ಲಕ್ಷ್ಮೀ ನಿವಾಸದಲ್ಲಿ ಮಹಾತಿರುವು : ಜಾಹ್ನವಿ ಮುಂದೆ ಬಯಲಾಗುತ್ತಿದೆ ಸೈಕೋ ಜಯಂತ್ ಮುಚ್ಚಿಟ್ಟ ರಹಸ್ಯ!

Published : Nov 13, 2024, 03:25 PM ISTUpdated : Nov 13, 2024, 03:53 PM IST

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾರಿ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಇದೀಗ ಮನೆಬಿಟ್ಟು ಹೊರಟಿರುವ ಜಾಹ್ನವಿಯ ಮುಂದೆ ಜಯಂತನ ಜೀವನದ ಕಥೆ ಅನಾವರಣವಾಗಿದೆ.   

PREV
18
ಲಕ್ಷ್ಮೀ ನಿವಾಸದಲ್ಲಿ ಮಹಾತಿರುವು : ಜಾಹ್ನವಿ ಮುಂದೆ ಬಯಲಾಗುತ್ತಿದೆ ಸೈಕೋ ಜಯಂತ್ ಮುಚ್ಚಿಟ್ಟ ರಹಸ್ಯ!

ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ತನ್ನ ಗಂಡ ಜಯಂತ್ ತನ್ನನ್ನು ತುಂಬಾನೆ ಪ್ರೀತಿಸ್ತಾನೆ, ಅದಕ್ಕಾಗಿ ಇಷ್ಟೊಂದು ಪಾಸಿಸಿವ್ ಆಗಿರೋದು ಅಂತ ಅಂದುಕೊಂಡಿದ್ದ, ಚಿನ್ನುಮರಿ ಜಾಹ್ನವಿ ಮುಂದೆ ಜಯಂತನದ್ದು ಕೇವಲ ಪಾಸೆಸಿವ್ ನೆಸ್ ಅಲ್ಲ, ಆತ ಒಬ್ಬ ಸೈಕೋ ಅನ್ನೋದು ಸತ್ಯ ಒಂದೊಂದಾಗಿ ರಿವೀಲ್ ಆಗುತ್ತಿದೆ. 
 

28

ಮೊದಲಿಗೆ ಮನೆಯಿಂದ ಕಾಣೆಯಾಗಿದ್ದ ಸೆಕ್ಯೂರಿಟಿ ಮೂಲಕ ತನ್ನ ಗಂಡ ಎಂತವನು ಅನ್ನೋದನ್ನು ತಿಳಿದ ಜಾಹ್ನವಿಗೆ, ನಂತರ ಹಿಂದೆ ನಡೆದು ಹೋದ ಎಲ್ಲಾ ಘಟನೆಗಳು ಹಾಗೂ ಮಧ್ಯ ರಾತ್ರಿ ಎದ್ದು ಜಯಂತ್ ಮನೆ ಕ್ಲೀನ್ ಮಾಡುತ್ತಿರುವ ರೀತಿ, ಗಿಡಗಳ ಬಳಿ ಮಾತನಾಡುವ ವಿಧಾನ ನೋಡಿಯಾದ ಮೇಲೆ ತನ್ನ ಗಂಡ ಸೈಕೋ ಅನ್ನೋದು ತಿಳಿದು ಹೋಗಿದೆ. 
 

38

ಇನ್ನೊಂದೆಡೆ ಸೆಕ್ಯೂರಿಟಿ ಜಯಂತ್ ಕೈಗೆ ಸಿಕ್ಕಿಹಾಕಿಕೊಂಡು, ಮತ್ತೆ ಒದೆ ತಿಂದು ಅವನ ಕೈಯಿಂದ ತಪ್ಪಿಸಿಕೊಂಡಿದ್ದಾನೆ. ಇತ್ತ ಜಾಹ್ನವಿ ಜಯಂತ್ ಮನೆಗೆ ಬರೋದಕ್ಕೂ ಮುನ್ನ, ಮನೆ ಬಿಡುವ ಪ್ಲ್ಯಾನ್ ಮಾಡಿ, ಮನೆಯಿಂದ ಹೊರ ನಡೆದು, ನೇರವಾಗಿ ಹೋಗಿದ್ದು, ಜಯಂತ್ ಬೆಳೆದಂತಹ ಆಶ್ರಮಕ್ಕೆ. ಆ ಮೂಲಕ ಸೀರಿಯಲ್ ನಲ್ಲಿ ದೊಡ್ಡದಾದ ತಿರುವು (big twist) ಸಿಕ್ಕಿದೆ. 
 

48

ಆಶ್ರಮಕ್ಕೆ ತೆರಳಿದ್ರೆ ಜಯಂತ್ ಬಗ್ಗೆ ಎಲ್ಲಾ ತಿಳಿದುಕೊಳ್ಳಬಹುದು ಎನ್ನುತ ಆಶ್ರಮಕ್ಕೆ ತೆರಳುವ ಜಾಹ್ನವಿಗೆ ಆಶ್ರಮದ ಫಾದರ್ ಮೊದಲಿಗೆ ಹೆದರಿಕೊಂಡು ನಂತರ ನಿಮಗೆ ಜಯಂತ್ ಬಗ್ಗೆ ಎಲ್ಲವನ್ನೂ ಹೇಳ್ತೀನಿ ಎನ್ನುತ್ತಾರೆ. ಇದರ ಜೊತೆಗೆ ಜಯಂತ್ ನ ಬಾಲ್ಯದ ಹಾಗೂ ಯುವಕನಾಗಿರುವಾಗ ನಡೆದ ಘಟನೆಗಳನ್ನ ತೋರಿಸಲಾಗಿದೆ. 
 

58

ಆಶ್ರಮಕ್ಕೆ ಸೇರಿದ ಪುಟ್ಟ ಬಾಲಕ ಜಯಂತ್, ಶ್ರೀಮಂತರೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಾ ಕಾಫಿ ಕೊಡುವ ಯುವಕ ಜಯಂತ್, ಜಯಂತ್ ತಿಂದ ಒದೆ, ಶ್ರೀಮಂತನ ಸಾವು, ಬೇಸರದಲ್ಲಿ ಜಯಂತ್ ಹಾಗೂ ಉರಿಯುತ್ತಿರುವ ಚಿತೆಯಿಂದ ಭಸ್ಮ ತೆಗೆದು ಮುಖಕ್ಕೆ ಹಾಕಿ ನೃತ್ಯ ಮಾಡುತ್ತಿರುವ ಜಯಂತ್ ನ ವಿಭಿನ್ನ ಬಣ್ಣಗಳ ಅನಾವರಣ ಜಾಹ್ನವಿ ಮುಂದೆ ಆಗಲಿದೆ. 
 

68

ಲಕ್ಷ್ಮೀ ನಿವಾಸ ಸಿರಿಯಲ್ ಪ್ರೊಮೋ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ  ಥ್ರಿಲ್ ಆಗಿದ್ದಾರೆ. ಈ ದಿನಕ್ಕಾಗಿಯೇ ವೀಕ್ಷಕರು ಕಾಯುತ್ತಿದ್ದರು ಎನ್ನುವಂತೆ ಕಾಮೆಂಟ್ ಮೂಲಕ ಸಂಭ್ರಮ ಹೊರ ಹಾಕಿದ್ದಾರೆ. ಈ ಥರ ಟ್ವಿಸ್ಟ್ ಗೋಸ್ಕರನೇ ಕಾಯ್ತಿದ್ವಿ, ಇನ್ನು ಸೀರಿಯಲ್ ನೋಡೋದಕ್ಕೆ ತುಂಬಾನೆ ಇಂಟ್ರೆಸ್ಟಿಂಗ್ ಆಗಿರುತ್ತೆ ಎಂದಿದ್ದಾರೆ. 
 

78

ಅಷ್ಟೇ ಅಲ್ಲ, ಜಯಂತ್ ಪಾತ್ರದಲ್ಲಿ ನಟಿಸುತ್ತಿರುವ ದೀಪಕ್ ಸುಬ್ರಹ್ಮಣ್ಯ (Deepak Subramanya) ನಟನೆಗೆ ಫುಲ್ ಮಾರ್ಕ್ ನೀಡಿರುವ ವೀಕ್ಷಕರು. ಏನಪ್ಪಾ ನಿನ್ನ ನಟನೆ, ನಟ ಭಯಂಕರ ನೀವು, ಬೆಂಕಿ ನಟನೆ, ಅದ್ಭುತವಾದ ನಟನೆ ನಿಮ್ಮದು ಎಂದು ಹಾಡಿ ಹೊಗಳಿದ್ದಾರೆ. ಇನ್ನೂ ಕೆಲವರು ಆಯ್ತು ಇನ್ನು ಫಾದರ್ ಕಥೆ ಮುಗಿದೇ ಹೋಯ್ತು ಅಂತಾನೂ ಹೇಳಿದ್ದಾರೆ. 
 

88

ಸದ್ಯ ಮನೆಯಲ್ಲಿ ಚಿನ್ನುಮರಿಯನ್ನು ಕಾಣದೇ ಚಡಪಡಿಸುತ್ತಿದ್ದಾನೆ ಜಯಂತ್. ಎಲ್ಲಾ ಗಿಡಗಳ ಬಳಿ ಹೋಗಿ, ಎಲ್ಲಿ ಚಿನ್ನುಮರಿ, ನನ್ನ ಚಿನ್ನುಮರಿ ಎಲ್ಲಿ ಅಂತ ಕೇಳ್ತಿದ್ದಾನೆ. ಇನ್ನು ಚಿನ್ನುಮರಿ ಆಶ್ರಮಕ್ಕೆ ಹೋದ ವಿಷ್ಯ ತಿಳಿದ್ರೆ ಇನ್ನೇನು ಮಾಡಬಹುದು ಜಯಂತ್. ಅಷ್ಟಕ್ಕೂ ಜಾಹ್ನವಿ ಮುಂದೆ ಎಲ್ಲಾ ಸತ್ಯಗಳ ಅನಾವರಣ ಆಗುತ್ತಾ? ಅಥವಾ ಜಯಂತ್ ನಿಂದ ಫಾದರ್ ಕೊಲೆಯಾಗುತ್ತಾ ಅನ್ನೋದನ್ನ ಕಾದು ನೋಡಬೇಕು. 
 

Read more Photos on
click me!

Recommended Stories