ಕಳೆದ ಮೂರು ತಿಂಗಳಿಂದ ಕನ್ನಡ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಾ ಬಂದಿರುವ ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಮಹಾನಟಿ (Mahanati reality show) ಇದೀಗ ಕೊನೆಯ ಹಂತ ತಲುಪಿದೆ. ರಮೇಶ್ ಅರವಿಂದ್ ಸಾರಥ್ಯದಲ್ಲಿ, ನಟಿ ಪ್ರೇಮಾ, ನಿಶ್ವಿಕಾ ನಾಯ್ಡು ಮತ್ತು ನಿರ್ದೇಶಕ ತರುಣ್ ಸುಧೀರ್ ತೀರ್ಪುಗಾರರಾಗಿ ಹಾಗೂ ಅನುಶ್ರೀ ನಿರೂಪಣೆಯಲ್ಲಿ ಈ ರಿಯಾಲಿಟಿ ಶೋ ಅದ್ಭುತವಾಗಿ ಮೂಡಿ ಬಂದಿತ್ತು.
ಮಹಾ ನಟಿ ಸೆಮಿ ಫಿನಾಲೆ ಈಗಷ್ಟೇ ಮುಗಿದಿದ್ದು, ಫಿನಾಲೆಗೆ ಕ್ಷಣಗಣನೆ ಆರಂಭವಾಗಲಿದೆ. ಈ ನಡುವೆ ಪ್ರಿಯಾಂಕ, ಗಗನ, ಆರಾಧನಾ ಭಟ್, ಶ್ವೇತಾ ಭಟ್ ಮತ್ತು ಧನ್ಯಶ್ರೀ ಫಿನಾಲೆ ಟಿಕೆಟ್ ಪಡೆದು, ಸಿಂಹಾಸನವೇರಿದ್ದು, ಗ್ರಾಮೀಣ ಪ್ರತಿಭೆಯಾದ ಬಿಂದು ಹೊನ್ನಾಳಿ ಫಿನಾಲೆ ಟಿಕೆಟ್ ಪಡೆಯದ್ದಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರಾಶರಾಗಿದ್ದಾರೆ. ಕಾಮೆಂಟ್ ಗಳ ಮೂಲಕ ತಮ್ಮ ನೋವು ತೋರಿಸಿಕೊಂಡಿದ್ದು, ಬಿಂದು ಟೀಚರ್ ಗೆ ಮೋಸ ಆಗಿದೆ ಎಂದಿದ್ದಾರೆ.
ಫಿನಾಲೆ ಟಿಕೆಟ್ ಪಡೆದ ಐದು ಜನ ಸ್ಪರ್ಧಿಗಳು ಸಹ ಇಲ್ಲಿವರೆಗೆ ಅದ್ಭುತ ಪ್ರದರ್ಶನ ನೀಡಿ, ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಿ ಫಿನಾಲೆ ಸಿಂಹಾಸನ ಏರಿದ್ದಾರೆ. ಆದರೆ ವೀಕ್ಷಕರಿಗೆ ಮಾತ್ರ ಅದ್ಭುತ ನಟಿಯಾಗಿರುವ ಬಿಂದು ಹೊನ್ನಾಳಿ ಫಿನಾಲೆ ಬಾರದಿದ್ದುದು ಬೇಸರ ತಂದಿದೆ. ಬಿಂದು ಮೋಸ್ಟ್ ಡಿಸರ್ವ್ ಕ್ಯಾಂಡಿಡೇಟ್ ಎಂದು ಹೇಳ್ತಿದ್ದಾರೆ ಜನ.
ಮೂರು ಬಾರಿ ಗೋಲ್ಡನ್ ಬಜಾರ್ ತಗೊಂಡು, ಒಂದು ಸಾರಿನು ಡೇಂಜರ್ ಝೋನ್ ಗೆ ಹೋಗದೆ ಮತ್ತೆ ವೋಟಿಂಗ್ ಅಲ್ಲಿ ಕೂಡ ಹೆಚ್ಚು ವೋಟ್ ಪಡೆದ್ರೂ, ಆದ್ರೆ ಝೀ ಅವರು ಬಿಂದು (Bindu Honnali) ಅವರಿಗೆ ಫಿನಾಲೆಗೆ ಅವಕಾಶ ಕೊಟ್ಟಿಲ್ಲ, ನಿಜವಾದ ವಿನ್ನರ್ ಬಿಂದು ಅವರು ಎಂದಿದ್ದಾರೆ. ಅಷ್ಟೇ ಅಲ್ಲದೇ ಬಿಂದು ಹೊನ್ನಾಳಿ ನಮ್ಮ ಮನಸನ್ನು ಗೆದ್ದಿದೀಯ ಅಷ್ಟು ಸಾಕು ಬಿಡಿ ಮೇಡಂ ಎಂದು ಸಮಾಧಾನ ಕೂಡ ಮಾಡಿದ್ದಾರೆ.
ಮತ್ತೊಬ್ಬರು ಕಾಮೆಂಟ್ ಮಾಡಿ ಈ ಐವರಲ್ಲಿ ಗಗನಳಿಗೆ ಬ್ಲಾಕ್‌ಬಸ್ಟರ್ ಪರ್ಫಾರ್ಮೆನ್ಸ್ ಬಂದಿಲ್ಲ. ಆದ್ರೆ ಬಿಂದು ಹೊನ್ನಾಳಿಗೆ 3 ಸಲ ಬಂದಿದೆ ಹಾಗು ಅಭಿನಯದಲ್ಲಿ ಗಗನಳಿಗಿಂತ ಬಿಂದು ಹೊನ್ನಾಳಿನೇ ಒಂದು ಕೈ ಮೇಲೆ ಅಂತ ನನ್ನ ಅನಿಸಿಕೆ. ಮಹಾನಟಿ ಕಾರ್ಯಕ್ರಮ ಅಭಿನಯಕ್ಕೆ ಪ್ರಾಮುಖ್ಯತೆ ಕೋಡೋದಿದ್ರೆ ಬಿಂದೂಳನ್ನ ಆಯ್ಕೆ ಮಾಡ್ಬೇಕಿತ್ತು ಎಂದಿದ್ದಾರೆ.
ಇನ್ನೊಬ್ಬರು ಮೋಸ ಇದು ಎಲ್ಲ ಶ್ರೀಮಂತರಿಗೆ ಮಾತ್ರ ಸೆಲೆಕ್ಟ್ ಮಾಡ್ತಾರೆ. ಪಾಪ ಬಿಂದು ಹೊನ್ನಳಿ ಅವರನ್ನ ಯಾಕೆ ಸೆಲೆಕ್ಟ್ ಮಾಡಿಲ್ಲ. ಮುಖ ನೋಡಿ ಸೆಲೆಕ್ಟ್ ಮಾಡಬೇಡಿ. ಅಭಿನಯ ನೋಡಿ ಇದು ಮೋಸ ಗುರು ಅಂದ್ರೆ ಇನ್ನೊಬ್ಬರು ಇದು ಮ್ಯಾಚ್ ಫಿಕ್ಸಿಂಗ್. ಅಲ್ಲದೇ ಬಿಂದು ಮತ್ತು ಚಂದನ ಗೌಡ ಇಬ್ಬರು ಅಮೋಘ ಪ್ರತಿಭೆಯುಳ್ಳವರು. ಐದು ಮಹಾನಟಿಯರಲ್ಲಿ ನೀವು ಇಬ್ಬರು ನಮ್ಮ ಪ್ರಕಾರ ಇದಿರಾ. ನಿಮ್ಮ ಪ್ರತಿಭೆಯನ್ನ ಮೆಚ್ಚಿದಂತಹ ಜನಸ್ತೋಮ ನಿಮ್ಮ ಬೆನ್ನ ಹಿಂದೆ ಇದೆ. ನಿಮಿಬ್ಬರಿಗೂ ಮುಂದೊಂದು ದಿನ ದೊಡ್ಡ ವೇದಿಕೆಯೊಂದು ಕೈ ಬೀಸಿ ಕರೆಯುತ್ತೆ ಎಂದು ಹಾರೈಸಿದ್ದಾರೆ.
ಇನ್ನೂ ಕೆಲವರು ಕಾಮೆಂಟ್ ಮಾಡಿ ವಾಹಿನಿ ಕೇವಲ ಹಣಕ್ಕೆ ಪ್ರಾಮುಖ್ಯತೆ ಕೊಟ್ಟಿದೆ. ಹಣ ಇವತ್ತು ಇರುತ್ತೆ ನಾಳೆ ಹೋಗುತ್ತೆ. ಆದರೆ ವಾಹಿನಿ ಟಿ ಆರ್ ಪಿ(TRP) ಕಾರಣಕ್ಕೆ ಹಣಕ್ಕೆ ಬೆಲೆ ಕೊಡುವ ಬದಲು ಬಿಂದು ಪ್ರತಿಭೆಗೆ ಬೆಲೆ ಕೊಡ ಬೇಕಿತ್ತು. ಅವಳ ಪ್ರತಿಭೆಯನ್ನು ಮೆಚ್ಚಿದಂತಹ ಕರ್ನಾಟಕದ ಜನಸ್ತೋಮವೇ ಅವಳ ಬೆಂಬಲವಾಗಿ ನಿಂತಿದೆ. ಒಬ್ಬ ನಟಿಗೆ ಇದಕ್ಕಿಂತ ಇನ್ನೇನು ಬೇಕು. ಈ ಕಲಾ ಕ್ಷೇತ್ರದಲ್ಲೂ ರಾಜಕಾರಣ, ಭ್ರಷ್ಟಾಚಾರ ಎದ್ದು ಕಾಣುತ್ತದೆ ಎಂದು ವಾಹಿನಿ ಮೇಲೆಯೇ ಕೋಪ ತೋಡಿ ಕೊಂಡಿದ್ದಾರೆ.
ಜನರನ್ನ ಸೆಳೆಯೋಕೆ ಮತ್ತು ಟಿಆರ್ ಪಿ ಹೆಚ್ಚಿಸಿಕೊಳ್ಳೋಕೆ ಚಾನೆಲ್ ಗಳು ಗ್ರಾಮೀಣ ಜನರನ್ನು ಮತ್ತು ಗ್ರಾಮೀಣ ವಿಷಯಗಳನ್ನ ಆಯ್ಕೆ ಮಾಡಿಕೊಳ್ಳುತ್ತೆ. ಆದ್ರೆ ಕೊನೆಗೆ ಫಿನಾಲೆ ಬರುವಾಗ ಬೇರೆ ವ್ಯಕ್ತಿಗಳನ್ನ ಆಯ್ಕೆ ಮಾಡ್ತಾರೆ. ಫಿನಾಲೆಗೆ ಆಯ್ಕೆ ಮಾಡಿದ್ರೂ ಸಹ, ಅವರನ್ನ ವಿನ್ನರ್ ಮಾಡೋದೇ ಇಲ್ಲ. ಇದೇ ಆಗಿರೋದು ಬಿಂದು ಜೊತೆಗೂ ಎಂದು ಇನ್ನೊಬ್ರು ಕಾಮೆಂಟ್ ಮಾಡಿದ್ದಾರೆ.