ಚೆಲುವಿ - ವೆಂಕಿ ಮದ್ವೆ ನೋಡಿ ಖುಷಿ ಪಟ್ಟ ವೀಕ್ಷಕರು... ಆದ್ರೆ ಇಲ್ಲೂ ಊಟ ಹಾಕ್ಸಿಲ್ಲ ಅನ್ನೋದೆ ಬೇಜಾರಂತೆ!

Published : Aug 26, 2024, 05:21 PM IST

ಲಕ್ಷ್ಮೀ ನಿವಾಸ ಧಾರಾವಾಹಿಯ ಸದ್ಯದ ಮುದ್ದಾದ ಜೋಡಿಗಳಾದ ವೆಂಕಿ ಮತ್ತು ಚೆಲುವಿ ಮದುವೆಯಾಗಿದ್ದು, ವೀಕ್ಷಕರು ಖುಷಿಯಾಗಿದ್ದಾರೆ.   

PREV
17
ಚೆಲುವಿ - ವೆಂಕಿ ಮದ್ವೆ ನೋಡಿ ಖುಷಿ ಪಟ್ಟ ವೀಕ್ಷಕರು... ಆದ್ರೆ ಇಲ್ಲೂ ಊಟ ಹಾಕ್ಸಿಲ್ಲ ಅನ್ನೋದೆ ಬೇಜಾರಂತೆ!

ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿ ಹಲವು ಜೋಡಿಗಳ ಕಥೆಯನ್ನು ಹೇಳುತ್ತೆ. ಲಕ್ಷ್ಮೀ ಮತ್ತು ಶ್ರೀನಿವಾಸ ದಂಪತಿಗಳ ಹಾಗೂ ಅವರ ಮಕ್ಕಳ ಕಥೆಯನ್ನು ತೋರಿಸುತ್ತೆ. ಇಲ್ಲಿ ಪ್ರತಿ ಪಾತ್ರವನ್ನ ವೀಕ್ಷಕರು ಇಷ್ಟಪಟ್ಟಿದ್ದಾರೆ, ಅದರಲ್ಲೂ ವೆಂಕಿ ಮತ್ತು ಚೆಲುವಿಯ ಪಾತ್ರ ಸದ್ಯ ಹಾಟ್ ಫೆವರಿಟ್ ಆಗಿದೆ. 
 

27

ಲಕ್ಷ್ಮೀ ಶ್ರೀನಿವಾಸರ ಸಾಕು ಮಗ ವೆಂಕಿ, ಬಾಯಿ ಬರೋದಿಲ್ಲ, ಕಿವಿನೂ ಕೇಳೋದಿಲ್ಲ, ಆದರೆ ಅಪ್ಪಟ ಅಪರಂಜಿ, ಎಲ್ಲರ ನೋವಿಗೆ ಸ್ಪಂಧಿಸುತ್ತಾ, ಎಲ್ಲರ ಬೈಗುಳವನ್ನು ಕೇಳಿ ನೋವುಂಡು, ಆದರೂ ಎಲ್ಲರಿಗೂ ಒಳ್ಳೆಯದನ್ನೇ ಮಾಡುವ ಜೀವ. ಇನ್ನೊಂದೆಡೆ ಚೆಲುವಿ. ಹೂವು ಮಾರುವ ಹುಡುಗಿ, ಆಕೆಯೂ ಅಪರಂಜಿ. 
 

37

ವೆಂಕಿಗೆ ಚೆಲುವಿ ಅಂದ್ರೆ ಇಷ್ಟಾನೆ, ಆದ್ರೆ ಹೇಳೋದಕ್ಕೆ ಭಯ, ಅಷ್ಟರಲ್ಲಿ ಚೆಲುವಿಗೂ ಮದುವೆ ಫಿಕ್ಸ್ ಆಗಿದ್ದಕ್ಕೆ ಸುಮ್ಮನಾಗಿದ್ದ, ಇನ್ನೊಂದೆಡೆ ತನ್ನ ಎಲ್ಲಾ ಕಷ್ಟಗಳಲ್ಲಿ ಸಾಥ್ ನೀಡುವ ಚೆಲುವಿಗೂ ವೆಂಕಿ ಮೇಲೆ ಮನಸಾಗಿದೆ, ಆಕೆಯೂ ಏನನ್ನೂ ಹೇಳಿಕೊಳ್ಳದೇ ಸುಮ್ಮನಿದ್ದಾಳೆ. 
 

47

ಇದೀಗ ಹೊಸದಾಗಿ ಪ್ರಸಾರವಾಗುತ್ತಿರುವ ಪ್ರೊಮೋದಲ್ಲಿ ತೋರಿಸಿರುವಂತೆ, ಚೆಲುವೆ ತನ್ನ ಸಮಸ್ಯೆಗಳಿಂದ ನೊಂಡು ಆತ್ಮಹತ್ಯೆ (Suicide) ಮಾಡೋದಕ್ಕೆ ಹೋಗುತ್ತಾಳೆ, ಇನ್ನೇನು ಕೆರೆಗೆ ಬೀಳಬೇಕು ಅನ್ನುವಷ್ಟರಲ್ಲಿ ಆಕೆಯನ್ನು ತಡೆದು ಜೀವ ಉಳಿಸುತ್ತಾನೆ ವೆಂಕಿ. ನಂತ್ರ ದೇವಸ್ಥಾನದಲ್ಲಿ ವೆಂಕಿ ಮತ್ತು ಚೆಲುವಿಯ ವಿವಾಹ ನಡೆಯುತ್ತಿದೆ. 
 

57

ವೆಂಕಿ ಮತ್ತು ಚೆಲುವಿ (Venki and Cheluvi) ಇಬ್ಬರ ನಟನೆಗೂ ಮನಸೋತಿರುವ ವೀಕ್ಷಕರು ಇದೀಗ ಈ ಮುಗ್ಧ ಜೋಡಿಗಳು ಒಂದಾಗಿರೋದನ್ನು ನೋಡಿ ಖುಷಿ ಪಟ್ಟಿದ್ದಾರೆ. ವೆಂಕಿ ಅಣ್ಣ ಸೂಪರ್ ಸೂಪರ್ ಇವತ್ತಿನ ಎಪಿಸೋಡ್. ಅಂತೂ ಇಂತೂ ಚಲುವಿನ ಮದುವೆ ಆದ್ರಲ್ಲ ಅದೇ ಖುಷಿ. ಆ ಸೈಕೋ ಜಯಂತ್ ಗಿಂತ ವೆಂಕಿ ಬರುವ ಎಪಿಸೋಡು ತುಂಬಾ ಚೆನ್ನಾಗಿದೆ ಎಂದಿದ್ದಾರೆ. 
 

67

ಮತ್ತೊಬ್ಬರು ಕಾಮೆಂಟ್ ಮಾಡಿ, ವೆಂಕಿ ಮತ್ತು ಚೆಲುವಿಯ ಮದುವೆ ಜನಗಳಿಗೆ ಖುಷಿ ಕೊಡೊ ವಿಷಯ ನಿಜಾ. ಆದರೂ ಬೇಜಾರಾಗಿದೆ, ಯಾಕಂದ್ರೆ ಇವರ ಮದುವೆಯಲ್ಲೂ ಊಟ ಇಲ್ವಲ್ಲ, ಎಂದಿದ್ದಾರೆ, ಅಲ್ಲದೇ ಯಾಕೆ ಎಲ್ಲಾ ಮದುವೆಗಳನ್ನ ಹೀಗೆ ಮಾಡ್ತೀರಿ, ಚಪ್ಪರ ಖರ್ಚು ಉಳಿಸೋಕ ಎಂದು ಸಹ ಕೇಳಿದ್ದಾರೆ. ಅಲ್ಲದೇ ನಿರ್ದೇಶಕರು ತುಂಬಾ ಅದ್ಬುತವಾಗಿ ಕಥೆ ತೆಗೆದಿದ್ದಾರೆ. ವೆಂಕಿ ಚೆಲುವೆ ಕೊನೆವರೆಗೂ ಚೆನ್ನಾಗಿ ಇರ್ಬೇಕು ಎಂದು ಹಾರೈಸಿದ್ದಾರೆ ಕೆಲವರು.  
 

77

ಇನ್ನೂ ಕೆಲವು ಜನ ಕಾಮೆಂಟ್ ಮಾಡಿ, ವೆಂಕಿ ಮಾಡಿದ್ದು ಸರಿಯಾಗಿಯೇ ಇದೆ. ಆದ್ರೆ ಲಕ್ಷ್ಮೀ ಮತ್ತು ಶ್ರೀನಿವಾಸರಿಗೆ ಒಂದು ಮಾತು ಹೇಳಿ ಮದ್ವೆ ಆಗ್ತಿದ್ರೆ ಚೆನ್ನಾಗಿರ್ತಿತ್ತು. ಇನ್ನು ಇವರಿಬ್ಬರಿಗೆ ಮನೆಯಲ್ಲಿದೆ ಹಬ್ಬ. ಆ ಜುಗ್ಗ ಸರಿಯಾಗಿ ಹಬ್ಬ ಮಾಡ್ತಾನೆ, ಮತ್ತೊಂದು ಫ್ಯಾಮಿಲಿ ಡ್ರಾಮಾ ಶುರುವಾಗುತ್ತೆ ಎಂದಿದ್ದಾರೆ. ಮತ್ತೆ ಕೆಲವರು, ವೆಂಕಿ ಮನೆಯಲ್ಲಿ ಖಂಡಿತವಾಗಿಯೂ ಈ ಜೋಡಿಯನ್ನ ಒಫ್ಕೋತಾರೆ ಎಂದಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories