ತೆರೆ ಮೇಲೆ ಕೀರ್ತಿಗಾಗಿ ಲಕ್ಷ್ಮೀ ಹೋರಾಟ, ಸೋಶಿಯಲ್ ಮೀಡಿಯಾದಲ್ಲಿ ಕೀರ್ತಿ -ಲಕ್ಷ್ಮಿ ಫ್ಯಾನ್ಸ್ ಗುದ್ದಾಟ!

First Published | Sep 25, 2024, 6:36 AM IST

ಲಕ್ಷ್ಮೀ ಬಾರಮ್ಮ ಧಾರಾವಾಹಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು, ವೀಕ್ಷಕರನ್ನು ತುದಿಗಾಲಲ್ಲಿ ನಿಂತು ಸೀರಿಯಲ್ ವೀಕ್ಷಿಸುವಂತೆ ಮಾಡಿದೆ. ತೆರೆ ಮೇಲೆ ಕೀರ್ತಿಗಾಗಿ ಲಕ್ಷ್ಮೀ ಹೋರಾಟ ನಡೆಸಿದ್ರೆ, ಸೋಶಿಯಲ್ ಮೀಡಿಯಾದಲ್ಲಿ ಕೀರ್ತಿ ಮತ್ತು ಲಕ್ಷ್ಮೀ ಫ್ಯಾನ್ ಗುದ್ದಾಟ ನಡೆಸಿದ್ದಾರೆ. 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯ ಹಾರರ್ ಥ್ರಿಲ್ಲರ್ ಸ್ಟೋರಿ ವೀಕ್ಷಕರನ್ನು ಹಿಡಿದಿಡುವಲ್ಲಿ ಗೆದ್ದಿದೆ. ಕೀರ್ತಿ ಬಗ್ಗೆ ಸತ್ಯ ತಿಳಿಯೋದಕ್ಕಾಗಿ ಲಕ್ಷ್ಮೀ ಕೀರ್ತಿಯ ದೆವ್ವ ತನ್ನ ಮೈಮೇಲೆ ಬಂದಂತೆ ಮಾಡಿದ್ರೆ, ಇನ್ನೊಂದೆಡೆ ಕೀರ್ತಿ ಬದುಕಿದ್ದಾಳ? ಸತ್ತಿದ್ದಾಳ ಎನ್ನುವ ಚರ್ಚೆ ಶುರುವಾಗಿ. ಲಕ್ಷ್ಮೀ ಮತ್ತು ಕೀರ್ತಿ ಒಬ್ಬರಿಗೊಬ್ಬರು ಮೀರಿಸುವಂತೆ ನಟಿಸುತ್ತಿದ್ದಾರೆ. ಇಬ್ಬರ ನಟನೆ ವೀಕ್ಷಕರು ಬಹುಪರಾಕ್ ಹೇಳ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಕೀರ್ತಿ ಮತ್ತು ಲಕ್ಷ್ಮೀ ಫ್ಯಾನ್ಸ್ ಗಳ ನಡುವೆ ಗುದ್ದಾಟ ಶುರುವಾಗಿದೆ. 
 

ನಿನ್ನೆ ಪ್ರಸಾರವಾದ ಪ್ರೊಮೋ (promo release)  ಒಂದಕ್ಕೆ ಕೀರ್ತಿಯ ಅಭಿಮಾನಿಯೊಬ್ಬರು , 2-3 ವಾರ ಹಾಸ್ಪಿಟಲ್ ಅಲ್ಲಿ ಲಕ್ಷ್ಮೀ ಪ್ರಜ್ಞೆ ಇಲ್ಲದೇ ಮಲಗಿದ್ದಾಗ ಕೀರ್ತಿನಾ ಹೈಲೈಟ್ ಮಾಡಿದ್ರು.ಕೀರ್ತಿ ಮೇಲೆ ಕೊಲೆ ಆಪಾದನೆ ಬಂದ ನಂತರ ಅವಳು ದೇವರತ್ರ, ತಾಯಿ ಹತ್ರ ಆಶೀರ್ವಾದ ತೊಗೊಂಡು ಹೊರಡ್ತಾಳೆ ಸತ್ಯ ಕಂಡು ಹಿಡಿಯೋಕೆ ಅಂಥ ಆದ್ರೆ ಅವಳು ಆವತ್ತು ಡೈರಿ ಬರೀಲಿಲ್ಲ.ಸೇಮ್ ಟು ಸೇಮ್ ಡ್ಯಾನ್ಸ್ ಕೀರ್ತಿ ಲಕ್ಷ್ಮೀ ಪ್ರಾಣಪಾಯದಲ್ಲಿ ಇದ್ದಾಗ ಮಾಡಿದ್ರು ದೇವಸ್ಥಾನದಲ್ಲಿ.ಆಗ ಕೆಲವರು ಉರ್ಕೊಂಡಿದ್ದೇ ಉರ್ಕೊಂಡಿದ್ದು.ಯಾಕೆ ಕೀರ್ತಿನಾ ಹೈಲೈಟ್ ಮಾಡ್ತಾ ಇದ್ದೀರಾ?ಇದೆಲ್ಲಾ ದೊಂಬರಾಟ ಬೇಕಿತ್ತಾ ಅಂಥ?ಯಾಕೆ ಹೀಗೆಲ್ಲಾ ತೋರಿಸ್ತಾ ಇದ್ದೀರಾ ಹೀರೋಯಿನ್ ಲಕ್ಷ್ಮೀ ನಾ ಕೀರ್ತಿ ನಾ ಅಂಥ? ಡ್ಯಾನ್ಸ್ ಮಾಡೋದ್ರಿಂದ ಲಕ್ಷ್ಮೀಗೆ ಪ್ರಜ್ಞೆ ಬರುತ್ತಾ ಅಂಥ?
 

Tap to resize

ಅಬ್ಬಬ್ಬಾ ಏನೆಲ್ಲಾ ಕಮೆಂಟ್ಸ್. ಈಗ್ಲೂ ಆ ಎಪಿಸೋಡ್ ಪ್ರೋಮೋ ಹೋಗಿ ನೋಡಿದ್ರೆ ಗೊತ್ತಾಗುತ್ತೆ. ಯಾವ ರೀತಿ ಕಾಮೆಂಟ್ ಮಾಡಿದ್ದಾರೆ ಅಂತ. ಈಗ ಲಕ್ಷ್ಮೀ ಅದನ್ನೇ ಮಾಡ್ತಾ ಇದ್ದಾಳೆ .ಕೀರ್ತಿ ಕೈಯಲ್ಲಿ ಏನೆಲ್ಲಾ ಆಕ್ಟಿಂಗ್ ಮಾಡಿಸಿ ಅವಳನ್ನ ಹೈಲೈಟ್ (highlighted Keerthi) ಮಾಡಿದ್ರೋ ಈಗ ಅದೆಲ್ಲವನ್ನ ಲಕ್ಷ್ಮೀ ಕೈಯಲ್ಲಿ ಮಾಡಿಸ್ತಾ ಇದ್ದಾರೆ.ಆದ್ರೆ ಕೀರ್ತಿ ಫ್ಯಾನ್ಸ್ ಯಾರೂ ಹೊಟ್ಟೆಕಿಚ್ಚು ಪಡ್ಕೋತಾ ಇಲ್ಲ.ಇದೇ ಅವರ ಕಮೆಂಟ್ಸ್ ಗೂ ಕೀರ್ತಿ ಫ್ಯಾನ್ಸ್ ಕಮೆಂಟ್ಸ್ ಗೂ ಇರುವ ವ್ಯತ್ಯಾಸ ಎಂದು ಕೀರ್ತಿ ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. 
 

ಇದಕ್ಕೆ ಉತ್ತರಿಸುತ್ತಾ ಲಕ್ಷ್ಮೀ ಫ್ಯಾನ್ (Lakshmi Fans) ಒಬ್ಬರು ಹೊಟ್ಟೆ ಕಿಚ್ಚು ಪಡದೆ ಇಷ್ಟು ಉದ್ದ ಪ್ಯಾರಾಗ್ರಾಫ್ ನೀವು ಬರೆದ್ರಾ ಎಮ್ದು ಕೇಳಿದ್ರೆ, ಇನ್ನೊಬ್ಬರು  ಇದೆ ನೋಡಿ ನಾಯಕಿಗೂ, ಎರಡನೆ ನಾಯಕಿಗೂ ವ್ಯತ್ಯಾಸ ಇರೋದು.  ಇಲ್ಲಿ ಲಕ್ಷ್ಮೀ ಡ್ಯಾನ್ಸ್ ಆಡ್ತಿರೋದು, ಯಾರು ಬದುಕಿ ಬರಲಿ ಅಂತ ಅಲ್ಲ. ಕಾವೇರಿನ ನಂಬಿಸಿ, ಕೀರ್ತಿ ಬಗ್ಗೆ ಕಾವೇರಿ ಬಾಯಿ ಬಿಡಿಸೋಕೆ. ಆದರೆ ತರ ಸಂಬಂಧ ಇಲ್ದೆ ಕುಣಿತಿಲ್ಲಾ. ಯಾರು ಯಾಕೆ ಕಮೆಂಟ್ ಮಾಡ್ಬೇಕು, ಲಕ್ಷ್ಮೀ ಬಾರಮ್ಮ ಸೀರಿಯಲ್ ಅಲ್ಲಿ ಲಕ್ಷ್ಮೀ ನ ಹೈಲೈಟ್ ಮಾಡಿದ್ರೆ ...ಈಗ ನಿಮ್ಗೆ ತಡಿಯೋಕೆ ಆಗದೆ ತಾನೇ ಕಮೆಂಟ್ ಮಾಡಿರೋದು ಎಂದು ಟೀಕಿಸಿದ್ದಾರೆ. 
 

ಅದ್ಕೆ ಕೀರ್ತಿ ಫ್ಯಾನ್ಸ್ ಲಕ್ಷ್ಮೀ ವೈ ಷ್ಣವ್ ಫ್ಯಾನ್ ಪೇಜ್ (lakshmi vaishnav fan page)  ಅವ್ರೇ ,ನಾನೇನೂ ಹೊಟ್ಟೆ ಕಿಚ್ಚು ಪಡ್ಕೊಂಡು ಕಮೆಂಟ್ ಮಾಡಿಲ್ಲ.ಆವತ್ತು ಕೀರ್ತಿ ಮಾಡಿದ ಇದೇ ಡ್ಯಾನ್ಸ್ ಗೆ ಹೊಟ್ಟೆ ಕಿಚ್ಚಿನ ಕಮೆಂಟ್ಸ್ ಹಾಕಿದ್ರಲ್ವಾ ವಿಧ ವಿಧವಾಗಿ, ಕೀರ್ತಿ ಡ್ಯಾನ್ಸ್ ಮಾಡ್ಬಾರ್ದು,ಅವಳ ಡ್ಯಾನ್ಸ್ ಯಾಕೆ ತೋರಿಸಬೇಕು ಅದರ ಅವಶ್ಯಕತೆ ಇದೆಯಾ ? ಅನ್ನೋ ರೀತಿಯಲ್ಲಿ ಸುಮಾರಷ್ಟು ಜನ ಅದು ನೆನಪಾಯ್ತು, ಅದ್ಕೆ ಹೇಳ್ದೆ ಅಷ್ಟೇ ಎಂದಿದ್ದಾರೆ. 

ಕೀರ್ತಿ ತರ ಸಂಬಂಧ ಇಲ್ದೇ ಕುಣಿತಿಲ್ಲಾ.ಇದರಲ್ಲೇ ಗೊತ್ತಾಗುತ್ತೆ ತಮಗೆ ಎಷ್ಟು ಉರಿದಿತ್ತು ಅನ್ನೋದು ಎಂದು ಲಕ್ಷ್ಮೀ ಅಭಿಮಾನಿಯೊಬ್ಬರು ಹೇಳಿದ್ರೆ, ಅಷ್ಟೇ ಅಲ್ಲ  ಕೀರ್ತಿ ಕುಣಿದಿದ್ದು,  ಪ್ರಾಬ್ಲಂ ಅಲ್ಲ ಲಕ್ಷ್ಮೀ ನ ಸೈಲೆಂಟ್ ಮಾಡಿ ಅವಳನ್ನ ಕುಣಿಸಿದ್ದು,  ಸಮಸ್ಯೆಯಾಗಿತ್ತು. ಈವಾಗ್ಲೂ ಅದೇ ಹೇಳ್ತಿರೋದು ಲಕ್ಷ್ಮೀ ಬಾರಮ್ಮ ಲಕ್ಷ್ಮೀ ಗೋಸ್ಕರ ಅಂಡ್ ನಾವು ಸ್ಕ್ರೀನ್ ಸ್ಪೇಸ್  ಕೇಳೋದ್ರಲಿ ತಪ್ಪು ಇಲ್ಲ ಯಾಕಂದ್ರೆ ಈ ಸೀರಿಯಲ್ ಇರೋದೆ ಲಕ್ಷ್ಮೀ ಮತ್ತು ವೈಷ್ಣವ್ ಗೋಸ್ಕರ ಎಂದಿದ್ದಾರೆ. 
 

ಜೊತೆಗೆ ಕೀರ್ತಿ ಬಗ್ಗೆ ನಮಗೆ ಹೊಟ್ಟೆ ಕಿಚ್ಚು ಇಲ್ಲ. ಅವತ್ತು ಹೇಳಿದ್ದು ಅಷ್ಟೇ, ಲಕ್ಷ್ಮೀನಾ ಕೋಮಾದಲ್ಲಿ ಇರುವಂತೆ ಸೈಲೆಂಟ್ ಮಾಡಿ, ಕೀರ್ತಿನ ಹೈಲೈಟ್ ಮಾಡ್ಬೇಡಿ ಅಂತ ಅಷ್ಟೇ. ಆದ್ರೆ ಈಗ ನಿಮ್ಮಗೆ ಹೊಟ್ಟೆಕಿಚ್ಚು ಬಂದು ಕಾಮೆಂಟ್ ಮಾಡ್ತಿದ್ದೀರಿ. ಈಗ ಲಕ್ಷ್ಮೀಗೆ ನೆಗೆಟಿವ್ ಕಮೆಂಟ್ ಬಂದಿಲ್ಲ ಅಂತ ನಿಮಗೆ ಹೊಟ್ಟೆ ಕಿಚ್ಚು, ಅದಕ್ಕೆ ಹೀಗೆಲ್ಲಾ ಹೇಳ್ತಿದ್ದೀರಿ ಎಂದು ಕೀರ್ತಿ ಫ್ಯಾನ್ಸ್ ಗೆ ಲಕ್ಷ್ಮೀ ಫ್ಯಾನ್ಸ್ ತಿರುಗೇಟು ನೀಡಿದ್ದಾರೆ. 
 

ಇದಕ್ಕೆ ಖಡಕ್ ಆಗಿ ಉತ್ತರಿಸಿರುವ ಕೀರ್ತಿ ಅಭಿಮಾನಿ ಏನಮ್ಮಾ ಹೇಳ್ತಾ ಇರೋದು ನೀವು?ಅವ್ಳು ಕುಣಿದಿದ್ದು ಪ್ರಾಬ್ಲಂ ಅಲ್ಲ ಲಕ್ಷ್ಮೀ ನಾ ಸೈಲೆಂಟ್ ಮಾಡಿ ಅವಳನ್ನ ಕುಣಿಸಿದ್ದು ಪ್ರಾಬ್ಲಂ? ಅಲ್ಲ ಲಕ್ಷ್ಮೀ ಹೊಟ್ಟೆಗೆ ಚಾಕು ಬಿದ್ದು ಆಸ್ಪತ್ರೆಯಲ್ಲಿ ಪ್ರಜ್ಞೆ ಇಲ್ಲದೇ ಮಲಗಿದ್ಲು.ಪ್ರಜ್ಞೆ ಇಲ್ಲದೇ ಮಲಗಿದ್ದಿದ್ದು ಸೈಲೆಂಟ್ ಮಾಡಿದ್ದಾ? ಹಾಗಾದ್ರೆ ತಮ್ಮ ಪ್ರಕಾರ ಮತ್ತೇನು ಮಾಡಬೇಕಿತ್ತು?ಪ್ರಜ್ಞೆ ಇಲ್ಲದೇ ಮಲಗಿದ್ದಲ್ಲಿಂದ ಲಕ್ಷ್ಮೀ ನಾ ಎಬ್ಬಿಸಿ ಡ್ಯಾನ್ಸ್ ಮಾಡಿಸಬೇಕಿತ್ತಾ ಕೀರ್ತಿ ಬದಲಿಗೆ. ಏನು ಅಂಥ ಮಾತಾಡ್ತೀರೋ.ಅಲ್ಲಿ ಕೀರ್ತಿ ಕಾವೇರಿಯ ಎಲ್ಲಾ ನಿಜ ಗೊತ್ತಾಗಿ ಹೋಗ್ತಾ ಇರ್ರ್ಬೇಕಾದ್ರೆ ದೇವಿ ಹತ್ರ ಮೆರವಣಿಗೆ ಹೋಗ್ತಾ ಇತ್ತು.ಇಷ್ಟಕ್ಕೂ ದೇವಿಗೆ ಭಕ್ತಿ ರೂಪದಲ್ಲಿ ನೃತ್ಯ ಸಮರ್ಪಣೆ ಮಾಡಿ ಕೋರಿಕೆ ಕೇಳಿಕೊಳ್ಳೋದ್ರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ. 
 

Latest Videos

click me!