ಮುದ್ದಿನ ಪತ್ನಿ ಪೂರ್ಣಿಗೆ ಅವಿಯಿಂದ ಸರ್ಪ್ರೈಸ್…. ಆದಷ್ಟು ಬೇಗ ಪೂರ್ಣಿ ತಾಯಿಯಾಗಲಿ ಹಾರೈಸ್ತಿದ್ದಾರೆ ವೀಕ್ಷಕರು

Published : Sep 29, 2024, 04:44 PM ISTUpdated : Sep 30, 2024, 08:50 AM IST

ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಮನೆಯವರೆಲ್ಲರಿಗೂ ಒಳ್ಳೆಯದನ್ನೇ ಬಯಸುವ ಹುಡುಗಿ ಪೂರ್ಣಿಗೆ ಪ್ರೀತಿಯ ಗಂಡ ಅವಿನಾಶ್ ಸರ್ಪೈಸ್ ನೀಡಿದ್ದು ಪೂರ್ಣಿಗೆ ಆದಷ್ಟು ಬೇಗ ಮಗುವಾಗಲಿ ಎಂದು ಹಾರೈಸುತ್ತಿದ್ದಾರೆ ವೀಕ್ಷಕರು.   

PREV
16
ಮುದ್ದಿನ ಪತ್ನಿ ಪೂರ್ಣಿಗೆ ಅವಿಯಿಂದ ಸರ್ಪ್ರೈಸ್…. ಆದಷ್ಟು ಬೇಗ ಪೂರ್ಣಿ ತಾಯಿಯಾಗಲಿ ಹಾರೈಸ್ತಿದ್ದಾರೆ ವೀಕ್ಷಕರು

ಶ್ರೀರಸ್ತು ಶುಭಮಸ್ತು (Srirastu Shubamastu) ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಗಳು ಒಂದೊಂದು ಕಥೆಯನ್ನು ಹೇಳುವ ಮೂಲಕ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ತುಳಸಿ ಮಾಧವನ ಕಥೆ ಒಂದು ಕಡೆಯಾದ್ರೆ, ಶಾರ್ವರಿ, ಅಭಿ, ಅವಿ, ಸಮರ್ಥ್, ಪೂರ್ಣಿ ಎಲ್ಲರದ್ದೂ ಒಂದೊಂದು ಕಥೆ. 
 

26

ಅವುಗಳಲ್ಲಿ ಒಂದು ಮುದ್ದಾದ ಕ್ಯಾರೆಕ್ಟರ್ ಪೂರ್ಣಿಯದ್ದು, ಅನಾಥೆಯಾಗಿ ಬೆಳೆದು, ಮಾಧವನ ಮಗ ಅವಿನಾಶ್ ಕೈ ಹಿಡಿದ ಪೂರ್ಣಿಗೆ ಆ ಮನೆಯ ಜನರೇ ಸರ್ವಸ್ವ. ಮಾವ ಅಂದ್ರೆ ತಂದೆಗೆ ಸಮ. ಸದಾ ಎಲ್ಲರಿಗೂ ಒಳ್ಳೆಯದನ್ನೆ ಬಯಸುವ ಪೂರ್ಣಿಗೆ, ಶಾರ್ವರಿಯ ಕುತಂತ್ರದಿಂದಾಗಿ ಗರ್ಭಪಾತವಾಗಿತ್ತು. 
 

36

ಮೊದಲ ಬಾರಿ ಪೂರ್ಣಿ ಗರ್ಭಿಣಿಯಾಗಿದ್ದಾಗ ಪೂರ್ತಿ ಮನೆ ಸಂಭ್ರಮ ಪಟ್ಟಿತ್ತು, ಪೂರ್ಣಿ ಸೀಮಂತವನ್ನು ಸಹ ಅದ್ಧೂರಿಯಾಗಿ ಮಾಡಲಾಗಿತ್ತು, ಆದರೆ ನಂತರ ಆಕೆಗೆ ಅಬಾರ್ಶನ್ ಆಗಿದ್ದು, ಆದಾದ ನಂತರ ಮತ್ತೆ ಪೂರ್ಣಿ ಗರ್ಭಿಣಿಯಾಗಿದ್ಲು, ಆವಾಗ ಶಾರ್ವರಿ ಔಷಧಿಯನ್ನು ಬದಲಾಯಿಸಿ, ಮಗು ಆಗದಂತೆ ತದೆದಿದ್ದಳು. 
 

46

ಇದೀಗ ಪ್ರೊಮೋದಲ್ಲಿ ತೋರಿಸಿದಂತೆ ಪೂರ್ಣಿಗೆ ಅವಿ ಸರ್ಪ್ರೈಸ್ ನೀಡಿದ್ದು, ತನ್ನ ಮುದ್ದಿನ ಹೆಂಡ್ತಿಗಾಗಿ ಮನೆಯಲ್ಲಿಯೇ ತುಂಬಾನೆ ಕ್ಯೂಟ್ ಆಗಿ ಕ್ಯಾಂಡಲ್ ಲೈಟ್ ಡಿನ್ನರ್ ಅರೇಂಜ್ ಮಾಡಿದ್ದ. ಇದರಿಂದ ಪೂರ್ಣಿ ತುಂಬಾನೆ ಖುಷಿಯಾಗಿದ್ದಾಳೆ. 
 

56

ಪೂರ್ಣಿ ಮುಖದಲ್ಲಿನ ಖುಷಿ ನೋಡಿ ವೀಕ್ಷಕರೂ ಸಹ ಸಖತ್ ಖುಷಿಯಾಗಿದ್ದಾರೆ. ಪೂರ್ಣಿಗೆ ಪಾಪು ಆಗಿದ್ರೆ ತುಂಬಾ ಚನ್ನಾಗಿರೋದು ಅಲ್ವಾ ಪೂರ್ಣಿ ಅವಿ ಸೂಪರ್ ಜೋಡಿ ಎಂದಿದ್ದಾರೆ ವೀಕ್ಷಕರು. ಅಷ್ಟೇ ಅಲ್ಲ ಪೂರ್ಣಿ ಅವಿ ತುಂಬಾನೇ ಮುದ್ದಾದ ಜೋಡಿ ಎಂದು ಸಹ ಹೇಳಿದ್ದಾರೆ. 
 

66

ಸೀರಿಯಲ್ ಆರಂಭವಾದಾಗಿನಿಂದಲೂ ಪೂರ್ಣಿ ಮತ್ತು ಅವಿ ಜೋಡಿಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇಬ್ಬರದೂ ಮೃದು ಮನಸು, ಎಲ್ಲರಿಗೂ ಒಳ್ಳೆಯದನ್ನೆ ಬಯಸುವುದು ಮೃದು ಹೃದಯದ ಜೋಡಿ ಇವರು. ಆರಂಭದಲ್ಲಿ ಅವಿಗೆ ಮಾಧವನನ್ನು ಕಂಡ್ರೆ ಆಗ್ತಿರಲಿಲ್ಲ ಅನ್ನೋದು ಬಿಟ್ರೆ ಅವಿ ಅಪ್ಪಟ ಚಿನ್ನದಂತಹ ಹುಡುಗ. ಹಾಗಾಗಿಯೇ ಈ ಮುದ್ದಾದ ಜೋಡಿಯನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories