ಹೂ…ಅರಳುವ ಸದ್ದನು ನಿನ್ನ ನಗೆಯಲಿ ಕೇಳಬಲ್ಲೆ ಎಂದ ಅನುಶ್ರೀ…. ಅಭಿಮಾನಿಗಳಿಗೆ ಶುರುವಾಗಿದೆ ಅನುಮಾನ

Published : Sep 28, 2024, 05:37 PM ISTUpdated : Sep 28, 2024, 05:51 PM IST

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ವಿದೇಶಕ್ಕೆ ಹಾರಿದ್ದು, ಅಲ್ಲಿನ ಒಂದಷ್ಟು ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.   

PREV
16
ಹೂ…ಅರಳುವ ಸದ್ದನು ನಿನ್ನ ನಗೆಯಲಿ ಕೇಳಬಲ್ಲೆ ಎಂದ ಅನುಶ್ರೀ…. ಅಭಿಮಾನಿಗಳಿಗೆ ಶುರುವಾಗಿದೆ ಅನುಮಾನ

ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ (Anushree) ಝೀ ಕನ್ನಡದ ಮನೆ ಮಗಳು ಅಂತಾನೆ ಹೇಳಬಹುದು. ಹಲವಾರು ವರ್ಷಗಳಿಂದ ಅನುಶ್ರೀ ಝೀ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಅದು ಸರಿಗಮಪ, ಮಹಾನಟಿ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಎಲ್ಲಾ ರಿಯಾಲಿಟಿ ಶೋಗಳಿಗೂ, ಕಾರ್ಯಕ್ರಮಗಳ ನಿರೂಪಣೆಗಳಿಗೂ ಪಟ ಪಟಾಂತ ಮಾತನಾಡಿ ಜನಮನ ಗೆಲ್ಲುವ ಅನುಶ್ರೀ ಇದ್ರೇನೆ ಶೋಭೆ. 
 

26

ಸದ್ಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance) ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಹಾಗೂ ಕಾಮಿಡಿ ಕಿಲಾಡಿಗಳು ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಟಿವಿಯಲ್ಲಿ ಕಾಣಿಸುವ ಝೀಕನ್ನಡದ ಪ್ರೊಮೋಗಳಲ್ಲೆಲ್ಲಾ ಅನುಶ್ರೀ ದಿನನಿತ್ಯ ಕಾಣಿಸಿಕೊಳ್ಳುತ್ತಲೇ ಇದ್ದಾರೆ, ಆದರೆ ಅನುಶ್ರೀ ಮಾತ್ರ ದೂರದೇಶದಲ್ಲಿ ಎಂಜಾಯ್ ಮಾಡ್ತಿರೋ ಫೋಟೊಗಳನ್ನು ಶೇರ್ ಮಾಡಿದ್ದಾರೆ. 
 

36

ಹೌದು ಅನುಶ್ರೀಯವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಒಂದಿಷ್ಟು ಫೊಟೊಗಳನ್ನು ಅಪ್ ಲೋಡ್ ಮಾಡಿದ್ದು, ಯುಎಸ್’ಎ ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಹಾಗಾಗಿ ಅವರು ಸದ್ಯ ಯುಎಸ್’ಎ ಹಾರಿದ್ದಾರೆ ಅನ್ನೋದು ಗೊತ್ತಾಗುತ್ತೆ. ಆದರೆ ಇದು ಈವಾಗಿನ ಫೋಟೊನ ಅಥವಾ ಹಳೆಯ ಫೋಟೊಗಳನ್ನು ಶೇರ್ ಮಾಡಿದ್ದಾರೋ ಗೊತ್ತಿಲ್ಲ. 
 

46

ಬಿಳಿ ಬಣ್ಣದ ಪೋಲ್ಕಾ ಡಾಟ್ ಡ್ರೆಸ್ ಧರಿಸಿರುವ ಅನುಶ್ರೀ, ಅದಕ್ಕೆ ಮ್ಯಾಚ್ ಆಗುವ ವೈಟ್ ಶೂ, ವೈಟ್ ಬ್ಯಾಗ್, ವೈಟ್ ವಾಚ್ ಧರಿಸಿದ್ದು, ತುಂಬಾನೆ ಸಿಂಪಲ್ ಆಗಿ ಕಾಣಿಸಿಕೊಂಡಿದ್ದು, ಯುಎಸ್’ಎ ಯ ವಿವಿಧ ಪ್ರವಾಸಿ ತಾಣಗಳಲ್ಲಿ ನಿಂತು ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. 
 

56

ಅನುಶ್ರೀ ತಮ್ಮ ಫೋಟೊಗಳ ಜೊತೆಗೆ ಹೂ…ಅರಳುವ ಸದ್ದನು…ನಿನ್ನ ನಗೆಯಲಿ ಕೇಳಬಲ್ಲೆ ಎಂದು ಕ್ಯಾಪ್ಶನ್ ಹಾಕಿದ್ದು, ಫೋಟೊಗಳಲ್ಲಿ ಸಹ ಅನುಶ್ರೀ ಸುಂದರವಾಗಿ ಹೂನಗು ಬೀರೋದನ್ನು ಕಾಣಬಹುದು. ಹಾಗಾಗಿ ವೀಕ್ಷಕರಿಗೂ ಅನುಮಾನ ಮೂಡಿದ್ದು, ಯಾರ ನಗುವನ್ನ ಕೇಳ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. 
 

66

ಹೇಳಿ ಕೇಳಿ ಅನುಶ್ರೀಗೆ ಹೆಚ್ಚಾಗಿ ಜನ ಕೇಳೋ ಪ್ರಶ್ನೆ ಮೇಡಂ ಮದ್ವೆ ಯಾವಾಗ? ಇಷ್ಟು ವರ್ಷ ಆದ್ರೂ ಯಾಕೆ ಮದ್ವೆ ಆಗಿಲ್ಲ ಅಂತ. ಇದೀಗ ಅನುಶ್ರೀ ಯುಎಸ್’ಎ ಗೆ ತೆರಳಿದ್ದು, ಫೋಟೊದಲ್ಲಿ ಒಬ್ರೇ ಕಾಣಿಸಿಕೊಂಡಿದ್ದು ನೋಡಿ ಅನುಮಾನ ಶುರುವಾಗಿದೆ. ಇನ್ನು ಹೆಚ್ಚಿನ ಅಭಿಮಾನಿಗಳು ಅನುಶ್ರೀ ನಗುವಿಗೆ ಮನಸೋತಿದ್ದು, ಯಾವಾಗ್ಲೂ ನಗುತ್ತಲೇ ಇರಿ,  ನೀವು ನನ್ನ ಕ್ರಶ್ ಅನುಶ್ರೀ ಎಂದು ಹೇಳ್ತಿದ್ದಾರೆ. 

Read more Photos on
click me!

Recommended Stories