ಜೀ ಕನ್ನಡದ ಸೂಪರ್ ಹಿಟ್ ಧಾರಾವಾಹಿ ಕರ್ಣ. ಈ ಕರ್ಣ ಸೀರಿಯಲ್ ನಲ್ಲಿ ಪ್ರತಿಯೊಂದು ಪಾತ್ರಗಳನ್ನು ಸಹ ಜನ ಇಷ್ಟ ಪಡುತ್ತಾರೆ. ಈ ಧಾರಾವಾಹಿಯಲ್ಲಿ ಕರ್ಣ-ನಿಧಿ, ಕರ್ಣ -ನಿತ್ಯ ಜೋಡಿಯ ಕುರಿತು ಯಾವಾಗ್ಲೂ ಪ್ರೇಕ್ಷಕರ ವಾರ್ ನಡೆಯುತ್ತಲೇ ಇರುತ್ತೆ. ಇದೀಗ ನಿತ್ಯಾ ನಟನೆ ಬೆಸ್ಟ್ ಎನ್ನುತ್ತಿದ್ದಾರೆ ಜನ.
ಜೀ ಕನ್ನಡ ವಾಹಿನಿಯಲ್ಲಿ (zee kannada) ಪ್ರಸಾರವಾಗಿ ಇಂದು ಕನ್ನಡಿಗರ ಮನಸ್ಸು ಮುಟ್ಟಿರುವ, ಅತಿ ಹೆಚ್ಚು ರೇಟಿಂಗ್ ಪಡೆಯುವ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿರುವ ಧಾರಾವಾಹಿ ಕರ್ಣ. ಈ ಧಾರಾವಾಹಿಯ ಪಾತ್ರಗಳ ಬಗ್ಗೆ ಕೂಡ ಜನರು ತುಂಬಾನೆ ಕನ್ಸರ್ ಆಗಿದ್ದಾರೆ. ಅದರಲ್ಲೂ ನಿತ್ಯಾ ಮತ್ತು ನಿಧಿ ಬಗ್ಗೆಯಂತೂ ಕಾಮೆಂಟ್ ಸೆಕ್ಷನ್ ತುಂಬಿದೆ.
27
ಯಾವ ಜೋಡಿ ಬೆಸ್ಟ್?
ಇಲ್ಲಿವರೆಗೂ ಕರ್ಣ- ನಿಧಿ (karna and nidhi) ಸೂಪರ್ ಎಂದು ಒಂದು ಸೆಟ್ ಜನರು ಹೇಳುತ್ತಿದ್ದರೆ, ಇನ್ನೊಂದಿಷ್ಟು ಜನರು ಕರ್ಣ- ನಿತ್ಯಾ ಜೋಡಿ ಸೂಪರ್ ಎನ್ನುತ್ತಾರೆ. ಒಬ್ಬರು ನಿಧಿ ಮತ್ತು ಕರ್ಣನೇ ಮದುವೆಯಾಗೋದು ಅಂದ್ರೆ, ಇನ್ನೂ ಕೆಲವರು ಸಾಧ್ಯವೇ ಇಲ್ಲ ಕರ್ಣ ಮತ್ತು ನಿತ್ಯಾ ಮದುವೆಯಾಗುತ್ತಾರೆ ಎನ್ನುತ್ತಿದ್ದಾರೆ. ಇದೀಗ ಅಕ್ಕ ತಂಗಿಯ ಕುರಿತು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದಾರೆ ಜನ.
37
ಕರ್ಣನ ವಿರುದ್ಧ ಕಿಡಿ ಕಾರಿದ ನಿತ್ಯ
ಹೌದು ಇತ್ತೀಚಿನ ಪ್ರಸಾರವಾದ ಪ್ರೊಮೋದಲ್ಲಿ ನಿಧಿ-ಕರ್ಣ ಕಾಡಿನಲ್ಲಿ ಕಳೆದು ಹೋದ ಹಿನ್ನೆಲೆಯಲ್ಲಿ ಅಜ್ಜಿ ಶಾಂತಿಗೆ ಹೃದಾಯಾಘಾತವಾದ ಕಾರಣ, ನಿತ್ಯಾ ಸಿಟ್ಟಿನಿಂದ ಕರ್ಣನಿಗೆ ಬಯ್ಯುತ್ತಾಳೆ. ನಿಧಿಯನ್ನು ಕರೆದುಕೊಂಡು ಬರಲು ಹೋಗಿದ್ದವರು ಏನು ಮಾಡಿದ್ರಿ, ಇವತ್ತಿನ ದಿನ ಸರಿ ಇಲ್ಲ ಅಂದ್ರುನೂ ಏನು ಮಾಡಿದ್ರಿ ನೀವು ಎನ್ನುತ್ತಾಳೆ. ನೀವು ಮಾಡುವ ಸಾವಿರ ಒಳ್ಳೆಯ ಕೆಲಸಕ್ಕಿಂತ, ಒಂದು ತಪ್ಪು ಜೀವನವನ್ನೇ ತಲೆ ಕೆಳಗಾಗಿ ಮಾಡಿ ಬಿಡುತ್ತೆ ಎನ್ನುತ್ತಾಳೆ.
ಕರ್ಣ ಏನು ಆಯ್ತು ಎನ್ನುವುದನ್ನು ಹೇಳೋದಕ್ಕೂ ಬಿಡದೆ ನಿಧಿ ಮೇಲಿನ ಕಾಳಜಿಯಿಂದ ಕರ್ಣನಿಗೆ ತರಾಟೆಗೆ ತೆಗೆದುಕೊಳ್ಳುತ್ತಾಳೆ, ನಿತ್ಯಾ. ನಿಧಿ ಅದನ್ನು ತಡೆದು, ಸುಮ್ ಸುಮ್ನೆ ಕರ್ಣ ಸರ್ ಗೆ ಬೈಬೇಡ, ಅಲ್ಲಿ ಏನಾಯ್ತು ಅನ್ನೋದನ್ನು ಮೊದಲು ತಿಳಿ ಎಂದ್ರು ಕೇಳದ ನಿತ್ಯಾ, ನಿಧಿ ಮೇಲೂ ಕೋಪ ಮಾಡಿ, ಈವಾಗ ಅಕ್ಕನಿಗೂ ಎದುರು ಮಾತನಾಡುವಷ್ಟು ಬೆಳೆದಿದ್ದಿ ಅಲ್ವಾ ಎನ್ನುತ್ತಾಳೆ.
57
ನಿತ್ಯಾ- ನಿಧಿ ಪರ ವಿರೋಧ ವಾರ್
ಸೀರಿಯಲ್ ನಲ್ಲಿ ಈ ಸುದ್ದಿ ಸದ್ದು ಮಾಡುತ್ತಿದ್ದರೆ, ಕಾಮೆಂಟ್ ಸೆಕ್ಷನಲ್ಲಿ ಪ್ರೇಕ್ಷಕರು, ವಾವ್ ನಿತ್ಯಾ ಆಕ್ಟಿಂಗ್ ಬೆಸ್ಟ್, ಎಂಥ ಪ್ರೌಢ ನಟನೆ, ಇವರ ನಟನೆ ನೋಡೋದೆ ಖುಷಿ, ತುಂಬಾನೆ ಸುಂದರವಾಗಿ, ಅದ್ಭುತವಾಗಿ ನಟಿಸಿದ್ದಾರೆ, ಎಲ್ಲೂ ಓವರ್ ಆಕ್ಟಿಂಗ್ ಇಲ್ಲ, ಕರ್ಣ ಮತ್ತು ನಿತ್ಯಾ ಅಭಿನಯ ಯಾವಾಗಲೂ ಸೂಪರ್ ಅಂದಿದ್ದಾರೆ.
67
ನಿಧಿ ಪ್ರೀತಿಯ ಹುಚ್ಚಿ-ನಿತ್ಯಾ ಸೂಪರ್
ಇನ್ನೂ ಕೆಲವರು ನಿಧಿ ಕರ್ಣನ ಪ್ರೀತಿಯಲ್ಲಿ ಹುಚ್ಚಿಯಾಗಿದ್ದಾಳೆ, ಅವಳಿಗೆ ಕರ್ಣ ಬಿಟ್ರೆ ಬೇರೆ ಕಾಣಲ್ಲ. ಆದರೆ ನಿತ್ಯಾ ಯಾವಾಗಲೂ ತನ್ನ ಮನೆಯವರ ಬಗ್ಗೆ ಕಾಳಜಿ ವಹಿಸುತ್ತಾಳೆ ಎಂದಿದ್ದಾರೆ. ನಿತ್ಯ ಆಕ್ಟಿಂಗ್ ಸೂಪರ್ ನಿಧಿ ದು ಸ್ವಲ್ಪ ಓವರ್ ಆಯ್ತು, ನಿತ್ಯ ಪಾತ್ರ ಮೆಚೂರ್ ಆಗಿದೆ.... ಮಾತಿನ ಹಿಂದೆ ಕಾಳಜಿ ಎದ್ದು ಕಾಣಿಸ್ತಾ ಇದೆ, ನಿಧಿಗೆ ಬರಿ ಲವ್, ಅವನ್ ಮೇಲೆ ಹೊರಳಾಡೋದು ಬಿಟ್ರೆ ಬೇರೇನೂ ಇಲ್ಲ ಎಂದು ಕೂಡ ಹೇಳ್ತಿದ್ದಾರೆ.
77
ನಿತ್ಯಾ ಪರ ಪ್ರೇಕ್ಷಕರು
ಒಬ್ಬ ಅಕ್ಕನಾಗಿ ,ತಾಯಿ ಆಗಿ ಎಲ್ಲದ್ರದಲ್ಲೂ ಕಾಳಜಿ ಪ್ರೀತಿ ವಹಿಸ್ತಾಳೆ ನಿತ್ಯ. ನಿತ್ಯ ಕರ್ಣ ಜೋಡಿಯಾದ್ರೆ ಚೆನ್ನಾಗಿರುತ್ತೆ. ಭವ್ಯಾದು ಓವರ್ ಆಕ್ಟಿಂಗ್ ಎಂದು ಕಾಮೆಂಟ್ ಮಾಡುವ ಮೂಲಕ ಭವ್ಯಾ ಗೌಡ ಮತ್ತು ನಮ್ರತಾ ಗೌಡ (Namratha Gowda) ಅಭಿನಯದ ಬಗ್ಗೆ ಕಾಮೆಂಟ್ ಸೆಕ್ಷನ್ ಪೂರ್ತಿ ಹೊಗಳಿಕೆ, ತೆಗಳಿಕೆ ಕೇಳಿ ಬರುತ್ತಿದೆ. ಒಟ್ಟಲ್ಲಿ ಮುಂದೆ ಏನಾಗಲಿದೆ ಎಂದು ಎಪಿಸೋಡ್ ಗಾಗಿ ಕಾಡರೆ ಗೊತ್ತಾಗುತ್ತೆ.