ಕೀರ್ತಿಯಾಗಿ ಬದಲಾದ ಲಕ್ಷ್ಮೀ… ಭೂಮಿಕಾ ಅಭಿನಯ ಬೆಂಕಿ, ಛಿಂದಿ ಅಂತಿದ್ದಾರೆ ವೀಕ್ಷಕರು

First Published | Aug 27, 2024, 11:55 AM IST

ಲಕ್ಷ್ಮೀ ಬಾರಮ್ಮ ಟ್ವಿಸ್ಟ್ ನೋಡಿ ವೀಕ್ಷಕರು ಥ್ರಿಲ್ ಆಗಿದ್ದು, ಇದು ಬೇಕಾಗಿರೋದು, ಅದ್ಭುತವಾಗಿ ಈವಾಗ ನೋಡೋದಕ್ಕೆ ಅಂತಿದ್ದಾರೆ ವೀಕ್ಷಕರು. 
 

ಲಕ್ಷ್ಮೀ ಬಾರಮ್ಮ (Lakshmi Baramma) ಇನ್ನೇನು ಮುಗಿಯುವ ಹಂತಕ್ಕೆ ಬಂದು ನಿಂತಿದೆ ಎಂದು ಹೇಳುತ್ತಿರುವಾಗಲೇ, ಧಾರಾವಾಹಿಯಲ್ಲಿ ದೊಡ್ಡ ದೊಡ್ಡ ಟ್ವಿಸ್ಟ್ ಗಳು ಬಂದಿದ್ದು, ಲಕ್ಷ್ಮೀ ಕೀರ್ತಿಯಾಗಿ ಬದಲಾಗಿದ್ದು ನೋಡುವ ವೀಕ್ಷಕರಿಗೆ ಸಖತ್ ಥ್ರಿಲ್ ನೀಡುತ್ತಿದೆ. 
 

ಬೆಟ್ಟದ ಮೇಲಿನಿಂದ ಕೀರ್ತಿಯನ್ನು ನೂಕಿರುವ ಕಾವೇರಿ, ಕೀರ್ತಿ ಓಡಿ ಹೋಗಿದ್ದಾರೆ ಎಂದು ಕಥೆ ಕಟ್ಟಿದ್ದಾರೆ. ನಂತ್ರ ಕೀರ್ತಿ ಹೆಣ ಸಿಕ್ಕಿದ್ದು, ಮುಖವನ್ನೂ ನೋಡಲಾಗದ ಸ್ಥಿತಿಯಲ್ಲಿರೋದರಿಂದ ಹಾಗೆಯೇ ಶವ ಸಂಸ್ಕಾರ ಕೂಡ ಮಾಡಲಾಗಿತ್ತು. ಕೀರ್ತಿ ಸಾವು ಲಕ್ಷ್ಮೀ ಮನಸ್ಥಿತಿನಾ ಕೆಡಿಸಿತ್ತು, ಹೇಗಾದ್ರೂ ಮಾಡಿ ಕೀರ್ತಿ ಸಾವಿನ ರಹಸ್ಯ ಬಯಲು ಮಾಡೋದಕ್ಕೂ ಪ್ರಯತ್ನಿಸಿದ್ಲು ಲಕ್ಷ್ಮೀ. 
 

Tap to resize

ಇದೀಗ ಟ್ವಿಸ್ಟ್ ಬಂದಿದ್ದೇ ಅಲ್ಲಿಂದ ಕೀರ್ತಿ ಯೋಚನೆಯಲ್ಲಿರೋ ಲಕ್ಷ್ಮಿ(Lakshmi) ಮಧ್ಯರಾತ್ರಿ ನಿದ್ರೆಯಲ್ಲಿ ನಡೆಯುತ್ತಾ, ಮನೆಯಿಂದ ಹೊರ ಬಂದು, ಕೀರ್ತಿ ಡೈರಿಯನ್ನು ಪೂರ್ತಿಯಾಗಿ ಓದಿದ್ದಾರೆ. ಇನ್ನೊಂದೆಡೆ ಕಾವೇರಿಗೆ ಪಾಪಪ್ರಜ್ಞೆ ಕಾಡುತ್ತಿದ್ದು, ಎಲ್ಲಾ ಕಡೆ ಕೀರ್ತಿ ಭೂತವಾಗಿ ಬಂದು ಕಾಡುತ್ತಿದ್ದಾಳೆ. 
 

ಕೀರ್ತಿ ಆತ್ಮಕ್ಕೆ ಶಾಂತಿ ಸಿಗೋದಕ್ಕೆ ಕಾವೇರಿ ತಮ್ಮ ಮನೆಯಲ್ಲಿ ಶಾಂತಿ ಪೂಜೆ ಮಾಡಿಸುತ್ತಿದ್ದು, ಅಲ್ಲಿಗೆ ಕೀರ್ತಿಯಂತೆ ಮಾಡರ್ನ್ ಡ್ರೆಸ್ ಮಾಡ್ಕೊಂಡು ಬರುವ ಲಕ್ಷ್ಮೀಯನ್ನು ನೋಡಿ, ಅವಳ ಮಾತು ಕೇಳಿ ಅಲ್ಲಿದ್ದವರಲ್ಲಾ ಶಾಖ್ ಆಗಿದ್ದಾರೆ. 
 

ವೈಷ್ಣವನ್ನು ಕೀರ್ತಿ (Keerthi) ಕರಿಯುತ್ತಿದ್ದ ಹಾಗೆ ವೈಷ್ ಎಂದು ಕರೆಯುತ್ತಾ, ಆತನನ್ನ ಗಟ್ಟಿಯಾಗಿ ತಬ್ಬಿಕೊಳ್ತಾಳೆ ಲಕ್ಷ್ಮೀ, ಅಷ್ಟೇ ಅಲ್ಲ ಹಾರ ಹಾಕಿದ್ದ ಕೀರ್ತಿಯ ಫೋಟೊದಿಂದ ಹಾರವನ್ನು ತೆಗೆದು ಎಸೆದು, ನಿಮ್ಮ ಮನೆಯಲ್ಲಿ ನನ್ನ ಫೋಟೊ ಯಾಕಿದೆ? ಯಾರದ್ರೂ ಬದುಕಿರೋವಾಗ ಫೋಟೊಗೆ ಹಾರ ಹಾಕಬಾರದು ಅನ್ನೋದು ಗೊತ್ತಿಲ್ವಾ ಅಂತ ಕೇಳ್ತಿದ್ದಾಳೆ. ಇದನ್ನ ನೋಡಿ ಕಾವೇರಿ ತತ್ತರಿಸಿ ಹೋಗಿದ್ದಾಳೆ. 
 

ಕೀರ್ತಿಯಾಗಿ ಬದಲಾದ ಲಕ್ಷ್ಮೀ ಅಭಿನಯ ನೋಡಿ ವೀಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಾವೇರಿ ಪಾಠ ಕಲಿಸೋಕ್ಕೆ ಲಕ್ಷ್ಮಿ ಆಡ್ತಿರೋ ನಾಟಕ ಇದು ಅಂತಾನೂ ಹೇಳಿದ್ದಾರೆ. ಅಲ್ಲದೇ ಲಕ್ಷ್ಮೀ ಅಭಿನಯ  ಬೆಂಕಿ. ಲಕ್ಷ್ಮೀ ಬೇಕಾದ್ರೆ ಸುಮ್ನೆ ಇರಬಹುದಿತ್ತು,  ಆದ್ರೆ ಹಾಗೆ ಮಾಡಿಲ್ಲ ಅದು ಅವಳ ಗುಣ ಕೆಲವರಿಗೆ ಅದು ಅರ್ಥ ಆದ್ರೆ ಒಳ್ಳೆದು ಅಂತಾನೂ ಹೇಳಿದ್ದಾರೆ ಜನ. 
 

ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ನೋಡಿ ಥ್ರಿಲ್ ಆಗಿರುವ ಜನರು  ಊಹೆಗೂ ನಿಲುಕದ ಲಕ್ಷ್ಮೀ ನಟನೆಗೆ ಮನ ಸೋತಿದ್ದಾರೆ, ಲಕ್ಷ್ಮೀಯದ್ದು ಎಕ್ಸ್ಟ್ರಾ ಆರ್ಡಿನರಿ ಅಭಿನಯ, ಲಕ್ಷ್ಮೀ ಸೂಪರ್, ನಮ್ಮ ಲಕ್ಷ್ಮೀ ಮುದ್ದಾಗಿದ್ದಾರೆ, ಈ ಸಣ್ಣ ವಯಸ್ಸಿಗೆ ಎಷ್ಟು ಚೆನ್ನಾಗಿ ಅಭಿನಯಿಸುತ್ತಿದ್ದಾರೆ ಎಂದು ಕೂಡ ಹೊಗಳಿದ್ದಾರೆ. ಅಲ್ಲದೇ ಲಕ್ಷ್ಮೀ ನಟನೆ ಬೆಂಕಿ ಎಂದು ಪ್ರಶಂಶೆ ವ್ಯಕ್ತಪಡಿಸಿದ್ದಾರೆ. 
 

Latest Videos

click me!