ಅಮೃತಧಾರೆ ಧಾರಾವಾಹಿಯಲ್ಲಿ (Amruthadhaare serial) ದಿನ ದಿನಕ್ಕೆ ಕಥೆ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿದೆ. ಗೌತಮ್ ಕುಟುಂಬಕ್ಕೆ ಹಲವು ಕಂಟಕಗಳು ಬರುತ್ತಲೇ ಇರೋದರಿಂದ ಗರ್ಭಿಣಿಯಾಗಿರುವ ಭೂಮಿಕಾ ಬಗ್ಗೆ ವಿಪರೀತ ಕಾಳಜಿ ವಹಿಸುತ್ತಾನೆ. ಭೂಮಿಯ ಪ್ರತಿ ಕ್ಷಣಗಳನ್ನು ಮಾನಿಟರ್ ಮಾಡ್ತಾನೆ ಗೌತಮ್.
27
ಭೂಮಿಕಾ ದೇವಸ್ಥಾನಕ್ಕೆ ಹೋದ್ರೂ ಯಾಕೆ ಹೋದ್ರಿ ಎಂದು ಗದರುವ, ಭೂಮಿಕಾ ಗರ್ಭಿಣಿ ಬಯಕೆಯನ್ನು ತೀರಿಸಲು, ಕೆಲಸದವರ ಬಳಿ, ಮಾವಿನಕಾಯಿ, ಹುಳಿ, ಉಪ್ಪು, ಮಣ್ಣು ಹೀಗೆ ಗರ್ಭಿಣಿಯರು ಯಾವುದನ್ನೆಲ್ಲಾ ಇಷ್ಟ ಪಡ್ತಾರೋ ಅದನ್ನೆಲ್ಲಾ ಹಿಡಿದುಕೊಂಡು ಭೂಮಿಕಾ ಹಿಂದೆ ಮುಂದೆ ಸುತ್ತೋದಕ್ಕೆ ಹೇಳಿದ್ದಾರೆ.
37
ಅಷ್ಟೇ ಅಲ್ಲ, ಭೂಮಿಕಾ ಎದ್ದು ಹೆಚ್ಚು ನಡೆದಾಡಬಾರದು, ಕೆಲಸ ಮಾಡಬಾರದು ಎಂದು ಸ್ಟ್ರಿಕ್ಟ್ ವಾರ್ನಿಂಗ್ ಕೊಟ್ಟಿದ್ದಾನೆ. ಹಾಗಾಗಿ ಈಗ ಭೂಮಿಕಾಗೆ ಬಂಗಾರದ ಪಂಜರದಲ್ಲಿರೋ ಹಾಗಾಗಿದೆ. ಆದರೆ ಗೌತಮ್ ಪ್ರೀತಿ ಮಾತ್ರ ಎಲ್ಲವನ್ನೂ ಮರೆಸಿದೆ.
47
ಭೂಮಿಕಾ ಗಂಡನ ಮೇಲೆ ಹುಸಿ ಮುನಿಸು ತೋರಿಸುತ್ತಾ, ಯಾಕಾದ್ರೂ ಪ್ರಗ್ನೆಂಟ್ ಆಗ್ಬಿಟ್ಟೆ ಅನಿಸಿಬಿಟ್ಟಿದೆ, ಎಲ್ಲೂ ಫ್ರೀ ಆಗಿ ಓಡಾಡದ ಹಾಗೆ ಮಾಡಿದ್ದೀರಿ. ನಂಗಂತೂ ಸಾಕಾಗಿ ಹೋಗಿದೆ ಎನ್ನುತ್ತಾಳೆ. ಆವಾಗ ಗೌತಮ್, ಇದು ನಮ್ಮ ಕನಸಿಗೋಸ್ಕರ ಎನ್ನುತ್ತಾರೆ.
57
ಒಂದು ಕಡೆ ಗೌತಮ್ ಭೂಮಿ ಸುತ್ತ ಪ್ರೀತಿ ಕೋಟೆ ಕಟ್ತಿದ್ರೆ.. ಮತ್ತೊಂದು ಕಡೆ ಕೋಟೆಗೆ ಮುತ್ತಿಗೆ ಹಾಕಿ ಕೋಟೆನೇ ಧ್ವಂಸ ಮಾಡೋ ಪ್ರಯತ್ನದಲ್ಲಿದ್ದಾರೆ ಕೇಡಿಗಳು! ಹೌದು ಶಕುಂತಲಾ ಮತ್ತು ಅವರ ಅಣ್ಣ ಇಬ್ಬರು ಸೇರಿ ಭೂಮಿಕಾ ಕಥೆ ಮುಗಿಸುವ ಪ್ಲ್ಯಾನ್ ಮಾಡಿದ್ದಾರೆ.
67
ಅಣ್ಣನ ಬಳಿ ತನ್ನ ಪ್ಲ್ಯಾನ್ ಹೇಳುತ್ತಾ, ಶಕುಂತಲಾ, ಈಗಷ್ಟೇ ಕೆಲಸದವರು ನೆಲ ಒರೆಸಿ ಹೋಗಿದ್ದಾರೆ. ನಾನು ಅಲ್ಲಿ ಒಂದಷ್ಟು ನೀರು ಚೆಲ್ಲಿ, ಕರೆಂಟ್ ಶಾಕ್ ಹೊಡೆಯೋ ಥರ ಮಾಡಿದ್ದೀನಿ. ಇನ್ನು ಭೂಮಿಕಾ ಕಥೆ ಮುಗಿದಂತೆ ಎನ್ನುತ್ತಿದ್ದಾರೆ.
77
ಹಾಗಿದ್ರೆ ಮುಂದೆ ಏನಾಗುತ್ತೆ? ಇಲ್ಲೂ ಕೂಡ ಭೂಮಿಕಾ ಶಾಕ್ ಹೊಡೆದು, ಮಗುವನ್ನು ಕಳೆದುಕೊಳ್ಳುತ್ತಾಳೋ? ಅಥವಾ ಭೂಮಿಕಾನೆ ಸಾಯುತ್ತಾಳ? ಅಥವಾ ಶಕುಂತಲಾ ಪ್ಲ್ಯಾನ್ ಫ್ಲಾಪ್ ಆಗುತ್ತಾ? ಯಾವುದಕ್ಕೂ ಕಾದು ನೋಡಬೇಕು.