ಬಿಗ್‌ಬಾಸ್ ಕನ್ನಡ 11 ರಲ್ಲಿ 7 ನೇ ವಾರ ಮನೆಯಲ್ಲಿ 6 ಜೋಡಿಗಳನ್ನು ಮಾಡಲಾಗಿದೆ. ಈ ವಾರ 10 ಮಂದಿ ಮನೆಯಿಂದ ನಾಮಿನೇಟ್ ಆಗಿದ್ದಾರೆ. ಧನರಾಜ್-ಮೋಕ್ಷಿತಾ, ಹನುಮಂತ-ಗೌತಮಿ, ಸುರೇಶ್-ಅನುಷಾ, ಚೈತ್ರಾ-ಶಿಶಿರ್, ಐಶ್ವರ್ಯಾ-ಧರ್ಮ, ಮಂಜು-ಭವ್ಯಾ ಅವರನ್ನು 7ನೇ ವಾರದ ಟಾಸ್ಕ್ ಗಳಿಗೆ ಜೋಡಿಯನ್ನಾಗಿ ಬಿಗ್‌ಬಾಸ್ ಆಯ್ಕೆ ಮಾಡಿದೆ. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ತ್ರಿವಿಕ್ರಮ್ ಅವರು ತನ್ನ ಉಳಿವಿಗಾಗಿ ಮಂಜು ಅವರೊಂದಿಗೆ ಮಾಡಿಕೊಂಡಿದ್ದ ಮ್ಯಾಚ್ ಫಿಕ್ಸಿಂಗ್ ಗೇಮ್‌ನಿಂದ ಬಿಗ್ ಬಾಸ್ ಬೇಸರ ಮಾಡಿಕೊಂಡು ಈ ವಾರ ಕ್ಯಾಪ್ಟನ್‌ಗೆ ಯಾವುದೇ ವಿಶೇಷ ಅಧಿಕಾರ ನೀಡುತ್ತಿಲ್ಲ. ಸ್ಪರ್ಧಿಗಳೇ ಮಾತನಾಡಿಕೊಂಡು ಒಂದು ಜೋಡಿಯನ್ನು ಈ ವಾರ ನೇರ ನಾಮಿನೇಟ್ ಮಾಡಬೇಕಿತ್ತು. ಅದರಂತೆ ಅನುಷಾ ಮತ್ತು ಸುರೇಶ್ ಜೋಡಿಯನ್ನು ನೇರ ನಾಮಿನೇಷನ್ ಮಾಡಲಾಯ್ತು.
ನೇರ ನಾಮಿನೇಷನ್ ಒಪ್ಪದ ಅನುಷಾ ಮತ್ತು ಸುರೇಶ್ ಇಡೀ ಮನೆಯ ವಿರುದ್ಧ ಖಡಕ್ ಆಗಿ ನಿಂತರು. ಮನೆಯವರು ನೀಡಿದ ಕಾರಣದ ಬಳಿಕ ಇಬ್ಬರು ಕೇಳಿದ ಮರು ಪಶ್ನೆಗೆ ಇಡೀ ಮನೆಯೇ ಗಪ್‌ಚುಪ್ ಆಗಿ ನಿಂತಿತು. ಅನುಷಾ ಪ್ರತಿಯೊಬ್ಬರ ತಪ್ಪನ್ನು ಒತ್ತಿ ಹೇಳಿದರು. ಅವರ ಮಾತಿಗೆ ಮನೆಯ ಯಾರೊಬ್ಬರೂ ಮಾತನಾಡದೆ ಪಿನ್‌ಡ್ರಾಪ್ ಸೈಲೆಂಟ್ ಆದರು. ನಾವ್ಯಾಕೆ ಪ್ರತಿಬಾರಿ ಟಾರ್ಗೆಟ್ ಆಗಬೇಕು ಎಂದು ಅನುಷಾ ಕೇಳಿದರು. ಅನುಷಾ ಅವರು ಅಗ್ರೆಷನ್‌ನಲ್ಲಿ ಇನ್ನೂ ಆಡಬೇಕು ಲಾಸ್ಟ್ನಾಮಿನೇಷನ್ ಬಳಿಕ ಡಲ್ ಆಗಿದ್ದಾರೆಂದು ಧರ್ಮ ಕೀರ್ತಿರಾಜ್ ನಾಮಿನೇಟ್ ಮಾಡಿದ್ದಕ್ಕೆ ಕಾರಣ ಅನುಷಾ ಅವರಿಗೆ ನೀಡಿದರು. ಮೋಕ್ಷಿತಾ ಅವರು ಕಾರಣ ನೀಡಿ ಅನುಷಾ ಅವರ ಬಳಿ ಎಂಟರ್‌ಟೈನ್ ಮೆಂಟ್ ಫ್ಯಾಕ್ಟರ್ ಇಲ್ಲ ಎಂದರು. ಸುರೇಶ್ ಅವರ ವಿರುದ್ಧ ಧನ್‌ರಾಜ್ ಮತ್ತು ಮೋಕ್ಷಿತಾ ಕಾರಣ ನೀಡಿದರು..
ಮನೆಯವರು ನಾಮಿನೇಷನ್ ಗೆ ನೀಡಿದ ಕಾರಣಕ್ಕೆ ಪ್ರತ್ಯುತ್ತರ ನೀಡಿದ ಅನುಷಾ ನೀವೆಲ್ಲರೂ ಎಂಟರ್‌ಟೈನ್ ಅಂತ ಕಾರಣ ನೀಡುತ್ತಿದ್ದೀರಲ್ವಾ? ಮಂಜಣ್ಣ , ಭವ್ಯಾ ಹನುಮಂತು ಬಿಟ್ಟು ಮಿಕ್ಕಿದವರೆಲ್ಲ ಎಷ್ಟು ಎಂಟರ್‌ಟೈನಿಂಗ್ ಆಗಿದ್ದೀರಿ? ಧರ್ಮ- ಅಗ್ರೆಷನ್ ಕಮ್ಮಿ ಆಯ್ತು ಅಂದ್ರಿ ನಿಮಗೆಷ್ಟು ಅಗ್ರೆಷನ್ ಇದೆ. ಗೌತಮಿ ನಿಮ್ಮ ಮುಖಕ್ಕೆ ಹೇಳುತ್ತಿದ್ದೇನೆ ನೀವು ಫೇಕ್. ಮಂಜಣ್ಣ ಮೋಕ್ಷಿತಾ ಬಿಟ್ಟರೆ ನೀವು ಯಾರನ್ನು ಮಾತನಾಡಿಸುವುದಿಲ್ಲ. ನಿಮ್ಮ ಬಳಿಯೇ ಎಲ್ಲರೂ ಬಂದು ಮಾತನಾಡಿಸಬೇಕು.ನೀವೆಷ್ಟು ಆಟ ಗೆದ್ರಿ? ಸುರೇಶ್ ಅವರನ್ನು ಟಾರ್ಗೆಟ್ ಮಾಡಬೇಕು ಅನ್ನುವ ಒಂದು ರೀಸನ್‌ಗೆ ನನ್ನನ್ನೂ ಮಾಡಬೇಕೆಂದು ಕಾರಣ ಹುಡುಕಿ ಹುಡುಕಿ ಕೊಡುತ್ತಿರುವುದು ಕಾಣುತ್ತಿದೆ. ಮೋಕ್ಷಿತಾ ಅವರೇ ನೀವೆಷ್ಟು ಎಂಟರ್‌ಟೈನಿಂಗ್ ಆಗಿದ್ದೀರಿ? ಧನ್‌ರಾಜ್ ನಿಮಗೆ ಟ್ಯಾಲೆಂಟ್ ಇದೆ. ಜೈಲಿನಲ್ಲಿ ಬಿಟ್ರೆ ನಿಮ್ಮ ಟ್ಯಾಲೆಂಟ್ ಎಲ್ಲೂ ನೋಡಿಲ್ಲ.
ಐಶ್ವರ್ಯಾ ಅವರೇ ನೀವು ಚಿಕ್ಕ ಮಕ್ಕಳ ತರ ಆಡಿಕೊಂಡು ಇರುತ್ತೀರಿ ಬಿಟ್ಟರೆ ಏನೂ ಕಾಣಿಸುತ್ತಿರಲ್ಲ. ಮನೆಯಲ್ಲಿ ನನ್ನ ಭಾಗವಹಿಸುವಿಕೆ ಕಮ್ಮಿ ನೀವೆಷ್ಟು ಭಾಗಿಯಾಗಿದ್ದೀರಿ ಎಷ್ಟು ಎಂಟರ್‌ಟೈನಿಂಗ್ ಆಗಿದ್ದೀರಿ? ನನಗೂ ಎರಡು ಕಣ್ಣಿದೆ ನೋಡುತ್ತಿದ್ದೇನೆ. ಸಿಕ್ಕಿರುವ ಟಾಸ್ಕ್ ಅನ್ನು ನೀವೆಷ್ಟು ಚಂದ ಆಡಿದ್ದಿರಿ. ಧರ್ಮ ನೀವು ಎಲ್ಲೂ ಆಟ ಆಡೇ ಇಲ್ಲ. ಮನೆಯಲ್ಲಿ ಎಷ್ಟು ನಿಮ್ಮ ಭಾಗವಹಿಸುವಿಕೆಯಿದೆ? ಎಂದು ಧರ್ಮ ಅವರನ್ನು ಪ್ರಶ್ನಿಸಿದರು. ಇದು ಧರ್ಮ ಮತ್ತು ಅನುಷಾ ಅವರ ಮಧ್ಯೆ ವಾಗ್ವಾದಕ್ಕೆ ಕಾರಣವಾಯ್ತು. ದಯವಿಟ್ಟು ನನ್ನ ಮೇಲೆ ಕೋಪ ಮಾಡಿಕೊಂಡು ಮಾತನಾಡಬೇಡಿ. ವೈಯಕ್ತಿಕ ಟಾರ್ಗೆಟ್ ಮಾಡಬೇಡಿ. ನನ್ನ ಬಗ್ಗೆ ನಾನು ಒಪ್ಪಿಕೊಂಡಿರುವೆ. ಮನೆ ಮಂದಿ ಎಲ್ಲಾ ಸೇರಿಕೊಂಡು ನನ್ನನ್ನು ನಾಲಾಯಕ್ ಬೇವರ್ಸಿ ಎಂದು ಉಗಿದ್ದಿದ್ದಾರೆ ಅಷ್ಟು ಸಾಲದಾ? ನನ್ನ ಭಾಗವಹಿಸುವಿಕೆ ಕಮ್ಮಿ ಇದೆ ಅಂದ್ರಲ್ಲ ಎಂದು ಧರ್ಮ ಬೇಸರ ಮಾಡಿಕೊಂಡರು. ನಾನಿದು ಎಲ್ಲರಿಗೂ ಹೇಳ್ತಿದ್ದೀನಿ, ನೀವ್ಯಾಕೆ ಹೀಗಾಡುತ್ತಿದ್ದಾರೆ ಎಂದರು.
ಇನ್ನು ನಾಮಿನೇಷನ್ ಪ್ರಕ್ರಿಯೆಯಲ್ಲಿ ನನ್ನ ಉಳಿಯುವಿಕೆ ತುಂಬಾ ಮುಖ್ಯ ಎಂದು ಶಿಶಿರ್ ಬಳಿ ಚೈತ್ರಾ ಕುಂದಾಪುರ ಹೇಳಿದರು. ಸಾಕಷ್ಟು ವಿಚಾರಗಳನ್ನು ಹೊರಗಡೆ ಬಿಟ್ಟು ನಾನು ಬಂದಿದ್ದೇನೆ. ನಾನು ಈ ವೇದಿಕೆಯಿಂದ ದೊಡ್ಡ ಸಂದೇಶವನ್ನು ಸಮಾಜಕ್ಕೆ ತಿಳಿಸಬೇಕು. ಎಲ್ಲಾ ಮಾತುಗಳನ್ನು ಕೇಳಿಸಿಕೊಂಡ ಶಿಶಿರ್ ಕೊನೆಗೆ ತಾನೇ ನಾಮಿನೇಟ್ ಗೆ ಹೋಗುತ್ತೇನೆ ಎಂದರು. ಚೈತ್ರಾ ಅವರನ್ನು ಉಳಿಸಿದರು. ಇದಾದ ಬಳೀಕ ಚೈತ್ರಾ ಅತ್ತರು.
ಇನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಜೋಡಿ ಮಧ್ಯೆ ಅರ್ಹತೆ ಇಲ್ಲದ ಒಬ್ಬರನ್ನು ಒಮ್ಮತದಿಂದ ಒಪ್ಪಿ ನಾಮಿನೇಟ್ ಮಾಡಬೇಕು. ಐಶ್ವರ್ಯಾ ಮತ್ತು ಧರ್ಮ ಕೀರ್ತಿರಾಜ್ ನಲ್ಲಿ ಇಬ್ಬರೂ ವಾದ ಮಾಡಿಕೊಂಡು ಕೊನೆಗೆ ಐಶ್ವರ್ಯಾ ಅವರು ಸೇವ್ ಆಗಿ ಧರ್ಮ ಅವರು ನಾಮಿನೇಟ್ ಆದರು.
ಇನ್ನು ಗೌತಮಿ ಮತ್ತು ಹನುಮಂತ ಜೋಡಿಯಲ್ಲಿ ಇಬ್ಬರೂ ಕೂಡ ನಾಮಿನೇಟ್ ಮಾಡಲು ಒಪ್ಪಲಿಲ್ಲ. ಹನುಮಂತ ಆಗಬಾರದು ಎಂದು ಗೌತಮಿ ಅವರು , ಗೌತಮಿ ಆಗಬಾರದೆಂದು ಹನುಮಂತ ಹೀಗಾಗಿ ಇಬ್ಬರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ. ಇಬ್ಬರೂ ನಾಮಿನೇಟ್ ಆದರು.
ಇನ್ನು ಮೋಕ್ಷಿತಾ ಮತ್ತು ಧನ್‌ರಾಜ್ ಮಧ್ಯೆ ನಾಮಿನೇಷನ್ ಬಂದಾಗ ಇಬ್ಬರೂ ವಾದ ಮಾಡಿಕೊಂಡರು. ಆದರೆ ಬಜರ್ ಮುಗಿದರು ಅವರ ವಾದ ಮುಂದುವರೆಯುತ್ತಾ ಮನೆಯಲ್ಲಿ ಇರುವುದಕ್ಕೆ ನನಗೆ ಅರ್ಹತೆ ಇದೆ ಎಂದು ಇಬ್ಬರೂ ಹೇಳಿದರು. ನಿಯಮದಂತೆ ಇಬ್ಬರೂ ಕೂಡ ನಾಮಿನೇಟ್ ಆದರು.
ಮೋಕ್ಷಿತಾ: ಮನೆಯಲ್ಲಿ ನಡೆಯುವ ಸಂಗತಿಯನ್ನು ನಾನು ಕರೆಕ್ಟ್ ಆಗಿ ಅರ್ಥ ಮಾಡಿಕೊಳ್ಳುತ್ತೇನೆ. ಎಷ್ಟೋ ವಿಚಾರಗಳಲ್ಲಿ ನಿಮ್ಮ ಇನ್ವಾಲ್‌ಮೆಂಟ್ ಕಡಿಮೆ ಇದೆ. ಹನುಮಂತನ ಜೊತೆಗೆ ಇರುತ್ತೀರಿ.
ಧನ್‌ರಾಜ್: ನಾನು ಜೈಲಿನಲ್ಲಿ ಹಣ್ಣು ತಿಂದಿದ್ದಕ್ಕೆ ಕ್ಷಮೆ ಕೇಳಿದ್ದೇನೆ. ಆ ಘಟನೆ ನನಗೆ ಪಾಠ ಆಗಿದೆ. ನೀವು, ಮಂಜಣ್ಣ ಮತ್ತು ಗೌತಮಿ ಮಾತ್ರ ಇರುತ್ತೀರಿ. ಅದು ಬಿಟ್ರೆ ಯಾರ ಜೊತೆಗೂ ಇರುವುದಿಲ್ಲ. ಹನುಮಂತನ ಜೊತೆಗೆ ನಾನು ಇರುತ್ತೇನೆ ನೀವು ಎಲ್ಲರ ಜೊತೆಗೂ ಬೆರೆಯುತ್ತೀರಿ ಎಂದರೆ ನಮ್ಮ ಜೊತೆಗೆ ಬಂದು ಮಾತನಾಡಬಹುದಿತ್ತು. ನೀವು ಬಂದಿಲ್ಲ.
ಇನ್ನು ಮಂಜು ಮತ್ತು ಭವ್ಯಾ ಗೌಡ ನಾಮಿನೇಷನ್ ಗೆ ಬಂದಾಗ ನಿಮಗೆ ಉಳಿದುಕೊಳ್ಳಲು ಅರ್ಹತೆ ಇಲ್ಲ ಎಂದು ಹೇಳುವುದುದಿಲ್ಲ. ಅರ್ಹತೆ ಇದೆ. ಕೆಲವೊಂದು ವಿಚಾರದಲ್ಲಿ ಎಡವಿದ್ದೀರಿ. ಈ ಸಲ ನನ್ನ ಸ್ಟಾಡ್ ಏನಿದೆ ನಾನು ತೆಗೆದುಕೊಂಡೇ ತೆಗೆದುಕೊಳ್ಳುತ್ತೇನೆ ಎಂದು ಭವ್ಯಾ ಗಟ್ಟಿಯಾಗಿ ನಿಂತರು. ಕೊನೆಗೆ ಮಂಜು ಕೂಡ ತಗ್ಗಿ-ಬಗ್ಗಿ ಬರಲು ಒಪ್ಪದೇ ಇದ್ದಾಗ ಇಬ್ಬರೂ ಕೂಡ ನಾಮಿನೇಟ್ ಆದರು.
ಇನ್ನು ಈವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆದವರು. ಧರ್ಮ, ಧನ್‌ರಾಜ್-ಮೋಕ್ಷಿತಾ, ಸುರೇಶ್- ಅನುಷಾ, ಭವ್ಯಾ-ಮಂಜು, ಶಿಶಿರ್, ಗೌತಮಿ-ಹನುಮಂತ. ಒಟ್ಟು 10 ಮಂದಿ ನಾಮಿನೇಟ್ ಆಗಿದ್ದಾರೆ.