ಕನ್ನಡ ಕಿರುತೆರೆ ನಾಗಿಣಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಕೊಂಚ ಸೈಲೆಂಟ್ ಆಗಿಬಿಟ್ಟಿದ್ದಾರೆ. ಸುದ್ದಿಗಳು ಕಡಿಮೆ ಆಗುತ್ತಿದೆ.
ಸದ್ಯ ಯಾವ ಪ್ರಾಜೆಕ್ಟ್‌ನಲ್ಲೂ ಕಾಣಿಸಿಕೊಳ್ಳದ ದೀಪಿಕಾ ಪತಿ ಜೊತೆ ಪ್ರವಾಸದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಡೇಟ್ ಮಾಡುತ್ತಾರೆ.
ಕೆಲವು ದಿನಗಳಿಂದ ದೀಪಿಕಾ ದಾಸ್ ಬಿಕಿನಿ ಫೋಟೋ ಸಖತ್ ವೈರಲ್ ಆಗುತ್ತಿದೆ. ಪರ್ಪಲ್ ಬಣ್ಣ ಬಿಕಿನಿ ಸೂಟ್‌ನಲ್ಲಿ ಕಾಣಿಸಿರುವ ನಟಿ ಕಾಲೆಳೆದಿದ್ದಾರೆ ನೆಟ್ಟಿಗರು.
ನೀವು ಇರೋದೇ ಕಪ್ಪಾ? ಅಥವಾ ಮೇಕಪ್ ಮಾಡಿ ಫೇರ್ ಆಗಿ ಕಾಣಿಸುತ್ತಿರುವುದಾ? ಹೀಗೆ ದೀಪಿಕಾ ದಾಸ್ ಮೈ ಬಣ್ಣದ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡದ ನಟಿಯರು/ ಸ್ಯಾಂಡಲ್‌ವುಡ್ ನಟಿಯರು ಎನ್ನುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋ ಅಪ್ಲೋಡ್ ಆಗಿದ್ದು, ಈಗ ವೈರಲ್ ಆಗುತ್ತಿದೆ.
ಇನ್ನು ಮಾರ್ಚ್ 1ರಂದು ದೀಪಿಕಾ ದಾಸ್ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡಿದ್ದಾರೆ. ಬೀಚ್ ಬಳಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡರು, ಸಿನಿ ಸ್ನೇಹಿತರಿಗೆ ಆರತಕ್ಷತೆ ಹಮ್ಮಿಕೊಂಡಿದ್ದರು.