ರೀಲ್ಸ್‌ಗೆ ಕುಣಿದು ಕುಣಿದು ಹಣ ಸಂಪಾದನೆ ಮಾಡಿದ ಆಂಟಿ ಮನೆಗೆ ಬಂತು ಹೊಸ ಸ್ಕೂಟಿ!

First Published | Jul 8, 2024, 4:12 PM IST

ಡಿಫರೆಂಟ್ ಆಗಿ ರೀಲ್ಸ್‌ಗೆ ಡ್ಯಾನ್ಸ್ ಮಾಡಿ ಮನೋರಂಜನೆ ನೀಡಿರುವ ಮಂಗಳಾ ಅರುಣ್ ಹೊಸ ಸ್ಕೂಟಿ ಖರೀದಿ ಮಾಡಿದ್ದಾರೆ....

ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೈರಲ್ ಆಗುತ್ತಿರುವ ಡ್ಯಾನ್ಸ್‌ ವಿಡಿಯೋಗಳು ಮಂಗಳಾ ಅರುಣ್ ಅವರದ್ದು. 

ಬಾಲ್ಯದಿಂದ ಡ್ಯಾನ್ಸ್‌ ಇಷ್ಟ ಪಡುತ್ತಿದ್ದ ಮಂಗಳಾ ಮನೆಯಲ್ಲಿ ಕಷ್ಟ ಇದ್ದ ಕಾರಣ ಸುಮ್ಮನಾದರು. ಮದುವೆ ಆದ ಮೇಲೆ ಫ್ಯಾಮಿಲಿ ನೋಡಿಕೊಳ್ಳುವುದರಲ್ಲಿ ಸಖತ್ ಬ್ಯುಸಿಯಾಗಿಬಿಟ್ಟರು.

Tap to resize

32ವರ್ಷ ಅರುಣ್ ತಮ್ಮ 8 ವರ್ಷ ಮಗನನ್ನು ಕಳೆದುಕೊಂಡಾಗ ಡಿಪ್ರೆಶನ್‌ಗೆ ಜಾರಿದು. ಅದರಿಂದ ಹೊರ ಬರಲು ಡ್ಯಾನ್ಸ್ ಮಾಡಲು ಶುರು ಮಾಡಿದರು.

ವರ್ಷಗಳ ಕಾಲ ಶ್ರಮ ಪಟ್ಟ ಮಂಗಳಾ ಅರುಣ್‌ ತಮ್ಮ ಸ್ವಂತ ದುಡಿಮೆಯಲ್ಲಿ 38ನೇ ವಯಸ್ಸಿಗೆ ಸ್ಕೂಟಿ ಖರೀದಿಸಿದ್ದಾರೆ. ಈ ಖುಷಿಯನ್ನು ಹಂಚಿಕೊಂಡಿದ್ದಾರೆ.

ಕೆಂಪು ಬಣ್ಣದ ಹೋಂಡಾ ಆಕ್ಟಿವ್‌ ಖರೀದಿಸಿದ ಮಂಗಳಾ 'ಹೊಸ ಸ್ಕೂಟಿ ಮನೆಗೆ ಬಂದಿದೆ' ಎಂದು ಬರೆದುಕೊಂಡಿದ್ದಾರೆ. ಕಾಮೆಂಟ್ಸ್‌ಗಳಲ್ಲಿ ಶುಭಾಶಯಗಳು ಬರುತ್ತಿದೆ.

ಇನ್‌ಸ್ಟಾಗ್ರಾಂನಲ್ಲಿ ಸುಮಾರು ನಾಲ್ಕು ಲಕ್ಷ 50 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ನ ಹೊಂದಿರುವ ಮಂಗಳಾ ಅರುಣ್‌ಗೆ ಮೂವರು ಮಕ್ಕಳಿದ್ದಾರೆ. 

ಕನ್ನಡ, ಹಿಂದಿ, ಇಂಗ್ಲಿಷ್‌, ತೆಲುಗು ಮತ್ತು ತಮಿಳು ಹಾಡುಗಳಿಗೆ ಮಂಗಳಾ ಅರುಣ್ ರೀಲ್ಸ್ ಮಾಡುತ್ತಾರೆ. ಅಲ್ಲದೆ ವಿಡಿಯೋ ಟ್ರೆಂಡ್ ಆಗುತ್ತಿದ್ದಂತೆ ಸೆಲೆಬ್ರಿಟಿಗಳು ಕೂಡ ಶೇರ್ ಮಾಡಿಕೊಳ್ಳುತ್ತಾರೆ. 

Latest Videos

click me!