ಕನ್ನಡ ಚಿತ್ರರಂಗದಲ್ಲಿ ಮತ್ತು ಧಾರಾವಾಹಿಗಳಲ್ಲಿ ಎರಡರಲ್ಲೂ ಜನಪ್ರಿಯತೆ ಪಡೆದಿರುವ ನಟಿ ಸಂಗೀತಾ ಅನಿಲ್ (Sangeteha Anil). ಕಳೆದ ಎರಡೂವರೆ ದಶಕಗಳಿಂದ ಇವರು ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ದಂಡ ಪಿಂಡಗಳು, ಇಂತಿ ನಿಮ್ಮ ಆಶಾ, ಕಥೆಯೊಂದು ಶುರುವಾಗಿದೆ, ಬದುಕು ಮೊದಲಾದ ಸೀರಿಯಲ್‌ಗಳಲ್ಲಿ ಮಿಂಚಿರುವ ನಟಿ ಸಂಗೀತಾ ಇಪ್ಪತ್ತು ವರ್ಷಗಳಿಂದ ಸೀರಿಯಲ್, ಸಿನಿಮಾ ಸೇರಿ ನೂರಕ್ಕೂ ಹೆಚ್ಚು ಪಾತ್ರಗಳಿಂದ ಮಿಂಚಿದ್ದಾರೆ.
ಕಿರುತೆರೆಯ ಈ ಜನಪ್ರಿಯ ನಟಿ ಇದೀಗ ಹೊಸದಾಗಿ ಮನೆ ಕಟ್ಟಿಸಿದ್ದು, ಇತ್ತೀಚೆಗೆ ತಮ್ಮ ಗೃಹ ಪ್ರವೇಶ (House warming ceremony) ನೆರವೇರಿಸಿದ್ದಾರೆ. ಇವರ ಗೃಹ ಪ್ರವೇಶಕ್ಕೆ ಹಲವು ನಟರು ಆಗಮಿಸಿ, ಶುಭ ಕೋರಿದ್ದರು.
ಸಂಗೀತಾ ಅನಿಲ್ ಗೃಹಪ್ರವೇಶದ ದಿನ ಸತ್ಯ ನಾರಾಯಣ ಪೂಜೆಯೂ ನೆರವೇರಿದೆ. ಈ ಸಂಭ್ರಮದ ಕ್ಷಣಗಳನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ, ಹೊಸ ಮನೆಯಲ್ಲಿ ಪೂಜೆ ನೆರವೇರಿಸುವ ಫೋಟೋ, ಹಾಲುಕ್ಕಿಸುವ ಫೋಟೋ, ಸತ್ಯಾನಾರಾಯಣ ಪೂಜೆ, ಹೊಸ್ತಿಲು ಪೂಜೆ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಸಂಗೀತಾ ಅವರ ಪತಿ ಅನಿಲ್, ಇವರಿಗೆ ಇಬ್ಬರು ಭುಜದೆತ್ತರಕ್ಕೆ ಬೆಳೆದ ಗಂಡು ಮಕ್ಕಳಿದ್ದಾರೆ. ಇನ್ನೊಂದು ನಿಮಗೆ ಗೊತ್ತಿಲ್ಲದ ವಿಷ್ಯ ಅಂದ್ರೆ ಇವರು ರಂಗಕರ್ಮಿ ಗುಬ್ಬಿ ವೀರಣ್ಣ ಅವರ ಮೊಮ್ಮಗಳು.
ಬಾಲನಟಿಯಾಗಿ ನಟನೆಗೆ ಎಂಟ್ರಿ ಕೊಟ್ಟ ಸಂಗೀತಾ, 5 ನೇ ವರ್ಷದಲ್ಲೇ ತಾಯಿಯ ಮಡಿಲಲ್ಲಿ ಚಿತ್ರದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲ, ಹಾಲು ಜೇನು, ಚೆಲ್ಲಿದ ರಕ್ತ, ನೀ ನನ್ನ ಗೆಲ್ಲಲಾರೆ ಎನ್ನುವ ಸಿನಿಮಾದಲ್ಲೂ ಬಾಲ ಕಲಾವಿದೆಯಾಗಿ ನಟಿಸಿದ್ದರು.
ಸಂಗೀತಾ ಸಿನಿಮಾದಲ್ಲಿ ಒಂದು ಕಾಲದಲ್ಲಿ ನಾಯಕಿಯಾಗಿ ಮಿಂಚಿದವರೂ ಹೌದು. ಹಿಂದೆ ಸೂರ್ಯ ಪುತ್ರ, ಪೂರ್ಣ ಸತ್ಯ, ಮೃತ್ಯು ಬಂಧನ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಸದ್ಯ ಪೋಷಕಪಾತ್ರದಲ್ಲಿ ನಟಿ ಮಿಂಚುತ್ತಿದ್ದಾರೆ.