ಮುದ್ದು ಹುಡುಗಿ ದೃಷ್ಟಿಯನ್ನು ಅನುಬಂಧ ಶೋನಲ್ಲಿ ಕಪ್ಪಾಗಿ ತೋರಿಸಿದ್ದಕ್ಕೆ ಚಾನೆಲ್ ವಿರುದ್ಧ ಕಿಡಿ ಕಾರಿದ ವೀಕ್ಷಕರು!

First Published | Sep 25, 2024, 12:45 PM IST

ದೃಷ್ಟಿಬೊಟ್ಟು ಸೀರಿಯಲ್ ನಲ್ಲಿ ದೃಷ್ಟಿಯನ್ನು ಮೊದಲಿಗೆ ಕಪ್ಪಾಗಿ, ನಂತ್ರ ಬಿಳಿಯಾಗಿ ತೋರಿಸಲಾಗಿದ್ದು, ವರ್ಣಭೇದ ಮಾಡುತ್ತಿರುವ ಸೀರಿಯಲ್ ವಿರುದ್ಧ, ಮುದ್ದು ಹುಡುಗಿ ದೃಷ್ಟಿಯನ್ನು ಅನುಬಂಧ ಶೋನಲ್ಲಿ ಕಪ್ಪಾಗಿ ತೋರಿಸಿದ್ದಕ್ಕೆ ಚಾನೆಲ್ ವಿರುದ್ಧ ವೀಕ್ಷಕರು ಫುಲ್ ಗರಂ ಆಗಿದ್ದಾರೆ. 

ವಿಜಯ್ ಸೂರ್ಯ (Vijay Surya) ದತ್ತ ಭಾಯ್ ಆಗಿ ನಟಿಸುತ್ತಿರುವ ದೃಷ್ಟಿ ಬೊಟ್ಟು ಸೀರಿಯಲ್ ತನ್ನ ಹೊಸತನದ ಕಥೆಯ ಮೂಲಕ ಜನಮನ ಗೆದ್ದಿತ್ತು. ಬಿಳಿ ಬಣ್ಣ ಇರುವ ಮುದ್ದಾದ ಹುಡುಗಿ ದೃಷ್ಟಿಯನ್ನು ಆಕೆಯ ತಾಯಿ ದುಷ್ಟರಿಂದ ಕಾಪಾಡಲು ಕಪ್ಪು ಬಣ್ಣದಲ್ಲಿ ಆಕೆಯ ಅಂದವನ್ನು ಮುಚ್ಚಿದ್ದು, ಇದೀಗ ಎಲ್ಲರೆದುರು ದೃಷ್ಟಿಯ ಅಸಲು ಬಣ್ಣ ಬಯಲಾಗಿದೆ. 
 

ಸೀರಿಯಲ್ ಪೂರ್ತಿಯಾಗಿ ದೃಷ್ಟಿ ಕಪ್ಪಾಗಿಯೇ ಕಾಣಿಸಿಕೊಳ್ಳುತ್ತಾರೆ ಎಂದು ಅಂದುಕೊಂಡ ವೀಕ್ಷಕರಿಗೆ ಇದೀಗ ಎರಡೇ ವಾರದಲ್ಲಿ ದೃಷ್ಟಿಯನ್ನು ಹೊಸ ರೂಪದಲ್ಲಿ ನೋಡಿ ಅಚ್ಚರಿಯಾಗಿದೆ. ಅಲ್ಲದೇ ದೃಷ್ಟಿ ಪಾತ್ರಧಾರಿಯ ಅಂದವನ್ನು ನೋಡಿ ವೀಕ್ಷಕರು ಮನ ಸೋತೊದ್ದಾರೆ. 
 

Tap to resize

ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಾಹಿನಿ ದೃಷ್ಟಿ ನಿಜರೂಪ ನಿಮಗೆಷ್ಟು ಇಷ್ಟ ಆಯ್ತು ಕಮೆಂಟ್ ಮಾಡಿ! ಎಂದು ಕ್ಯಾಪ್ಶನ್ ಹಾಕಿ, ದೃಷ್ಟಿಗೆ ಮೇಕಪ್ ಮಾಡುತ್ತಿರುವ ವಿಡೀಯೋವನ್ನು ಶೇರ್ ಮಾಡಿದ್ದು, ವೀಕ್ಷಕರು ಅಭಿಮಾನಿಗಳು, ಎಲ್ಲರೂ ಸೀರಿಯಲ್ ವಿರುದ್ಧ, ವಾಹಿನಿಯ ವಿರುದ್ಧ ಕಿಡಿ ಕಾರಿದ್ದಾರೆ. ಯಾಕೆ ಅನ್ನೋದನ್ನ ನೀವೇ ನೋಡಿ. 
 

ದೃಷ್ಟಿ ತುಂಬಾನೆ ಮುದ್ದಾಗಿದ್ದಾರೆ ಎನ್ನುವ ಜನ,  ಆದ್ರೆ ಅಷ್ಟು ದೊಡ್ಡ ಅನುಬಂಧ ಶೋನಲ್ಲಿ ಎಲ್ಲರೂ ಸ್ಟೈಲಿಸ್ಗ್ ಆಗಿ ಮಿಂಚ್ತ ಇದ್ರೆ ದೃಷ್ಟಿಯನ್ನು ಮಾತ್ರ ಸೀದಾ ಸೆಟ್ಟಿಂದ ಕರ್ಕೊಂಡು ಬಂದಿದಿರಲ್ಲ ಸರಿನ? ಎಂದು ಪ್ರಶ್ನಿಸಿದ್ದಾರೆ. ಅನುಬಂಧದಲ್ಲೂ ಆಕೆಯನ್ನು ಕಪ್ಪಾಗಿ ತೋರಿಸಿರೋದಕ್ಕೆ ಥೂ ಅಂತ ಕಾಮೆಂಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. 
 

ದೃಷ್ಟಿ ತುಂಬಾನೆ ಸುಂದರವಾಗಿದ್ದಾರೆ, ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲ ಎನ್ನುವ ಜನ. ಅನುಬಂಧ ಕಾರ್ಯಕ್ರಮದಲ್ಲಿ ಎಲ್ಲಾ ಸೀರಿಯಲ್ ಹೀರೋ ಹೀರೋಯಿನ್ ಗಳು ಅವ್ರ ಸೀರಿಯಲ್ ಅವತಾರ ಬಿಟ್ಟು ಹೊಸ ಲುಕ್ನಲ್ಲಿ ಬಂದಿದ್ರು... ರಾಮಾಚಾರಿ ಪಂಚೆ ಉಟ್ಟಿದ್ರ ಇಲ್ವಲ್ಲಾ?? ಮಂಗಳಮ್ಮ ಕೂಡ ಪಾರ್ಲರ್ ನಲ್ಲಿ ಅಲಂಕಾರ ಮಾಡ್ಕೊಂಡು ಬಂದಿದ್ರು... ಆದರೆ ದೃಷ್ಟಿಯನ್ನು ಮಾತ್ರ ಯಾಕೆ ಹಾಗೆ ಬರೋಕೆ ಹೇಳಿದ್ರಿ?? ಹೊಸ ಹುಡುಗಿ ಅಂತ ಈ ರೀತಿ ಮಾಡಿದ್ರಾ ಎಂದು ಪ್ರಶ್ನಿಸಿದ್ದಾರೆ.
 

ಇನ್ನು ಧಾರಾವಾಹಿಯಲ್ಲಿ ದೃಷ್ಟಿ ಕಪ್ಪಾಗಿದ್ದಾಗ, ಯಾರು ಆಕೆಯ ಸುದ್ದಿಗೆ ಬರುತ್ತಿರಲಿಲ್ಲ, ಆದರೆ ಆಕೆ ಬಿಳಿ ಎಂದು ಗೊತ್ತಾದಾಗ, ಇಡೀ ಸಮಾಜವೇ ಅವಳ ಬಳಿ ಬರೋದನ್ನು ತೋರಿಸಿರೋದಕ್ಕೂ ವೀಕ್ಷಕರು ಗರಂ ಆಗಿದ್ದಾರೆ. ನೀವು ವರ್ಣಭೇದ ಮಾಡ್ತಿದ್ದೀರಿ ಎಂದು ಹೇಳಿದ್ದಾರೆ. ಇನ್ನು ಕೆಲವರು ದೃಷ್ಟಿ ಚೆನ್ನಾಗಿದ್ದಾಳೆ, ಆದರೆ ಕಥೆಯೇ ತುಂಬಾನೆ ವೀಕ್ ಆಗಿದೆ ಎಂದಿದ್ದಾರೆ. 
 

ದೃಷ್ಟಿ ತುಂಬಾನೆ ಚೆನ್ನಾಗಿದ್ದಾರೆ, ಆದರೆ ಕಪ್ಪು ಬಣ್ಣ ಕುರೂಪ ಎಂದು ಬಿಂಬಿಸುವುದು ಸರಿಯಲ್ಲ. ಇದು ನಿಜವಾಗಿಯೂ ಕೆಟ್ಟ ಪ್ರಾತಿನಿಧ್ಯವಾಗಿದೆ, ಇದು ಕಪ್ಪು ಚರ್ಮದ ಜನರ ಬಗ್ಗೆ ಕಳಂಕವನ್ನು ಸೃಷ್ಟಿಸುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ ಇದರಿಂದಾಗಿ ಕಪ್ಪು ಮೈ ಬಣ್ಣ ಹೊಂದಿರುವವರ ಭಾವನೆಗೆ ಧಕ್ಕೆ ಉಂಟಾಗುತ್ತೆ ಕಿಡಿ ಕಾರಿದ್ದಾರೆ. 
 

Latest Videos

click me!