ತೆಲುಗು ಬಿಗ್ಬಾಸ್ ಮನೆಯಿಂದ ಕಳೆದ ವಾರ ಗಂಗವ್ವ ಹೊರಬಂದ್ರು. ಎಲಿಮಿನೇಟ್ ಆಗದೆ ಗಂಗವ್ವ ಶೋಗೆ ಗುಡ್ ಬೈ ಹೇಳಿದ್ರು. ವೈಯಕ್ತಿಕ ಕಾರಣಗಳಿಂದ ಗಂಗವ್ವ ಹೊರಬಂದಿದ್ದಾರೆ. ಹೀಗಾಗಿ ನಾಮಿನೇಷನ್ಸ್‌ನಲ್ಲಿದ್ದ ಸ್ಪರ್ಧಿಗಳು ಒಬ್ಬೊಬ್ಬರಾಗಿ ಸೇವ್ ಆಗ್ತಾ ಬಂದ್ರು. ಕೊನೆಗೆ ಯಶ್ಮಿ-ಹರಿತೇಜ ಉಳಿದ್ರು. ಇವರಿಬ್ಬರಲ್ಲಿ ಹರಿತೇಜ ಎಲಿಮಿನೇಟ್ ಆದ್ರು ಅಂತ ನಾಗಾರ್ಜುನ ಹೇಳಿದ್ರು.
ಹೀಗಾಗಿ ಗಂಗವ್ವ, ಹರಿತೇಜ ಹೊರಹೋಗಿ ಬಿಗ್ ಬಾಸ್ ಮನೆಯಲ್ಲಿ 10 ಜನ ಕಂಟೆಸ್ಟೆಂಟ್ಸ್ ಉಳಿದ್ರು. ಸೋಮವಾರ ನಾಮಿನೇಷನ್ಸ್ ಪ್ರಕ್ರಿಯೆ ಮುಗೀತು. ಯಶ್ಮಿ, ಗೌತಮ್, ವಿಷ್ಣುಪ್ರಿಯ, ಟೇಸ್ಟಿ ತೇಜ, ಪೃಥ್ವಿ, ಅವಿನಾಶ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಮುಂದಿನ ವಾರ ಎಲಿಮಿನೇಟ್ ಆಗ್ಬೇಕು. ವೋಟಿಂಗ್ ಲೈನ್ಸ್ ಓಪನ್ ಆಗಿವೆ. ಲೇಟೆಸ್ಟ್ ವೋಟಿಂಗ್ ಟ್ರೆಂಡ್‌ನಲ್ಲಿ ಊಹೆ ಮಾಡಲಾಗದ ಫಲಿತಾಂಶಗಳು ಬಂದಿವೆ.