ಅಮೃತಧಾರೆ ಸೀರಿಯಲ್ ನಲ್ಲಿ ವನಿತಾ ವಾಸು (Vanitha Vasu) ಖಡಕ್ ವಿಲನ್ ಆಗಿ ಗಮನ ಸೆಳೆಯುತ್ತಿದ್ದರೆ. ಇವರ ನಟನೆ ನೋಡ್ತಿದ್ರೆ ನಿಜಕ್ಕೂ ವೀಕ್ಷಕರಿಗೆ ಕೋಪ ಬರುವಂತಿರುತ್ತೆ, ಅಷ್ಟೊಂದು ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಾರೆ ವನಿತಾ ವಾಸು.
27
ಅದರಲ್ಲೂ ಸೀರಿಯಲ್ ಗಳಲ್ಲಿ ವನಿತಾ ವಾಸು ರಿಚ್ ಲುಕ್ ತುಂಬಾನೆ ಫೇಮಸ್. ಅಮೃತಧಾರೆಯೂ ಆಗಿರಬಹುದು, ಅನುಪಲ್ಲವಿ ಸೀರಿಯಲ್ ಕೂಡ ಆಗಿರಬಹುದು. ಎರಡರಲ್ಲೂ ವನಿತಾ ವಾಸು ಅವರದು ಶ್ರೀಮಂತ ಲುಕ್.
37
ಅಮೃತಧಾರೆಯಲ್ಲಿ (Amruthadhaare serial) ಶಕುಂತಲಾ ಪಾತ್ರಕ್ಕಾಗಿ ದಪ್ಪ ಅಂಚಿನ ರೇಷ್ಮೆ ಸೀರೆಯುಟ್ಟು, ಸೀರೆಗೆ ಮ್ಯಾಚ್ ಆಗುವಂತೆ ಆಭರಣ ತೊಟ್ಟು, ಬಳೆ ತೊಟ್ಟು ಮೇಕಪ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ವನಿತಾವಾಸು.
47
ಅನುಪಲ್ಲವಿಯಲ್ಲೂ (Anupallavi) ಅಷ್ಟೇ, ಜರತಾರಿ ಸೀರೆ, ಹುಬ್ಳಿಯ ಇಳ್ಕಲ್ ಸೀರೆ, ಮೈತುಂಬಾ ಆಭರಣ, ಮುಖ ತುಂಬಾ ಮೇಕಪ್ ಹಾಕಿಕೊಂಡು ಖಡಕ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.
57
ಆದರೆ ರಿಯಲ್ ಲೈಫಲ್ಲಿ ವನಿತಾ ವಾಸು ತುಂಬಾನೆ ಸಿಂಪಲ್. ಇದಕ್ಕೆ ಸಾಕ್ಷಿ, ನಟಿ ಇತ್ತೀಚೆಗೆ ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಫೋಟೊಗಳು. ಈ ಫೋಟೊದಲ್ಲಿ ಟಾಪ್ ಧರಿಸಿದ್ದು, ಕತ್ತಲ್ಲೊಂದು ಪುಟ್ಟ ಚೈನ್ ಧರಿಸಿ ಸಿಂಪಲ್ ಲುಕ್ ನಲ್ಲಿ ಮುದ್ದಾಗಿ ಕಾಣಿಸ್ತಿದ್ದಾರೆ.
67
90ರ ದಶಕದ ಮಾಡರ್ನ್ ಹೀರೋಯಿನ್ ವನಿತಾ ವಾಸು, ಅವತ್ತಿಗೂ ತಮ್ಮ ಸ್ಟೈಲ್ ನಿಂದ ಹೇಗೆ ಮೋಡಿ ಮಾಡುತ್ತಿದ್ದರೋ, ಇವತ್ತಿಗೂ ಅಷ್ಟೇ ಸ್ಟೈಲಿಶ್ ಅವರು. ಆದ್ರೆ ರಿಯಲ್ ಆಗಿ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಾರೆ ಈ ಬೆಡಗಿ.
77
ನಟರು ಅಂದಮೇಲೆ ಮೇಕಪ್ ಮಾಡೋದು ಸಾಮಾನ್ಯ, ಆದರೆ ರಿಯಲ್ ಆಗಿ ವನಿತಾ ವಾಸು ತುಂಬಾನೆ ಕಡಿಮೆ ಮೇಕಪ್ ಮಾಡಿಕೊಂಡು, ಲಿಪ್ಸ್ಟಿಕ್ ಹಚ್ಚಿಕೊಂಡು ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ನಿಮಗೆ ವನಿತಾವಾಸು ಅವರ ಯಾವ ಲುಕ್ ಇಷ್ಟ ಆಯ್ತು.