ಸತ್ಯ ಧರಿಸಿರುವ ವಿಗ್ ತೆಗೆಯಲು ಕಣ್ಣೀರಿಟ್ಟ ಗೌತಮಿ ಜಾದವ್; ಕೊಂಕು ಮಾಡಿದವರಿಗೂ ಆಶ್ಚರ್ಯ!

Published : Oct 01, 2024, 02:46 PM IST

ಸತ್ಯ ಪಾತ್ರದಿಂದ ಹೊರ ಬರಲು ಕಣ್ಣೀರಿಟ್ಟ ಗೌತಮಿ. ಉದ್ದ ಕೂದಲನ್ನು ನೋಡಿ ಎಲ್ಲರೂ ಆಶ್ಚರ್ಯ...... 

PREV
17
ಸತ್ಯ ಧರಿಸಿರುವ ವಿಗ್ ತೆಗೆಯಲು ಕಣ್ಣೀರಿಟ್ಟ ಗೌತಮಿ ಜಾದವ್; ಕೊಂಕು ಮಾಡಿದವರಿಗೂ ಆಶ್ಚರ್ಯ!

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಅಂದ್ರೆ ಸತ್ಯ. ಮೊದಲು ರೌಡಿ ಬೇಬಿ, ಆಮೇಲೆ ಗೃಹಿಣಿ ಈಗ ಖಡಕ್ ಪೊಲೀಸ್ ಆಫೀಸರ್ ಸತ್ಯ ಪಾತ್ರದಲ್ಲಿ ಮಿಂಚುತ್ತಿದ್ದರು ಗೌತಮಿ ಜಾದವ್. 

27

ಬಿಗ್ ಬಾಸ್ ಸೀಸನ್ 11ರ ನಾಲ್ಕನೇ ಸ್ಪರ್ಧಿಯಾಗಿ ಗೌತಮಿ ಎಂಟ್ರಿ ಕೊಟ್ಟಿದ್ದಾರೆ. ಸತ್ಯ ಧರಿಸುವಂತೆ ಡ್ರೆಸ್‌ ಮತ್ತು ವಿಗ್ ಧರಿಸಿ ಎಂಟ್ರಿ ಕೊಟ್ಟಿರುವುದು ಎಲ್ಲರಿಗೂ ಆಶ್ಚರ್ಯವಾಗಿದೆ. 

37

ನನ್ನನ್ನು ಜನರು ಹೀಗೆ ಗುರುತಿಸಿರುವುದು ಜನರು ಹೀಗೆ ಇಷ್ಟ ಪಟ್ಟಿರುವುದು ಹೀಗಾಗಿ ಇದೇ ಲುಕ್‌ನಲ್ಲಿ ಬಂದಿರುವೆ ಎಂದು ಬಿಗ್ ಬಾಸ್ ಓಪನಿ ಎಪಿಸೋಡ್‌ನಲ್ಲಿ ಗೌತಮಿ  ಹೇಳಿದ್ದರು. 

47

ಬಿಗ್ ಬಾಸ್ ಮನೆ ಸೇರಿದ ಮೇಲೆ ತಮ್ಮ ಲುಕ್ ಬದಲಾಯಿಸಿಕೊಳ್ಳಬೇಕು ಅಲ್ವಾ? ಮೊದಲ ದಿನವೇ ಮೇಕಪ್‌ ರೂಮ್‌ನಲ್ಲಿ ಕುಳಿತುಕೊಂಡು ಗೌತಮಿ ತಮ್ಮ ವಿಗ್ ತೆಗೆದಿಟ್ಟಿದ್ದಾರೆ. ಆಗ ಕಣ್ಣೀರಿಟ್ಟಿದ್ದಾರೆ. 

57

 ಸತ್ಯ ಧರಿಸುವ ವಿಗ್‌ಗೆ ತುಂಬಾನೇ ಕನೆಕ್ಟ್‌ ಆಗಿದ್ದೀನಿ,ನನ್ನ ಉಸಿರು ಇರುವವರೆಗೂ ಈ ವಿಗ್‌ಗೆ ಋಣಿಯಾಗಿರುತ್ತೀನಿ. ಮೊದಲ ಸಲ ತೆಗೆಯುವುದಕ್ಕೆ ಬೇಸರ ಆಗುತ್ತಿದೆ ಎಂದು ಗೌತಮಿ ಕಣ್ಣೀರಿಟ್ಟಿದ್ದಾರೆ. 

67

ಗೌತಮಿ ವಿಗ್ ತೆಗೆಯುತ್ತಿದ್ದಂತೆ ಉದ್ದವಾದ ಕೂದಲನ್ನು ನೋಡಿ ಪ್ರತಿಯೊಬ್ಬರು ಶಾಕ್ ಆಗಿದ್ದಾರೆ. ವಾವ್!! ಇಷ್ಟು ಸೂಪರ್ ಆಗಿರುವ ಕೂದಲನ್ನು ನೀವು ಇಷ್ಟು ದಿನ ಮುಚ್ಚಿಟ್ಟಿದ್ದೀರಿ ಎಂದು ಆಶ್ಚರ್ಯ ಪಟ್ಟಿದ್ದಾರೆ. 

77

ಇನ್ನು ಎಂಟ್ರಿ ಆಗುವ ಸಮಯದಲ್ಲಿ ಈ ವಿಗ್ ಧರಿಸಿ ಆಟವಾಡಲು ಕಷ್ಟವಾಗುತ್ತದೆ ಅಲ್ಲದೆ ಪ್ರತಿ ದಿನ ಬಿಚ್ಚಿ ಹಾಕಿಕೊಳ್ಳುವುದು ಕಷ್ಟ ಲುಕ್ ಚೆನ್ನಾಗಿಲ್ಲ ಎಂದು ಕೊಂಕು ಮಾಡಿದವರು ಕೂಡ ಶಾಕ್ ಆಗಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories