದಿಲ್ಲ.

ಅವರ ಇನ್ಸ್‌ಟಾಗ್ರಾಂ ಖಾತೆ ಸದಾ ಬೋಲ್ಡ್ ಲುಕ್‌ನಿಂದ ತುಂಬಿರುತ್ತದೆ. ಈ ಬಾರಿ ಅವರು ತಮ್ಮ ಬೋಲ್ಡ್ ಜಿಮ್ ಲುಕ್ ಹಂಚಿಕೊಂಡಿದ್ದಾರೆ.
 

Tap to resize

'ಮರೆಯೋದು ಕಷ್ಟ, ಆದ್ರೂ ಇಲ್ಲಿದೆ ರಿಮೈಂಡರ್' ಎಂದವರು ಕ್ಯಾಪ್ಶನ್ ನೀಡಿದ್ದಾರೆ ಮತ್ತು ಜಿಮ್‌ನಲ್ಲಿ ತೆಗೆದ ಮಿರರ್ ಸೆಲ್ಫಿಗಳನ್ನು ಶೇರ್ ಮಾಡಿದ್ದಾರೆ.

ಕಿರಿಕ್ ಬೆಡಗಿಯ ಈ ಫೋಟೋಗಳಿಗೆ ಸಾಕಷ್ಟು ಲೈಕ್‌ಗಳು ಹರಿದು ಬರುತ್ತಿದ್ದು ಕಾಮೆಂಟ್‌ನಲ್ಲಿ ಹಲವರು ಅವರ ಫಿಟ್ನೆಸನ್ನು ಮೆಚ್ಚಿಕೊಂಡಿದ್ದಾರೆ. 
 

ಎಂಥ ಅದ್ಭುತ ಬೈಸೆಪ್ಸ್, ಟ್ರೈಸೆಪ್ಸ್- ಯಾರೂ ನಿಮ್ಮ ಜೊತೆ ಕಿರಿಕ್ ಮಾಡೋ ಹಾಗೇ ಇಲ್ಲ ಎಂದಿದ್ದಾರೆ ಅವರ ಅಭಿಮಾನಿಯೊಬ್ಬರು.

ಮತ್ತೆ ಕೆಲವರು ಕಾಮೆಂಟ್ ಮಾಡಿ, ಹಾಟ್‌ನೆಸ್ ಓವರ್‌ಲೋಡೆಡ್, ಸ್ಟ್ರಾಂಗ್, ಸೆಕ್ಸೀ, ಪವರ್ ಕ್ವೀನ್ ಎಂಬ ಮೆಚ್ಚುಗೆಗಳನ್ನು ಸೂಚಿಸಿದ್ದಾರೆ. 
 

ಕಿರಿಕ್ ಪಾರ್ಟಿ ಬಳಿಕ ತಮಿಳು, ತೆಲುಗಿನಲ್ಲಿಯೂ ಸಂಯುಕ್ತಾ ಅದೃಷ್ಟ ಪರೀಕ್ಷೆಗಿಳಿದರೂ ಎಲ್ಲೂ ಅಂಥ ಹೇಳಿಕೊಳ್ಳುವಂಥ ಯಶಸ್ಸು ಸಿಕ್ಕಿಲ್ಲ.

ಫಿಟ್ನೆಸ್ ಹಾಗೂ ಡ್ಯಾನ್ಸ್ ‌ನಲ್ಲಿ ತಮ್ಮ ಆಸಕ್ತಿಯನ್ನು ಪ್ರದರ್ಶಿಸುತ್ತಲೇ ಇರುವ ಸಂಯುಕ್ತಾ ಅಭಿನಯದ ಕ್ರೀಂ ಚಿತ್ರ ಬಿಡುಗಡೆಯಾಗಬೇಕಿದೆ.

ಕಳೆದ ವಾರವಷ್ಟೇ ಸಂಯುಕ್ತಾ 1 ಬಿಎಚ್ಕೆ ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಕಾಲಿಟ್ಟ ಸಂತಸ ಹಂಚಿಕೊಂಡು ಈ ಸಂಬಂಧ ಫೋಟೋ ಶೇರ್ ಮಾಡಿದ್ದರು.

ಈ ಹಿಂದೆ ಬಿಗ್ ಬಾಸ್ ಕನ್ನಡ ಸೀಸನ್ 5 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಭಾಗವಹಿಸಿ, ಅಲ್ಲಿ ಕಿರಿಕ್ ಮಾಡಿಕೊಂಡೇ ಹೊರ ಹೋಗಿದ್ದರು. ಇನ್ನು ಎಂಟಿವಿ ರೋಡೀಸ್ 15, ಎಂಟಿವಿ ಸ್ಲಿಟ್ ವಿಲ್ಲಾ 11 ನಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿದ್ದರು. 

Latest Videos

click me!