ಕಾವೇರಿಯಿಂದ ಸತ್ಯ ಬಾಯಿ ಬಿಡ್ಸೋಕೆ ಲಕ್ಷ್ಮೀ- ಗಂಗಾ ಮಾಡಿರೋ ಮಾಸ್ಟರ್ ಪ್ಲ್ಯಾನ್ ಗೆ ಬಹುಪರಾಕ್ ಎಂದ ವೀಕ್ಷಕರು

First Published | Sep 11, 2024, 10:44 AM IST

ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಇಲ್ಲಿವರೆಗೂ ಥ್ರಿಲ್ಲಿಂಗ್ ಎಪಿಸೋಡ್ ಗಳು ಪ್ರಸಾರವಾಗುತ್ತಿತ್ತು, ಇದೀಗ ಹಾರರ್ ಸ್ಟೋರಿ ಹಿಂದಿರುವ ಸತ್ಯ ರಿವೀಲ್ ಆಗಿದ್ದು, ಲಕ್ಷ್ಮೀ-ಗಂಗಾಳಿಗೆ ವೀಕ್ಷಕರು ಬಹುಪರಾಕ್ ಎಂದಿದ್ದಾರೆ. 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರವಾಹಿ ತನ್ನ ಥ್ರಿಲ್ಲರ್ ಕಥಾ ಹಂದರದ ಮೂಲಕ ವೀಕ್ಷಕರನ್ನು ದೊಡ್ಡ ಮಟ್ಟಿಗೆ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಕೀರ್ತಿಯಾಗಿ ಬದಲಾಗಿರುವ ಲಕ್ಷ್ಮೀ, ಆ ಆವೇಷ, ಕೀರ್ತಿ ದೆವ್ವವಾಗಿ ಕಾವೇರಿಯನ್ನು ಕಾಡುತ್ತಿದ್ದಾಳೆಯೋ ಎಂಬ ಭ್ರಮೆ ವೀಕ್ಷಕರನ್ನು ಸಹ ಕಾಡುವಂತೆ ಮಾಡಿತ್ತು ಲಕ್ಷ್ಮೀ ಬಾರಮ್ಮ ಧಾರಾವಾಹಿ. 
 

ಲಕ್ಷ್ಮೀ ಮೈ ಮೇಲೆ ಬಂದಿರುವ ಕೀರ್ತಿಯ ದೆವ್ವ ಇನ್ನೇನು ಕಾವೇರಿ ಬಾಯಿಯಿಂದ ಎಲ್ಲಾ ಸತ್ಯವನ್ನು ಬಿಡಿಸುತ್ತೆ ಎನ್ನುತ್ತಿರುವಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಈ ಹಾರರ್ ಸ್ಟೋರಿ ಹಿಂದಿನ ರುವಾರಿ ಲಕ್ಷ್ಮೀ ಮತ್ತು ಗಂಗಕ್ಕಾ (Lakshmi and Gangakka) ಅನ್ನೋದು ತಿಳಿದು ಬಂದಿದೆ. ಇದೆಲ್ಲವೂ ಕಾವೇರಿಯಿಂದ ಸತ್ಯ ಏನು ಅಂತ ತಿಳಿದುಕೊಳ್ಳೋದಕ್ಕೆ ಮಾಡಿರೋ ಪ್ಲ್ಯಾನ್. 
 

Tap to resize

ಲಕ್ಷ್ಮೀ ಮತ್ತು ಗಂಗಕ್ಕಾ ಮಾಡಿರೋ ಈ ಥ್ರಿಲ್ಲರ್ ನಾಟಕಕ್ಕೆ ವೀಕ್ಷಕರು ಬಹುಪರಾಕ್ ಎಂದಿದ್ದು, ಸೂಪರ್ ಡ್ರಾಮಾ, ಲಕ್ಷ್ಮೀ ನಟನೆಯಂತೂ ಸೂಪರ್ ಡೂಪರ್, ಲಕ್ಷ್ಮೀ ರಾಕ್, ಕಾವೇರಿ ಶಾಕ್ ಎಂದು ಕಾಮೆಂಟ್ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ. 
 

ಅಷ್ಟೇ ಅಲ್ಲ ವೀಕ್ಷಕರಿಗೆ ಬೇಜಾರೂ ಕೂಡ ಇದೆ. ಯಾಕ್ ಗೊತ್ತಾ? ಇಷ್ಟು ಬೇಗಾ ಇದು ನಾಟಕ ಅಂತ ಗೊತ್ತಾಗ್ಬಾರ್ದಿತ್ತು ಅಂತಿದ್ದಾರೆ ಜನ. ಕಾವೇರಿ ಎಲ್ಲಾ ಸತ್ಯವನ್ನು ಬಾಯಿ ಬಿಟ್ಟ ಮೇಲೆ ಇದು ನಾಟಕ ಅಂತ ನಮಗೂ ಗೊತ್ತಾಗಬೇಕಿತ್ತು. ಅದಕ್ಕಿಂತ ಮೊದ್ಲು ನಾಟಕ ಅಂತ ಯಾಕ್ ಹೇಳ್ಬಿಟ್ರಿ ಅಂತಿದ್ದಾರೆ. 
 

ಜೊತೆಗೆ ಈಗ ಪದೇ ಪದೇ ಲಕ್ಷ್ಮೀ ಮತ್ತು ಗಂಗಾ ಇಷ್ಟೊಂದು ಓಪನ್ ಆಗಿ ತಮ್ಮ ಪ್ಲ್ಯಾನ್ ಬಗ್ಗೆ ಮಾತನಾಡ್ತಿರೋದನ್ನ ನೋಡಿದ್ರೆ, ಸದ್ಯದಲ್ಲೇ ಇದು ಯಾರಿಗಾದ್ರೂ ಗೊತ್ತಾಗುತ್ತೆ, ಮತ್ತೆ ಕಥೆ ಮೊದಲಿನ ರೀತಿ ಕಾವೇರಿ ನಾಟಕ ಮಾಡ್ತಾ ಮುಂದುವರೆದುಕೊಂಡು ಹೋಗುತ್ತೆ, ಇಲ್ಲ, ಭಾನುಮತಿ ಮತ್ತೆ ಬರ್ತಾಳೆ ಅಂತಿದ್ದಾರೆ ವೀಕ್ಷಕರು. 
 

ಇನ್ನೂ ಕೆಲವರು ಕಾಮೆಂಟ್ ಮಾಡಿ ಖಂಡಿತಾ ಯಾರಿಗದ್ರು ಗೊತ್ತಾಗುತ್ತೆ. ಸುಪ್ರೀತಾ ಅವರಿಗೆ ಗೊತ್ತಾದ್ರೆ ಓಕೆ, ಆದರೆ ಬೇರೆಯವರಿಗೆ ಗೊತ್ತಾದ್ರೆ ಸಮಸ್ಯೆ ಗ್ಯಾರಂಟಿ ಎಂದರೆ, ಇನ್ನೂ ಕೆಲವರು ಖಂಡಿತಾ ಕಾವೇರಿಗೆ ಇದೆಲ್ಲಾ ಗೊತ್ತಾಗುತ್ತೆ ಎಂದಿದ್ದಾರೆ. ಅಷ್ಟೇ ಅಲ್ಲ ಈ ತರ ಆದ್ರೆ ಸತ್ಯ ಗೊತ್ತಾಗುತ್ತೆ ಅಷ್ಟೇ ಎಂದು ಸಹ ಹೆದರಿದ್ದಾರೆ. 
 

ಲಕ್ಷ್ಮೀ ಬಾರಮ್ಮ ಧಾರವಾಹಿಯ ಕಥೆ ಬಗ್ಗೆ ಹೇಳೊದಾದ್ರೆ, ತನ್ನ ದಾರಿಗೆ ಮುಳುವಾಗಿದ್ದ ಕೀರ್ತಿಯನ್ನು ಕಾವೇರಿ ಬೆಟ್ಟದಿಂದ ನೂಕಿದ್ದಾರೆ. ಕೀರ್ತಿ ಹೆಣ ಸಿಕ್ಕ ನಂತ್ರ ಅಬ್ಬಾ, ಒಂದು ಕಾಟ ದೂರಾಯ್ತಲ್ಲ ಎಂದು ಖುಷಿ ಪಟ್ಟಿದ್ದಾಳೆ. ಲಕ್ಷ್ಮೀ ಪದೇ ಪದೇ ಕೀರ್ತಿ ಬಗ್ಗೆ ಕೇಳೋದನ್ನ ಸಹಿಸಿಕೊಳ್ಳಲಾಗದೆ ಲಕ್ಷ್ಮೀಯನ್ನು ಸಹ ಮುಗಿಸೋ ಪ್ಲ್ಯಾನ್ ಮಾಡಿದ್ಲು ಕಾವೇರಿ. ಇದೀಗ ಅರ್ಧ ಸತ್ಯ ತಿಳಿದಿರೋ ಲಕ್ಷ್ಮೀ ಕಾವೇರಿಯಿಂದ ಕೀರ್ತಿ ಕುರಿತಾದ ಪೂರ್ತಿ ಸತ್ಯ ಬಾಯಿ ಬಿಡಿಸಲು ಕೀರ್ತಿ ದೆವ್ವ ಮೈಮೇಲೆ ಬಂದಿರೋ ತರ ನಾಟಕ ಮಾಡ್ತಿದ್ದಾಳೆ. ಸದ್ಯದಲ್ಲಿ ಎಲ್ಲಾ ಸತ್ಯ ರಿವೀಲ್ ಆಗುತ್ತಾ? ಅಥವಾ ಇದೆಲ್ಲಾ ಲಕ್ಷ್ಮೀಗೆ ಮುಳುವಾಗುತ್ತಾ ಕಾದು ನೋಡಬೇಕು. 
 

Latest Videos

click me!