ಪ್ರತಿ ಸಲವೂ ವಿಭಿನ್ನ ಆಭರಣ ಧರಿಸಿರುವ ಕಾವ್ಯಾ ಗೌಡ; ಗಂಡನ ದುಡ್ಡಲ್ಲಿ ಜಾಲಿ ಜಾಲಿ ಎಂದು ಕಾಲೆಳೆದ ನೆಟ್ಟಿಗರು!

First Published | Oct 24, 2024, 5:06 PM IST

ಟ್ರೆಡಿಷನಲ್‌ ಲುಕ್‌ಗೆ ಐಷಾರಾಮಿ ಆಭರಣಗಳನ್ನು ಧರಿಸಿರುವ ಕಾವ್ಯಾ ಗೌಡ...ಮನೆಯಲ್ಲಿ ಎಷ್ಟು ಮೂಟೆ ಇದೆ ಎಂದ ಫಾಲೋವರ್ಸ್..... 

ಗಾಂಧಾರಿ, ರಾಧಾ ರಮಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಕಾವ್ಯಾ ಗೌಡ ಇದೀಗ ವೈಯಕ್ತಿಕ ಜೀವನದಲ್ಲಿ ಸಖತ್ ಬ್ಯುಸಿಯಾಗಿ ಬಣ್ಣದ ಪ್ರಪಂಚದಿಂದ ದೂರ ಉಳಿದಿದ್ದಾರೆ.

ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ರೀತಿ ಕಾಣಿಸುವ ವ್ಯಕ್ತಿ ಕಾವ್ಯಾ ಗೌಡ ಎಂದು ಹಲವರು ಕಾಮೆಂಟ್ ಮಾಡಿದ್ದರು. ಒಮ್ಮೆ ರಾಧಿಕಾ ಪಂಡಿತ್‌ರನ್ನು ಭೇಟಿ ಮಾಡಿರುವ ಫೋಟೋ ಕೂಡ ಕಾವ್ಯಾ ಶೇರ್ ಮಾಡಿದ್ದರು.

Tap to resize

ಮದುವೆ ನಂತರ ಕಾವ್ಯಾ ಗೌಡ ಡ್ರೆಸ್ ಮಾಡಿಕೊಳ್ಳುವ ಶೈಲಿ ಬದಲಾಗಿದೆ ಅನ್ನೋದು ಫಾಲೋವರ್ಸ್‌ ಮಾತುಗಳು. ಆರಂಭದಿಂದಲೂ ಕಾವ್ಯಾ ನೋಡುತ್ತಿರುವವರು ಹೀಗೆ ಕಾಮೆಂಟ್ ಮಾಡಿದ್ದಾರೆ.

ಮಾಡರ್ನ್‌ ಡ್ರೆಸ್‌ಗೂ ಸೈ ಎನ್ನುವ ಕಾವ್ಯಾ ಗೌಡ ಸೀರೆ ಧರಿಸಿದರೆ ಅಪ್ಪಟ್ಟ ಕನ್ನಡತಿ. ಸೀರೆ ಧರಿಸಿದಾಗ ಕೈ ತುಂಬಾ ಬಳೆ ಮತ್ತು ಆಭರಣಗಳನ್ನು ಧರಿಸುತ್ತಾರೆ. 

ಮದುವೆ ನಂತರ ಜ್ಯುವಲೆರಿ ಡಿಸೈನಿಂಗ್ ಕೋರ್ಸ್ ಮಾಡಿರುವ ಕಾವ್ಯಾ ಗೌಡ ತಮ್ಮ ಹಲವು ಆಭರಣಗಳನ್ನು ತಾವೇ ಡಿಸೈನ್ ಮಾಡಿಕೊಂಡು ಅದನ್ನು ಡೈಮೆಂಡ್ ಅಥವಾ ಚಿನ್ನದಲ್ಲಿ ಮಾಡಿಸಿಕೊಳ್ಳುತ್ತಾರೆ.

ಒಮ್ಮೆ ಸೀರೆಗೆ ಧರಿಸುವ ಆಭರಣವನ್ನು ಕಾವ್ಯಾ ಮತ್ತೆ ಧರಿಸುವುದಿಲ್ಲ. ಪ್ರತಿಯೊಂದು ಆಭರಣದಲ್ಲೂ ಸಣ್ಣ ಪುಟ್ಟ ಡಿಸೈನ್‌ ಮತ್ತು ಅದರಲ್ಲಿ ಅಳವಡಿಸಿರುವ ಪ್ರೆಶಿಯಸ್ ಸ್ಟೋನ್‌ಗಳಿಗೆ ಆಧ್ಯತೆ ನೀಡುತ್ತಾರೆ.

ಈ ವಿಚಾರವಾಗಿ ಸಾಕಷ್ಟ ನೆಗೆಟಿವ್ ಕಾಮೆಂಟ್ ಕೂಡ ಎದುರಿಸಿದ್ದಾರೆ. ಗಂಡ ಮನೆಯಲ್ಲಿ ಹಣವಿದೆ ಎಂದು ಮದುವೆ ಆಗಿದ್ದು, ಗಂಡ ಮಾಡಿರುವ ದುಡ್ಡಿನಲ್ಲಿ ಮೋಜು ಮಸ್ತಿ ಮಾಡುತ್ತಿರುವುದು, ಗಂಡ ಸಂಪಾದನೆಯಲ್ಲಿ ಜಾಲಿ ಜಾಲಿ ಎಂದು ಕಾಲೆಳೆದಿದ್ದಾರೆ ನೆಟ್ಟಿಗರು.

ಹಲವು ತಮ್ಮ ಶ್ರಮ ಮತ್ತು ಕೆಲಸದ ಬಗ್ಗೆ ಕಾವ್ಯ ವಿವರಿಸಲು ಪ್ರಯತ್ನ ಪಟ್ಟಿದ್ದಾರೆ ಆದರೂ ನೆಟ್ಟಿಗರು ನೆಗೆಟಿವ್ ಕಾಮೆಂಟ್ ಮಾಡುತ್ತಿರುವ ಕಾರಣ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದಾರೆ. ಈಗ ಮದುವೆ ಆಗಿ  ಗಂಡನ ಮನೆ ಸೇರಿದ ಮೇಲೆ ಅದು ಕೂಡ ನಮ್ಮದೇ ಮನೆ ಅನ್ನೋದು ಜನರು ಮರೆತು ಕಾಮೆಂಟ್ ಮಾಡುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. 

Latest Videos

click me!