ರೆಟ್ರೋ ಸ್ಟೈಲಲ್ಲಿ ಸಖತ್ ಆಗಿ ಕಾಣಿಸ್ತಿದ್ದಾರೆ ತುಂಬು ಗರ್ಭಿಣಿ ನೇಹಾ ಗೌಡ- ಚಂದನ್

First Published | Oct 8, 2024, 2:49 PM IST

ಕನ್ನಡ ಕಿರುತೆರೆ ನಟಿ ನೇಹಾ ಗೌಡ ಇದೀಗ ತಮ್ಮ ಪ್ರೆಗ್ನೆನ್ಸಿಯ ಕೊನೆಯ ತಿಂಗಳಿಗೆ ಕಾಲಿಟ್ಟಿದ್ದು, ಮತ್ತೊಂದು ಹೊಸ ಫೋಟೊ ಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ. 
 

ಕನ್ನಡ ಕಿರುತೆರೆ ನಟಿ ನೇಹಾ ಗೌಡ, ಗರ್ಭಿಣಿ ಎನ್ನುವ ಸಿಹಿ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡ ಬಳಿಕ ತಮ್ಮ ಮೆಟರ್ನಿಟಿ ಫೋಟೊ ಶೂಟ್ ಗಳಿಂದಲೇ ನೇಹಾ ಗೌಡ (Neha Gowda) ಸುದ್ದಿಯಲ್ಲಿರುತ್ತಾರೆ. 
 

ಇತ್ತೀಚೆಗೆ ಶಾಕುಂತಲೆಯಾಗಿ ಕೆರೆ ಬಳಿ ಕುಳಿತು ಫೋಟೊ ಶೂಟ್ ಮಾಡಿಸಿದ್ದು ವೈರಲ್ ಆಗಿದ್ದು, ಆದಾದ ಬಳಿಕ ನೇರಳೆ ಬಣ್ಣದ ಟ್ರಾನ್ಸ್ಪರೆಂಟ್ ಸೀರೆಯಲ್ಲೂ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದರು. ಇದೀಗ ಪತಿ ಚಂದನ್ ಗೌಡ (Chandan Gowda) ಜೊತೆ ನೇಹಾ ಗೌಡ ಕ್ಯೂಟ್ ಆಗಿರೋ ಫೋಟೊ ಶೂಟ್ ಮಾಡಿಸಿದ್ದಾರೆ. 
 

Tap to resize

ಇದೀಗ ಹೊಸ ಫೋಟೊ ಶೂಟ್ ನ ವಿಡಿಯೋ ಹಾಗೂ ಒಂದಷ್ಟು ಫೋಟೊಗಳನ್ನು ನಟಿ ನೇಹಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ರೆಟ್ರೋ ಸ್ಟೈಲಲ್ಲಿ (retro look photoshoot) ಈ ಜೋಡಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. 
 

ನೇಹಾ ಕಪ್ಪು ಬಣ್ಣದ ಫ್ಲೋರಲ್ ಸೀರೆ ಧರಿಸಿದ್ದು, ಕೈಯಲ್ಲಿ ಕಪ್ಪು ಗ್ಲೌಸ್, ಕಣ್ಣಲ್ಲಿ ಕಪ್ಪು ಕನ್ನಡಕ, ಎಣ್ಣೆ ಹಾಕಿ ಬಾಚಿದ ಬನ್ ಹೇರ್ ಸ್ಟೈಲ್ ಹಾಗೂ ಕುತ್ತಿಗೆಯಲ್ಲಿ ಮುತ್ತಿನ ಹಾರ ಧರಿಸಿದ್ರೆ, ಚಂದನ್ ಗೌಡ ಕಪ್ಪು ಬಣ್ಣದ ಶರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿದ್ದು, ತಲೆಗೆ ಕಪ್ಪು ಬಣ್ಣದ ಕ್ಯಾಪ್ ಹಾಕಿದ್ದಾರೆ. 
 

ಈ ಫೋಟೊ ಶೂಟನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಪ್ರೆಗ್ನೆನ್ಸಿ ಫೋಟೊ ಶೂಟ್ (pregnancy photoshoot) ಮಾಡಿಸೋರಿಗೆ ನೀವೇ ವಿಕಿ ಪಿಡಿಯಾ, ನಿಮ್ಮ ಐಡಿಯಾಗಳೆಲ್ಲಾ ತುಂಬಾನೆ ಅದ್ಭುತವಾಗಿವೆ ಎಂದು ಜನ ಹೇಳ್ತಿದ್ದಾರೆ. 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಗೊಂಬೆಯಾಗಿ ಜನಪ್ರಿಯತೆ ಗಳಿಸಿದ ನೇಹಾ ಗೌಡ, ನಂತರ ಬಿಗ್ ಬಾಸ್,  ನಮ್ಮ ಲಚ್ಚಿ ಸೀರಿಯಲ್ ಜೊತೆ ತೆಲುಗು, ತಮಿಳು ಧಾರಾವಾಹಿಯಲ್ಲೂ ನಟಿಸಿದ್ದಾರೆ. ರಾಜಾ ರಾಣಿ ಶೋ ವಿನ್ನರ್ ಕೂಡ ಹೌದು. ಆಸ್ಟ್ರೇಲಿಯಾದಲ್ಲಿ ಕೆಲಸದಲ್ಲಿದ್ದ ಚಂದನ್ ರಾಜಾ ರಾಣಿಗಾಗಿ ಆಸ್ಟ್ರೇಲಿಯಾದ ಐಟಿ ಕೆಲಸಕ್ಕೆ ಗುಡ್ ಬೈ ಹೇಳಿ ಬೆಂಗಳೂರು ಸೇರಿದ್ದರು, ನಂತರ ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ಭಾಗವಹಿಸಿದ್ದರು. ಜೊತೆಗೆ ಅಂತರಪಟ ಧಾರಾವಾಹಿಯಲ್ಲಿ ನಾಯಕನಾಗಿ ಸಹ ಗುರುತಿಸಿಕೊಂಡಿದ್ದರು ಚಂದನ್. 
 

Latest Videos

click me!