ಬಿಗ್ ಬಾಸ್ 18: ಮಹೇಶ್ ಬಾಬು-ನಮ್ರತಾ ಜೊತೆ ಶಿಲ್ಪಾ ಶಿರೋಡ್ಕರ್ ಸಂಬಂಧ ಚೆನ್ನಾಗಿದ್ಯಾ?

First Published | Oct 8, 2024, 4:42 PM IST

ಹಿಂದಿ ಬಿಗ್‌ಬಾಸ್ 18ರ ಸ್ಪರ್ಧಿಯಾಗಿ  ಬಿಗ್ ಮನೆಗೆ ಹೋಗಿರುವ ಬಾಲಿವುಡ್ ನಟಿ ಶಿಲ್ಪಾ ಶಿರೋಡ್ಕರ್ ಅಂತಿಮವಾಗಿ ಅಕ್ಕ ನಮ್ರತಾ ಶಿರೋಡ್ಕರ್ ಮತ್ತು ಬಾವ ಮಹೇಶ್ ಬಾಬು ಜೊತೆಗಿನ ಬಾಂಧವ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವರೇನಂದ್ರು? 

ಮಾಜಿ ನಟಿ ನಮ್ರತಾ ಶಿರೋಡ್ಕರ್ ಅವರ ಸಹೋದರಿ ಹಾಗೂ ಬಾಲಿವುಡ್‌ ನಟಿ ಶಿಲ್ಪಾ ಶಿರೋಡ್ಕರ್, ಬಿಗ್ ಬಾಸ್ 18 ರ ಸ್ಪರ್ಧಿ. 1990ರ ದಶಕದಲ್ಲಿ ಬಾಲಿವುಡ್‌ನಲ್ಲಿ ಸಾಕಷ್ಟು ಜನಪ್ರಿಯರಾಗಿದ್ದ ಇವರು ಈಗ ಬಿಗ್ ಬಾಸ್ ಮೂಲಕ ಹೊಸ ಜರ್ನಿ ಆರಂಭಿಸಿದ್ದಾರೆ. ಅವರು ಮಹೇಶ್ ಬಾಬು ಹಾಗೂ ಸೋದರಿ ನಮ್ರತಾ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.

'ನಾನೆಂದರೆ ನಮ್ರತಾ ಮತ್ತು ಮಹೇಶ್‌ಗೆ ತುಂಬಾ ಇಷ್ಟ. ನನ್ನ ಬಗ್ಗೆ ಅವರಿಗೆ ಹೆಮ್ಮೆ ಇದೆ. ಏನೇ ಮಾಡಿದರೂ ನನ್ನ ಸಾಮರ್ಥ್ಯದ ಬಗ್ಗೆ ನಂಬಿಕೆ ಇದೆ. ಅವರಿಗೆ ಹೆಮ್ಮೆ ತರವಂಥ ಕೆಲಸವನ್ನೇ ಮಾಡುತ್ತೇನೆ. ಒಂದು ಕುಟುಂಬವಾಗಿ, ನಾವು ತುಂಬಾ ಆತ್ಮೀಯರು. ನನ್ನನ್ನು ಸದಾ ಬೆಂಬಲಿಸುತ್ತಾರೆ,' ಎಂದು ಶಿಲ್ಪಾ ಹೇಳಿ ಕೊಂಡಿದ್ದಾರೆ. 

Tap to resize

ಶಿಲ್ಪಾ, ನಮ್ರತಾ ಮತ್ತು ಮಹೇಶ್ ಬಗ್ಗೆ ಮಾತನಾಡಲು ಹಿಂದೊಮ್ಮೆ ನಿರಾಕರಿಸಿದ್ದರು. ಆದ್ದರಿಂದ ಅಕ್ಕ-ತಂಗಿ ಒಡನಾಟದ ಬಗ್ಗೆ ಅವಸ್ವಪ ಎದ್ದಿತ್ತು. ಎಲ್ಲವೂ ಸರಿಯಿಲ್ಲವೆಂದೇ ಜನರು ಮಾತನಾಡಿಕೊಳ್ಳುತ್ತಿದ್ದರು.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಗ್ಗೆ ಮಾತನಾಡಿರುವ ಶಿಲ್ಪಾ, ನಾನೇನೂ ನಾಟಕವಾಡುವ ಅಗತ್ಯವಿಲ್ಲ. ಹೇಗಿದ್ದೇನೋ ಹಾಗೆ ಇರುತ್ತೇನೆ. ಒಳಗೊಂದು, ಹೊರಗೊಂದು ತೋರಿಸೋದು ನಂಗೆ ಬೇಡ. ನನ್ನ ವಿಷಯದಲ್ಲಿ ಎಲ್ಲವೂ ಟ್ರಾನ್ಸಪರೆಂಟ್ ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಮತ್ತು ಶಿಲ್ಪಾ ಅವರ ವೃತ್ತಿಜೀವನವು ಸುಮಾರು ಒಂದೇ ಸಮಯದಲ್ಲಿ ಪ್ರಾರಂಭವಾಗಿದ್ದು. ಅದೇನೇ ಇದ್ದರೂ, ಅವರು ಎಂದಿಗೂ ಜೊತೆಯಾಗಿ ನಟಿಸಲಿಲ್ಲ. ಶಿಲ್ಪಾ ಅವರು ರಿಟರ್ನ್ ಆಫ್ ದಿ ಜ್ಯುವೆಲ್ ಥೀಫ್, ಖುದಾ ಗವಾ, ಗೋಪಿ ಕಿಶನ್, ಬೇವಫಾ ಸನಮ್ ಮತ್ತು ಕಿಶನ್ ಕನ್ಹಯ್ಯ ಸೇರಿ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಶಿಲ್ಪಾ ಪ್ರಕಾರ, ಸಲ್ಮಾನ್ ಮತ್ತು ಶಿಲ್ಪಾ ಪರಿಚಯಸ್ಥರು ಆದರೆ ಆಪ್ತರಲ್ಲ. 

Latest Videos

click me!