Officially Mrs ಆಗ್ಬಿಟ್ರು ಗುಳಿಗೆನ್ನೆ ಚೆಲುವೆ ವೈಷ್ಣವಿ ಗೌಡ… ಮದುವೆ ಫೋಟೊ ವೈರಲ್

Published : Jun 06, 2025, 06:00 PM ISTUpdated : Jun 06, 2025, 06:05 PM IST

ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಮದುವೆಯ ಮಧುರ ಕ್ಷಣಗಳ ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

PREV
17

ಕನ್ನಡ ಕಿರುತೆರೆಯಲ್ಲಿ ಅಗ್ನಿ ಸಾಕ್ಷಿಯ ಸನ್ನಿಧಿಯಾಗಿ, ಸೀತಾ ರಾಮ ಧಾರಾವಾಹಿಯ ಸೀತೆಯಾಗಿ ಹಲವು ವರ್ಷಗಳಿಂದ ಕನ್ನಡಿಗರ ಫೇವರಿಟ್ ನಾಯಕಿಯಾಗಿ ಮಿಂಚುತ್ತಿರುವ ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ, (Vaishnavi Gowda) ಅನುಕೂಲ್ ಮಿಶ್ರಾ ಎನ್ನುವವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

27

ಹಲವು ವರ್ಷಗಳಿಂದ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ? ನಿಮ್ಮ ಮದುವೆ ಯಾವಾಗ ಎನ್ನುವ ಪ್ರಶ್ನೆ ಕೇಳುತ್ತಲೇ ಇದ್ದರು. ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲಾ ಪ್ರಶ್ನೆಗಳಿಗೆ ನಟಿ ಉತ್ತರ ನೀಡಿದ್ದರು. ಇದೀಗ ಸೀತಾ ರಾಮ ಸೀರಿಯಲ್ (Seetha Raama Serial) ಮುಗಿಯುತ್ತಿದ್ದಂತೆ ಸಪ್ತಪದಿ ತುಳಿದಿದ್ದಾರೆ.

37

ನಟಿ ವೈಷ್ಣವಿ ಅವರು ಅನುಕೂಲ್ ಮಿಶ್ರಾ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ಫೋಟೊ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು, ಇದೀಗ ವೈಷ್ಣವಿ ಗೌಡ ತಮ್ಮ ಇನ್’ಸ್ಟಾಗ್ರಾಂನಲ್ಲಿ Officially Mr and Mrs ಅಂತ ಕ್ಯಾಪ್ಷನ್‌ ಕೊಟ್ಟು ಅಗ್ನಿ ಸಾಕ್ಷಿಯಾಗಿ ತಾಳಿಕಟ್ಟುವ ಸಂಭ್ರಮದ ಫೋಟೊಗಳನ್ನು ಶೇರ್ ಮಾಡಿದ್ದಾರೆ.

47

ಮದುವೆ ಸಮಾರಂಭದಲ್ಲಿ ವೈಷ್ಣವಿ ಗೌಡ ಹಳದಿ ಮತ್ತು ಕೆಂಪು ಬಣ್ಣದ ರೇಷ್ಮೆ ಸೀರೆಯುಟ್ಟಿದ್ದರೆ, ಅನುಕೂಲ್ ಮಿಶ್ರಾ (Anukul Mishra) ಪಂಚೆ ಮತ್ತು ಶೆರ್ವಾನಿ ಧರಿಸಿದ್ದಾರೆ. ಅಗ್ನಿ ಸಾಕ್ಷಿಯಾಗಿ, ಸಪ್ತಪದಿ ತುಳಿಯುವ ಸಿಂಧೂರ ಹಚ್ಚುವ ಫೋಟೊಗಳನ್ನು ನಟಿ ಶೇರ್ ಮಾಡಿದ್ದಾರೆ.

57

ವೈಷ್ಣವಿ ಗೌಡ ಮದುವೆ (Vaishnavi Gowda Marriage) ಸಮಾರಂಭಗಳು ಹಲವು ದಿನಗಳಿಂದ ಅದ್ಧೂರಿಯಾಗಿ ನಡೆಯುತ್ತಿದ್ದು, ಹಳದಿ, ಸಂಗೀತ್, ಮೆಹೆಂದಿ ಎನ್ನುತ್ತಾ ಹಲವು ಸಂಭ್ರಮಗಳ ಫೋಟೊಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು.

67

ವೈಷ್ಣವಿ ಅವರ ಪತಿ ಅನುಕೂಲ್ ಮಿಶ್ರಾ ಛತ್ತೀಸ್ ಗಡದವರಾಗಿದ್ದು, ಇವರು ಏರ್ ಫೋರ್ಸ್ ನಲ್ಲಿ (Air Force) ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಸಂದರ್ಶನದಲ್ಲಿ ನಟಿ ನಮ್ಮದು ಲವ್ ಮ್ಯಾರೇಜ್ ಅಲ್ಲ, ಮನೆಯವರೇ ನೋಡಿ ಮಾಡಿರುವ ಅರೇಂಜ್ ಮ್ಯಾರೇಜ್ ಎಂದು ಹೇಳಿದ್ದರು.

77

ವೈಷ್ಣವಿ ಗೌಡ ಮದುವೆ ಫೋಟೊಗಳು ವೈರಲ್ ಆಗುತ್ತಿದ್ದು, ಸಿನಿಮಾ, ಸೀರಿಯಲ್ ತಾರೆಯರು, ಅಭಿಮಾನಿಗಳು ನಟಿಗೆ ಶುಭಾಶಯ ಕೋರಿದ್ದಾರೆ. ಮದುವೆ ಸಮರಂಭದಲ್ಲೂ ಸಹ, ಹಿರಿತೆರೆ, ಕಿರುತೆರೆಯ ಸೆಲೆಬ್ರಿಟಿಗಳು ಆಗಮಿಸಿ ಸಂಭ್ರಮಿಸಿದ್ದರು.

Read more Photos on
click me!

Recommended Stories