ಬಿಗ್ ಬಾಸ್ ಮನೆಯಲ್ಲಿ ವಾಕ್ಸಮರ : ನಾನು ತುಂಬಾನೆ ಸ್ಟ್ರಾಂಗ್ ಕಂಟೆಸ್ಟಂಟ್ ಎಂದ ಭವ್ಯಾ ಗೌಡಗೆ ಡವ್ ರಾಣಿ ಎಂದ ಜನ

First Published | Oct 8, 2024, 5:04 PM IST

ಬಿಗ್ ಬಾಸ್ ಮನೆಯಲ್ಲಿ ಇದೀಗ ಮತ್ತೆ ವೈಮಸ್ಸು ಮೂಡಿತ್ತು, ಸ್ಪರ್ಧಿಗಳ ನಡುವೆ ವಾಕ್ಸಮರ ಶುರುವಾಗಿದೆ. ಗೌತಮಿ, ಭವ್ಯಾ ಗೌಡ, ರಂಜಿತ್, ಐಶ್ವರ್ಯ ಮಾತಿನಲ್ಲಿ ಕಿಚ್ಚು ಹೆಚ್ಚಿದೆ. 
 

ಬಿಗ್ ಬಾಸ್ ಸೀಸನ್ 11 (Bigg Boss Season 11) ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಇನ್ನು ಏನೇನು ಆಗಬಹುದು ಎಂದು ವೀಕ್ಷಕರು ಕಾಯ್ತಿರೋವಾಗ್ಲೇ ಇದೀಗ ಮತ್ತೆ ಮನೆಯಲ್ಲಿ ವಾಕ್ಸಮರ ಶುರುವಾಗಿದೆ. ಇದೀಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ತೋರಿಸಿರೋವಂತೆ,  ನಾಮಿನೇಟ್ ಮಾಡಲು ಟಾಸ್ಕ್ ನೀಡಿದ್ದು, ಇಬ್ಬಿಬ್ಬರು ಸ್ಪರ್ಧಿಗಳನ್ನು ಒಟ್ಟಿಗೆ ನಿಲ್ಲಿಗೆ ಒಬ್ಬರು, ಇನ್ನೊಬ್ಬರ ಬಗ್ಗೆ ಹೇಳುವ ಟಾಸ್ಕ್ ನೀಡಲಾಗಿತ್ತು. 
 

ಇಲ್ಲಿಂದಲೇ ಶುರುವಾಗಿ ವಾಕ್ಸಮರ. ಮೊದಲಿಗೆ ರಂಜಿತ್, ಗೌತಮಿ ಅವರನ್ನ ಬಂದಾಗಿನಿಂದಲೂ ಏನೂ ಮಾಡೋದು ನೋಡಿಲ್ಲ, ಅಡ್ವರ್ಟೈಸ್ ಮೆಂಟ್ ಬಂದಾಗೆ ಬಂದಿದ್ದಾರೆ ಅಷ್ಟೇ ಎಂದಿದ್ದಾರೆ ಅದಕ್ಕೆ ಉತ್ತರಿಸಿದ ಗೌತಮಿ ಅಡ್ವರ್ಟೈಸ್ ಮೆಂಟ್ ಟ್ಯಾಗ್ ನ್ನು ನಾನು ತೆಗೋಳೋದಿಲ್ಲ ಎಂದಿದ್ದಾರೆ. 
 

Tap to resize

ಇನ್ನು ಐಶ್ವರ್ಯ ಬಗ್ಗೆ ಮಾತನಾಡಿದ ಭವ್ಯಾ ಗೌಡ (Bhavya Gowda), ಇವರು ಹೇಗಂದ್ರೆ ಕೀ ಕೊಟ್ಟ ಕೈ ಗೊಂಬೆ, ಅದಕ್ಕೆ ಕೀ ಕೊಟ್ರೆ ಮಾತ್ರ ಆಡುತ್ತೆ, ಇಲ್ಲಾಂದ್ರೆ ಸುಮ್ನೆ ಇರುತ್ತೆ ಎಂದಿದ್ದಾರೆ. ಅದಕ್ಕೆ ಐಶ್ವರ್ಯ ಕೂಡ ಕಡಕ್ ಆಗಿಯೇ ಉತ್ತರಿಸಿದ್ದಾರೆ. 
 

ಭವ್ಯಾ ಗೌಡರನ್ನು ನೋಡಿದಾಗ ಕೆಲವು ಸಲ ಇವರು ತುಳ್ಕೊಂಡು ಮುಂದೆ ಹೋಗ್ತಾರೆ ಅನಿಸುತ್ತೆ ಎಂದಿದ್ದಾರೆ ಐಶ್ವರ್ಯ (Aishwarya Sindhogi). ಅದಕ್ಕೆ ರಿಪ್ಲೈ ಕೊಟ್ಟ ಭವ್ಯಾ ಎದುರಾಳಿ ಯಾರೇ ಇರ್ಲಿ ಅವರನ್ನ ತುಳಿದೇ ಮುಂದೆ ಹೋಗ್ಬೇಕು ಅಂತ ಅಷ್ಟೇ ಖಡಕ್ ಆಗಿ ಉತ್ತರಿಸಿದ್ದಾರೆ. 
 

ಇನ್ನು ಗೌತಮಿ (Gowthami Jadhav) ಕೂಡ ಭವ್ಯಾ ಅವರಿಗೆ ನೀವು ಸ್ವಲ್ಪ ಡಾಮಿನೇಟಿಂಗ್ ಅಂತ ಅನಿಸಿದ್ದು ನಿಜಾ ಎನ್ನುವಾಗ, ನಾನು ತುಂಬಾನೇ ಸ್ಟ್ರಾಂಗ್ ಕಂಟೆಸ್ಟಂಟ್ ನನ್ನ ಪ್ರಕಾರ ಎಂದಿದ್ದಾರೆ ಅದಕ್ಕೆ ಗೌತಮಿ, ನಾನು ಸ್ಟ್ರಾಂಗ್ ಅಲ್ಲ ಅಂತ ಹೇಳಿಲ್ಲ ಎಂದು ಕ್ಲಾರಿಟಿ ನೀಡಿದ್ದಾರೆ. 
 

ಅಷ್ಟೇ ಅಲ್ಲ ನೀವು ಅದು ಮಾಡ್ಬೇಡಿ, ಇದು ಮಾಡ್ಬೇಡಿ ಅಂತ ಹೇಳೋವಾಗ ನಿಮ್ಮ ಟೋನ್ ಡಾಮಿನೇಟಿಂಗ್ (dominating) ಆಗಿತ್ತು ಎಂದು ಗೌತಮಿ ಹೇಳಿದ್ರೆ, ನನ್ನ ಟೋನ್ ನ ಬೇರೆಯವ್ರಿಗೋಸ್ಕರ ಚೇಂಜ್ ಮಾಡೋದಕ್ಕೆ ಆಗಲ್ಲ ಎಂದು ಹೇಳಿದ್ದಾರೆ ಭವ್ಯಾ ಗೌಡ.  
 

ಇದನ್ನೆಲ್ಲಾ ನೋಡಿ ನೆಟ್ಟಿಜನ್ಸ್ ಕಾಮೆಂಟ್ ಮಾಡಿದ್ದು, ಭವ್ಯ ಡವ್ ರಾಣಿ,  ಭವ್ಯಾ ಮೊದಲು ಎಲಿಮಿನೇಟ್ ಆಗ್ಬೇಕು, ಭವ್ಯ ಈ ವಾರ ಎಲಿಮಿನೇಟ್ ಆಗಬೇಕು, ಭವ್ಯ ಅವರದ್ದು ಓವರ್ ಆಯ್ತು ತುಂಬಾ, ಭವ್ಯಾ ಅವರು ಯಮುನಾ ಥರಾನೇ ಆಡ್ತಿದ್ದಾರೆ ಎಂದಿದ್ದಾರೆ ಹಲವರು. ಇನ್ನೂ ಕೆಲವರು ಭವ್ಯ ಗೌಡ ಸೂಪರ್ ಸ್ಟ್ರಾಂಗ್ ಲೇಡಿ, ಬಿಗ್ ಬಾಸ್ ಬಿಗ್ ಬಾಸ್ ಆಟನೆ ಹಾಗೆ ಬೇರೆಯವರ ಅನುಕಂಪ ಅಲ್ಲಿ ನಡೆಯಲ್ಲ ಎಂದು ಭವ್ಯಾ ಗೌಡಾಗೆ ಸಪೋರ್ಟ್ ಕೂಡ ಮಾಡಿದ್ದಾರೆ. 
 

Latest Videos

click me!