Amruthadhaareಯಲ್ಲಿ ಬಂದೇ ಬಿಡ್ತು ವೀಕ್ಷಕರು ಕಾಯ್ತಿದ್ದ ಅಮೃತ ಘಳಿಗೆ! ರೌಡಿ MLAಗೆ ರುಚಿ ತೋರಿಸಿದ ಗೌತಮ್​

Published : Sep 28, 2025, 01:48 PM IST

ಅಮೃತಧಾರೆ ಧಾರಾವಾಹಿಯಲ್ಲಿ ಶಾಲೆಯ ವಿಚಾರಕ್ಕಾಗಿ ಎಂಎಲ್ಎ, ಭೂಮಿಕಾಳ ಮಗ ಆಕಾಶ್‌ನನ್ನು ಕಿಡ್ನ್ಯಾಪ್ ಮಾಡಿಸುತ್ತಾನೆ. ಈ ಸಂಕಷ್ಟದ ಸಮಯದಲ್ಲಿ ಗೌತಮ್, ಆಪದ್ಬಾಂಧವನಾಗಿ ಬಂದು ಮಗನನ್ನು ರಕ್ಷಿಸುತ್ತಾನೆ. ಈ ಘಟನೆಯು ಗೌತಮ್ ಮತ್ತು ಭೂಮಿಕಾಳ ಪ್ರೇಮಕಥೆಯ ಭಾಗ-2ಕ್ಕೆ ನಾಂದಿ ಹಾಡಿದೆ.

PREV
17
ಅಮೃತಧಾರೆ ಟ್ವಿಸ್ಟ್​

Amruthadhaareಯಲ್ಲಿ ಬೇಗ ಬೇಗ ಭೂಮಿಕಾ ಮತ್ತು ಗೌತಮ್​ರನ್ನು ಒಂದುಮಾಡಿಸಿ ಎಂದು ನೆಟ್ಟಿಗರು ಸೋಷಿಯಲ್​ ಮೀಡಿಯಾದಲ್ಲಿ ಪದೇ ಪದೇ ಹೇಳುತ್ತಲೇ ಬಂದಿದ್ದಾರೆ. ಭೂಮಿಕಾದು ಸ್ವಲ್ಪ ಅತಿಯಾಯ್ತು ಎಂದು ಬೈದುಕೊಳ್ಳುತ್ತಿರುವವರೂ ಹಲವರು. ಅದೇ ಇನ್ನೊಂದೆಡೆ, ಗೌತಮ್​ ತನ್ನ ಪ್ರೀತಿಯನ್ನು ವಾಪಸ್​ ಪಡೆದುಕೊಳ್ಳಲು ಪಣ ತೊಟ್ಟಿದ್ದಾನೆ. ಮಗನ ಜೊತೆ ಹೇಗೋ ಫ್ರೆಂಡ್​ಷಿಪ್​ ಆಗಿದೆ. ಈಗ ಏನಿದ್ದರೂ ಭೂಮಿಕಾಳ ಮನಸ್ಸನ್ನು ಬದಲಿಸೋದು ಮಾತ್ರ ಬಾಕಿ ಇರೋದು.

27
ವೀಕ್ಷಕರು ಕಾಯ್ತಿದ್ದ ದಿನ

ಇದರ ನಡುವೆಯೇ ವೀಕ್ಷಕರು ಕಾಯ್ತಿದ್ದ ಆ ದಿನ ಕೊನೆಗೂ ಬಂದೇ ಬಿಟ್ಟಂತಿದೆ. ಇದಾಗಲೇ ಅನಿರೀಕ್ಷಿತ ತಿರುವಿನಲ್ಲಿ ಅಪ್ಪ-ಮಗನ ಭೇಟಿಯಾಗಿದೆ. ಅಮ್ಮನಿಂದ ಬಚಾವಾಗಲು ಆಕಾಶ್​, ಗೌತಮ್​ನನ್ನೇ ತನ್ನ ಅಪ್ಪ ಎಂದು ಸುಳ್ಳು ಹೇಳಿ ಶಾಲೆಗೂ ಕರೆದುಕೊಂಡು ಹೋಗಿದ್ದ. ಆದರೆ ಕೊನೆಗೆ ಆತನೇ ತನ್ನ ಮಗ ಎನ್ನುವುದು ತಿಳಿದಿದೆ. ಹೇಗಾದರೂ ಭೂಮಿಕಾಳ ಮನಸ್ಸನ್ನು ಓಲೈಸಲು ಆತ ಪ್ರಯತ್ನ ಪಡುತ್ತಿದ್ದಾನೆ.

37
ಗೌತಮ್​-ಭೂಮಿ ಒಂದಾಗೋ ಹೊತ್ತು

ಆದರೆ ಭೂಮಿ ಮಿಸ್ಸು ಸುಮ್ಮನೇ ಅಲ್ವಲ್ಲಾ. ಆದರೆ ಯಾವ ಮಗನಿಂದ ಇಬ್ಬರೂ ಹತ್ತಿರವಾಗಬೇಕು ಎಂದು ವೀಕ್ಷಕರು ಅಂದುಕೊಂಡಿದ್ದರೋ, ಅದೇ ಮಗನಿಂಗಲೇ ಈಗ ಹತ್ತಿರ ಆಗೋ ಟೈಮ್​ ಬಂದಿದೆ. ಎಂಎಲ್​ಎ ಮಗ ಶಾಲೆಯಲ್ಲಿ ಸ್ಮೋಕ್ ಮಾಡುತ್ತಿದ್ದ ಕಾರಣಕ್ಕೆ, ಅಪ್ಪನನ್ನು ಕರೆಸಿ ಬುದ್ಧಿ ಹೇಳಿಸಿದ್ದಳು ಭೂಮಿಕಾ. ದೊಡ್ಡವರು ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಇಂಥ ಅದೆಷ್ಟೋ ಮನುಷ್ಯರಿಗೆ ಇವೆಲ್ಲಾ ಸಹಿಸೋದು ಕಷ್ಟ ಅಲ್ವಾ? ಮಕ್ಕಳು ಏನೇ ಮಾಡಿದ್ರೂ, ಅವರನ್ನು ಪೊಲೀಸರ ಕೈಯಿಂದ ರಕ್ಷಿಸುವುದು ಹೇಗೆ ಎನ್ನೋದು ಈ ಸೋ ಕಾಲ್ಡ್​ ದೊಡ್ಡವರಿಗೆ ಗೊತ್ತೇ ಇರುತ್ತದೆ. ಇದು ಪ್ರತಿನಿತ್ಯ ನೋಡ್ತಿರುವ ಘಟನೆಯೇ ಅಲ್ಲವೆ? ಯಾವ ಯಾವ ಕೇಸ್​ನಲ್ಲಿ ಅದೆಂಥ ಅಪರಾಧ ಮಾಡಿರುವ ಇಂಥ ಮಕ್ಕಳು ಹೇಗೆಲ್ಲಾ ಬಚಾವ್​ ಆಗ್ತಿದ್ದಾರೆ ಎನ್ನುವುದು ನಮ್ಮ ಕಣ್ಣಮುಂದೆಯೇ ಇದೆ.

47
ಎಂಎಲ್​ಎ ರೌಡಿಸಂ

ಅದೇ ರೀತಿ, ಇಲ್ಲಿ ತನ್ನ ಮಗನಿಗೆ ಟೀಚರ್​ ಒಬ್ಬಳು ಬುದ್ಧಿ ಹೇಳೋದಾ ಎಂದು ಸಿಟ್ಟು ಬಂದಿದೆ. ತನ್ನದಲ್ಲದ ತಪ್ಪಿಗೆ ಭೂಮಿಕಾಳು ಈಗ ಕ್ಷಮೆ ಕೋರಿ ಪತ್ರ ಬರೆದುಕೊಡಬೇಕಿದೆ. ಆದರೆ ಸ್ವಾಭಿಮಾನಿ ಭೂಮಿಕಾ ಹಾಗೆ ಮಾಡಲು ಒಪ್ಪಿರಲಿಲ್ಲ. ಮಗ ಹಾಳಾಗಿ ಸತ್ತರೂ ಪರವಾಗಿಲ್ಲ, ದುಡ್ಡಿನ ಅಮಲಿನಲ್ಲಿ ತೇಲಾಡುತ್ತಿರುವ ಇಂಥ ರಾಜಕಾರಣಿಗಳು ಏನು ಮಾಡುತ್ತಾರೋ ಅದನ್ನೇ ಈ ಸೀರಿಯಲ್​ನಲ್ಲಿ ಆ ಬಾಲಕನ ಅಪ್ಪನೂ ಮಾಡಿದ್ದಾನೆ.

57
ಆಕಾಶ್ ಕಿಡ್​ನ್ಯಾಪ್​

ಭೂಮಿಕಾಳ ಮಗ ಆಕಾಶ್​ನನ್ನು ಕಿಡ್​ನ್ಯಾಪ್​ ಮಾಡಿಸಿದ್ದಾನೆ. ಆಕಾಶ್​ ಕಾಣದೇ ಇದ್ದಾಗ ಗೌತಮ್​ನೇ ಆತನನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಭೂಮಿಕಾ ಸಿಟ್ಟಿನಲ್ಲಿ ಕರೆ ಮಾಡಿದ್ದಾಳೆ. ಕೊನೆಗೆ ತಾನು ಕರೆದುಕೊಂಡು ಹೋಗಿಲ್ಲ ಎಂದು ಹೇಳಿದಾಗ ಅವಳಿಗೂ ಶಾಕ್​ ಆಗಿದೆ.

67
ಆಪದ್ಬಾಂಧವನಾಗಿ ಅಪ್ಪ

ಇದರ ಬೆನ್ನಟ್ಟಿ ಹೋದಾಗ ಗೌತಮ್​ಗೆ ಆಕಾಶ್​ ಕಿಡ್​ನ್ಯಾಪ್​ ಆಗಿರೋದು ತಿಳಿದಿದೆ. ಅಲ್ಲಿಗೆ ಹೋಗಿ ಫೈಟ್​ ಮಾಡಿ, ಮಗನ ಜೀವ ಕಾಪಾಡಿದ್ದಾನೆ. ನೀನ್ಯಾರು ಎಂದು ಎಂಎಲ್​ಎ ಕೇಳಿದಾಗ, ನಾನು ಅವನ ಆಪದ್ಬಾಂಧವ ಎಂದಿದ್ದಾನೆ.

77
​Amruthadhaare Part-2 Love story

ಒಟ್ಟಿನಲ್ಲಿ ​Amruthadhaare Part-2 Love story ಶುರುವಾಗಿದೆ. ಇವರಿಬ್ಬರನ್ನು ಮಗನ ಮೂಲಕ ಒಂದಾಗಿಸಲು ಆನಂದ್​ ಮತ್ತು ಮಲ್ಲಿ ಎಷ್ಟು ಸಕ್ಸಸ್​​ ಆಗೋದನ್ನು, ಅತ್ತ ಜೈದೇವ ಮತ್ತು ಶಕುಂತಲಾ ಬೀದಿಗೆ ಬರುವುದನ್ನು ನೋಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

Read more Photos on
click me!

Recommended Stories