ಆರಾಧನಾ ಕನಸು ಈಡೇರದೆ ಮುಕ್ತಾಯವಾಗ್ತಿದ್ಯಾ ಅಂತರಪಟ?... ಗುಡ್ ಬೈ ಪಾರ್ಟಿ ಮಾಡಿದ ಟೀಮ್

First Published | Sep 24, 2024, 6:14 PM IST

ಆರಾಧನಾ ಮತ್ತು ಸುಶಾಂತ್ ಕಥೆಯನ್ನು ಹೊತ್ತ ಅಂತರಪಟ ಧಾರಾವಾಹಿ ಇದೀಗ ಮುಕ್ತಾಯದ ಹಂತ ತಲುಪಿದೆ. ಇದೇ ವಾರ ಸೀರಿಯಲ್ ಮುಕ್ತಾಯವಾಗಲಿದೆ. 
 

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸ್ವಪ್ನ ಕೃಷ್ಣಾ ಅವರ ಧಾರಾವಾಹಿ ಅಂತರಪಟ (Antarapata) ಇನ್ನೇನು ಮುಕ್ತಾಯದ ಹಂತ ಬಂದು ನಿಂತಿದೆ. ಆರಾಧನಾ ಮತ್ತು ಸುಶಾಂತ್ ಬದುಕಿನ ಒಂದೊಂದು ಸತ್ಯಗಳು ಬಯಲಾಗುತ್ತಾ ಬಂದಿದೆ. ಇದೀಗ ಆರಾಧನಾ ಮಲ ತಂದೆ ಮಹೇಶ್ ಕೂಡ ಸಂಪೂರ್ಣವಾಗಿ ಬದಲಾಗಿದ್ದು, ಆರಾಧನಾ ಕಾಲು ಹಿಡಿದು ಕ್ಷಮೆ ಕೇಳುತ್ತಿದ್ದಾನೆ. 
 

ಅಂತರಪಟ ಧಾರಾವಾಹಿಯ ಕೊನೆಯ ಎಪಿಸೋಡ್ ಶೂಟ್ ಕೂಡ ನಡೆದಿತ್ತು, ಸ್ವಪ್ನ ಕೃಷ್ಣ ಅವರು ಕೊನೆಯದಾಗಿ ಪೂರ್ತಿ ಸೀರಿಯಲ್ ಟೀಮ್ ಜೊತೆಯಾಗಿ ನಿಂತು ತೆಗೆಸಿಕೊಂಡ ಫೋಟೊವನ್ನು ಶೇರ್ ಮಾಡಿದ್ದರು. ಇದಾದ ನಂತರ ಸೀರಿಯಲ್ (Serial) ತಂಡ ಜೊತೆಯಾಗಿ ಗುಡ್ ಬೈ ಪಾರ್ಟಿ ಕೂಡ ಮಾಡಿ, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 
 

Tap to resize

ಅಂತರಪಟ ಧಾರಾವಾಹಿ ನಾಯಕ ಚಂದನ್ ಗೌಡ (Chandan Gowda), ನಾಯಕಿ ತನ್ವಿಯಾ ಬಾಲರಾಜ್, (Thanviya Bhalraj) ಸ್ವಪ್ನ ಕೃಷ್ಣ, ಶರ್ಮಿಳಾ ಚಂದ್ರಶೇಖರ್, ಅಕ್ಷತಾ ಗಣೇಶ್, ನೇಹಾ ಗೌಡ ಹಾಗೂ ಧಾರಾವಾಹಿಯ ಇತರ ನಟರು ಜೊತೆಯಾಗಿ ಡಿನ್ನರ್ ಗೆ ತೆರಳಿ ಎಂಜಾಯ್ ಮಾಡಿದ್ದು ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ,
 

‘ಬಿಗ್ ಬಾಸ್ ಕನ್ನಡ ಸೀಸನ್ 11’ (Bigg Boss Season 11) ಶೋ ಸೆಪ್ಟೆಂಬರ್ 28ರಿಂದ ಆರಂಭವಾಗಲಿದೆ. ಹೀಗಾಗಿ ‘ಅಂತರಪಟ’ ಧಾರಾವಾಹಿ ಅಂತ್ಯ ಆಗಿಲಿದೆ.  ಹಾಗಾಗಿ ಎಲ್ಲರೂ ಸೇರಿ ಗೆಟ್ ಟು ಗೆದರ್ ಪಾರ್ಟಿ ಮಾಡಿದ್ದಾರೆ. ಆದರೆ ಇದೆಲ್ಲಾ ನಡೆಯುವಾಗ ವೀಕ್ಷಕರಿಗೆ ಒಂದೆ ಚಿಂತೆ ಕಾಡಿದೆ, ಆರಾಧನಾ ಕನಸು ನನಸಾಗದೇ, ಅಮಲಾ ಕುತಂತ್ರ ಬಯಲಾಗದೇ ಸೀರಿಯಲ್ ಮುಗಿಯೋದಾದರೂ ಹೇಗೆ ಎಂದು. 
 

ಈ ಸೀರಿಯಲ್ ಆರಂಭವಾದುದೇ ಆರಾಧನಾ ಕನಸಿನ ಕಂಪನಿ ಕಟ್ಟಬೇಕು ಎನ್ನುವ ಕನಸಿನಿಂದ. ತಂದೆ ಇಲ್ಲದೇ ಬೆಳೆದ, ಮಲತಂದೆಯ ಕಾಟವನ್ನು ತಡೆದುಕೊಂಡು ಬೆಳೆದ ಆರಾಧನಾಗೆ ತಾನು ತನ್ನ ಸ್ವಂತ ಕಾಲಮೇಲೆ ನಿಲ್ಲಬೇಕು, ಅಪ್ಪನ ಕನಸಿನಿಂದ ನನ್ನದೇ ಆದ ಕಂಪನಿ ಕಟ್ಟಿ ಬೆಳೆಸಬೇಕು ಎಂಬುದಾಗಿತ್ತು. ಆರಂಭದಲ್ಲಿ ಅದಕ್ಕಾಗಿ ಆರಾಧನಾ, ತುಂಬಾನೆ ಏಳು ಬೀಳನ್ನು ಅನುಭವಿಸಿದ್ದಳೂ ಕೂಡ. ಆದರೆ ನಂತರದಲ್ಲಿ ಸುಶಾಂತ್ ಮದುವೆಯಾಗಿ ಬೇರೆಯದ್ದೆ ಜೀವನ ನಡೆಸುತ್ತಿದ್ದಾಳೆ ಆರಾಧಾನಾ. 
 

ಅಲ್ಲ ಮೊದಲು ಧಾರವಾಹಿ ಶುರು ಆದಾಗಾ ಅಪ್ಪನ ಕನಸಿನ ಕಂಪನಿ ಕಟ್ಟಬೇಕು ಹಂಗೆ ಹಿಂಗೇ ಅಂತ ಹೇಳಿ ಬರಿ ಮದುವೆ ಅಕ್ರಮ ಸಂಭಂದ ಇದೆ ತೋರ್ಸಿ ಧಾರವಾಹಿ ಮೂಗುಸ್ತಿದಿರಾ? ಇದು ಸರೀನಾ? ಎಂದು ಕೇಳ್ತಿದ್ದಾರೆ ವೀಕ್ಷಕರು. ಅಷ್ಟೇ ಅಲ್ಲ, ಅಮಲಾ ಇಷ್ಟೆಲ್ಲಾ ತಂತ್ರ ಕುತಂತ್ರ ಮಾಡಿದ್ದಾಳೆ, ಇನ್ನು ಧಾರಾವಾಹಿ ಮುಗಿಯೋದಕ್ಕೆ ಕೆಲವೇ ದಿನಗಳಿವೆ. ಹಾಗಿದ್ರೆ ಅಮಲಾ ಕುತಂತ್ರ ತಿಳಿಯೋದು ಯಾವಾಗ? ಅಂತಾನೂ ಪ್ರಶ್ನಿಸಿದ್ದಾರೆ ಜನ. ಇನ್ನು ನಾಲ್ಕು ದಿನದಲ್ಲಿ ಸೀರಿಯಲ್ ನಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೇ? ಆರಾಧನಾ ಕನಸನ್ನ ನನಸು ಮಾಡ್ತಾರ ಅನ್ನೋದನ್ನ ಕಾದು ನೋಡಬೇಕು. 
 

Latest Videos

click me!