ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ (Amruthadhare) ಧಾರಾವಾಹಿ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಬೋರ್ ಹೊಡೆಸಿತ್ತು. ಮಲ್ಲಿಯ ಸೀಮಂತ, ನಂತರ ಆಕ್ಸಿಡೆಂಟ್, ಭೂಮಿಕಾ ಮತ್ತು ಗೌತಮ್ ಚಡಪಡಿಕೆ, ಅಷ್ಟು ದೊಡ್ಡ ತಪ್ಪು ಮಾಡಿದ್ರೂ ಮತ್ತೇನೂ ಆಗದೇ ಇರುವಂತೆ ಇರೋ ಜೈದೇವ್. ಇವುಗಳ ಹಿಂದೆಯೇ ಕಥೆ ತಿರುಗುತ್ತಿತ್ತು.
ಇದೀಗ ಗೌತಮ್ ದಿವಾನ್ ಗೆ (Goutham Diwan) ಕತ್ತಲೆ ಅಂದ್ರೆ ಯಾಕೆ ಭಯ ಅನ್ನೋ ಕಥೆ ರಿವೀಲ್ ಆಗಿದೆ. ಅದಕ್ಕೆ ಕಾರಣ ಅಮ್ಮ, ಅಮ್ಮನ ನೆನಪು ಅನ್ನೋದು ಸಹ ತಿಳಿದಿದೆ. ಗೌತಮ್ ತನ್ನ ಪ್ರೀತಿಯ ಅಮ್ಮನ ನೆನಪುಗಳ ಬಗ್ಗೆ ಭೂಮಿಕಾ ಬಳಿ ಮನಸು ಬಿಚ್ಚಿ ಮಾತನಾಡ್ತಿದ್ದಾರೆ.
ಮೂವತ್ತಮೂರು ವರ್ಷಗಳ ಹಿಂದೆ ಕಾಣೆಯಾಗಿದ್ದ ಅಮ್ಮನನ್ನು ಗೌತಮ್ ಹುಡುಕಿಸದ ಜಾಗವೇ ಇಲ್ಲ, ಅಮ್ಮ ಎಲ್ಲಿದ್ದಾರೆ ಅನ್ನೋದೆ ಗೊತ್ತಿಲ್ಲದ ಸಂಕಟದಲ್ಲಿದ್ದಾನೆ ಗೌತಮ್. ಪತಿಗೆ ಧೈರ್ಯ ತುಂಬುವ ಭೂಮಿಕಾ, ಅಮ್ಮ ಖಂಡಿತವಾಗಿಯೂ ಸಿಕ್ಕೆ ಸಿಗುತ್ತಾರೆ ಎನ್ನುತ್ತಾಳೆ. ಆದರೆ ನಿಜವಾಗಿಯೂ ಸಿಗ್ತಾರಾ? ಯಾಕಂದ್ರೆ ಅವರ ಕೊಲೆ ಆಗೋಗಿದೆ.
ಹೌದು, ಗೌತಮ್ ಮಲ ತಾಯಿ ಶಕುಂತಲಾ ಮತ್ತು ಆಕೆಯ ಅಣ್ಣ ಏನೂ ಕುತಂತ್ರ ಮಾಡಿ ಈ ಮನೆ ಸೇರಿರೋದು ನಿಜಾ. ಶಕುಂತಲಾ ಅಣ್ಣ ಭಯದಿಂದ ನಡುಗುತ್ತಾ ಶಕುಂತಲಾ ಬಳಿ ಬಂದು ಸಿಸ್ಟರ್ ಇವತ್ತು ನನ್ನ ಕನಸಲ್ಲಿ ಭಾಗ್ಯ ಬಂದಿದ್ಲು ಅಂತಾನೆ, ಅದಕ್ಕೆ ಶಕುಂತಲಾ, ಅವಳು ಯಾವಾಗ್ಲೋ ಟಿಕೆಟ್ ತೆಗೊಂಡು ಆಗಿದೆ ಅಲ್ವಾ ಎನ್ನುವಾಗ, ಅಣ್ಣ ಆದಕ್ಕೆ ಅಲ್ವಾ ಆಕ್ಸಿಡೆಂಟ್ ಮಾಡ್ಸಿದ್ದು ಎನ್ನುತ್ತಾನೆ.
ಅಲ್ಲಿಯೇ ಸಿಗುತ್ತೆ ಟ್ವಿಸ್ಟ್. ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಾಗಿದ್ದ ಗೌತಮ್ ದಿವಾನ್ ತಾಯಿಯ ಸ್ಟೋರಿ ಇದೀಗ ಮತ್ತೆ ಸದ್ದು ಮಾಡ್ತಿದೆ, ಅಂದ್ರೆ ಸದ್ಯದಲ್ಲೇ ಗೌತಮ್ ತಾಯಿಯ ಆಗಮನ ಆಗಲಿದೆ ಅನ್ನೋದನ್ನ ಇದು ಸೂಚಿಸುತ್ತೆ ಅಂತಿದ್ದಾರೆ ವೀಕ್ಷಕರು. ಆದರೆ ಇದು ಗಟ್ಟಿಮೇಳ ಧಾರಾವಾಹಿಯ ಕಥೆಯೇ ಆಯ್ತಲ್ವಾ ಅಂತನೂ ಹೇಳ್ತಿದ್ದಾರೆ ಜನ.
ಗಟ್ಟಿಮೇಳ ಧಾರಾವಾಹಿಯಲ್ಲು ವೇದಾಂತ್ ನನ್ನು ಸಾಕಿದ್ದು ಸಾಕು ತಾಯಿ, ಎಷ್ಟೋ ವರ್ಷಗಳ ಬಳಿಕ ಆತನಿಗೆ ತನಗೂ ಒಬ್ಬಳು ತಾಯಿ ಇದ್ದಾಳೆ ಅನ್ನೋದು ಗೊತ್ತಾಗುತ್ತೆ, ನಂತರ ಹುಡುಕಾಟವೂ ನಡೆಯುತ್ತೆ, ಈಗ ಅದೇ ಕಥೆಯನ್ನು ಅಮೃತಧಾರೆಯಲ್ಲೂ ಸಹ ಹೇಳಲಾಗ್ತಿದೆ. ಇದನ್ನ ನೋಡಿ ವೀಕ್ಷಕರು ಮತ್ತದೇ ಕಥೆ ಎನ್ನುತ್ತಿದ್ದಾರೆ.
ಇನ್ನೂ ಕೆಲವರು ಗೌತಮ್ ಮತ್ತು ಭೂಮಿಕಾ ಪೋಷಕರಾಗ್ತಾರೆ ಅನ್ನೋ ಖುಷಿಯಲ್ಲಿದ್ರೆ, ಇಲ್ಲೇನು ನಡಿತಿದೆ. 33 ವರ್ಷದ ಹಿಂದಿನ ಕಥೆ ಈವಾಗ ಯಾಕೆ? ಸ್ವಂತ ಅಮ್ಮನನ್ನು ಹುಡುಕೋಕೆ ಇಷ್ಟೊಂದು ವರ್ಷ ಬೇಕಾಯ್ತ ಅಂದಿದ್ದಾರೆ. ಮತ್ತೆ ಕೆಲವರು ನಿರ್ದೇಶಕರು ಮನಸು ಮಾಡಿದ್ರೆ ಸದ್ಯದಲ್ಲೇ ಗೌತಮ್ ತಾಯಿ ಸಿಗ್ತಾರೆ ಅಂದಿದ್ದಾರೆ. ಯಾವಾಗ ಗೌತಮ್ ತಾಯಿ ಆಗಮನ ಆಗುತ್ತೆ, ಕಥೆಗೆ ಟ್ವಿಸ್ಟ್ ಸಿಗುತ್ತೆ ಕಾದು ನೋಡಬೇಕು.