Kapil Sharma Show: ತಮ್ಮ ಹೋರಾಟದ ದಿನಗಳ ಬಗ್ಗೆ ಮಾತಾನಾಡಿದ ಅನು ಮಲಿಕ್ !

First Published Dec 12, 2021, 4:41 PM IST

ಹಾಸ್ಯನಟ ಕಪಿಲ್ ಶರ್ಮಾ  (Kapil Sharma)  ಅವರ ಕಾರ್ಯಕ್ರಮ ದಿ ಕಪಿಲ್ ಶರ್ಮಾ ಶೋ (The Kapil Sharma Show) ಅತ್ಯಂತ ಫೇಮಸ್‌ ಟಿವಿ ಶೋಗಳಲ್ಲಿ ಒಂದು ಹಾಗೂ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರನ್ನು ಅದ್ಭುತವಾಗಿ ರಂಜಿಸುತ್ತಿದೆ. ಪ್ರತಿ ಶನಿವಾರ-ಭಾನುವಾರದಂದು ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಬಾಲಿವುಡ್ ಇಂಡಸ್ಟ್ರಿಯ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಕಳೆದ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಹಲವು ಖ್ಯಾತ ಗಾಯಕರು ಭಾಗವಹಿಸಿದ್ದರು. ಈ ಎಪಿಸೋಡ್‌ನಲ್ಲಿ ಬಾಲಿವುಡ್‌ ಖ್ಯಾತ ಗಾಯಕ ಅನು ಮಲಿಕ್ ತಮ್ಮ ಹೋರಾಟದ ದಿನಗಳ ಬಗ್ಗೆ ಮಾತಾನಾಡಿದ್ದಾರೆ.

ಈ ಸಂಚಿಕೆಯಲ್ಲಿ ಅನು ಮಲಿಕ್ (Anu Malik), ಸಾಧನಾ ಸರ್ಗಮ್ (Sadhana Sargam) ಮತ್ತು ಅಮಿತ್ ಕುಮಾರ್ (Amit Kaumar) ಮುಂತಾದ ಗಾಯಕರು ಭಾಗವಹಿಸಿ ತಮ್ಮ ಹಾಡುಗಳಿಂದ ಸಭೆಯನ್ನು ಅಲಂಕರಿಸಿದರು. 

ಈ ಎಲ್ಲಾ ಗಾಯಕರ ಜೊತೆ ಕಪಿಲ್‌ ಶರ್ಮಾ ಸಹ ಹಾಡು ಹೇಳಿದರು, ಕಾರ್ಯಕ್ರಮದ ವೇಳೆ ಕಪಿಲ್ ಗಾಯಕರಿಗೆ ಹಲವು ತಮಾಷೆಯ ಪ್ರಶ್ನೆಗಳನ್ನೂ ಕೇಳಿದ್ದಾರೆ. ಈ ನಡುವೆ ಅವರು ಅನು ಮಲಿಕ್ ಅವರ ವೃತ್ತಿಜೀವನಕ್ಕೆ ಸಂಬಂಧಿಸಿದ ಇಂಟರೆಸ್ಟಿಂಗ್‌ ವಿಷಯವನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡರು.

ಅನು ಮಲಿಕ್ ತಮ್ಮ ಕೆರಿಯರ್‌ನ  ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಅನು ಮಲಿಕ್ ತಮ್ಮ ಕಷ್ಟದ ದಿನಗಳಿಗೆ ಸಂಬಂಧ ಪಟ್ಟ ಒಂದು ಉಪಾಖ್ಯಾನವನ್ನು ಹಂಚಿಕೊಂಡಿದ್ದಾರೆ. ಅವರ ಹೋರಾಟದ ದಿನಗಳಲ್ಲಿ ಪಾವಭಾಜಿಯವರು ಇರುವ ಜಾಗಕ್ಕೆ ಹೋಗಬೇಕಾಗಿತ್ತು ಎಂದು ಹೇಳಿದ್ದಾರೆ.

ಪಾವ್ ಭಾಜಿ ಸ್ಟಾಲ್‌ಗೆ ಹಲವು  ಸಂಗೀತ ನಿರ್ದೇಶಕರು, ನಿರ್ಮಾಪಕರು ಆಗಾಗ ಬರುತ್ತಿದ್ದ  ಕಾರಣ ಅನು ಮಲಿಕ್ ಅವರು ಯಾವಾಗಲೂ ಅಂತಹ ಸ್ಥಳಗಳಿಗೆ ಹೋಗುತ್ತಿದ್ದರು ಎಂದು ಹೇಳಿದರು. ಯಾರಾದರೂ ನಿರ್ಮಾಪಕರು ಬಂದರೆ ಅವರಿಗೆ ಸನ್ನೆ ಮಾಡುವಂತೆ ಪಾವ್‌ಬಾಜಿ ಅವನ ಬಳಿ ಸೆಟ್ಟಿಂಗ್‌ ಮಾಡಿಕೊಂಡಿದ್ದರು.

ಈ ಮೂಲಕ ಅನು ಮಲಿಕ್‌ ಅವರು ಹೀಗೆ ಸಂಗೀತ ನಿರ್ದೇಶಕರನ್ನು ಭೇಟಿ ಮಾಡುತ್ತಿದ್ದರು. ನಿರ್ಮಾಪಕರ ಜೊತೆ ಮಾತನಾಡುವ ಅವಕಾಶ ಸಿಕ್ಕಿತು. ಆ ನಂತರ ನನಗೂ ಕೆಲಸ ಸಿಕ್ಕಿತು ಎಂದು ಅನು ಮಲಿಕ್‌ಹೇಳಿಕೊಂಡಿದ್ದಾರೆ.

ಇದರ ಜೊತೆ  ಅನು ಮಲಿಕ್‌ಗೆ ಸಂಬಂಧಿಸಿದ ಮತ್ತೊಂದು ಕಥೆಯನ್ನು ಕಪಿಲ್ ಶರ್ಮಾ ಇದೇ ಸಂಚಿಕೆಯಲ್ಲಿ ಹಂಚಿಕೊಂಡಿದ್ದಾರೆ, ಇದರಲ್ಲಿ ಕುಮಾರ್ ಸಾನು ಅವರು ತಮ್ಮ ಹಾಡಿನಲ್ಲಿ ಅನು ಮಲಿಕ್‌ ಧ್ವನಿ ನೀಡಿದ ಬಗ್ಗೆ ದೂರಿದ್ದಾರೆ. ಕಪಿಲ್ ಹಳೆಯ ವೀಡಿಯೊವನ್ನು ತೋರಿಸಿದರು.

ಅನು ಮಲಿಕ್ ಹಾಡು ಹಾಡುವುದೆಂದರೆ ತುಂಬಾ ಕಷ್ಟ.  ಆದರೆ ನಾವು ಅವನನ್ನು ತುಂಬಾ ಪ್ರೀತಿಸುತ್ತೇವೆ ಎಂದು ಕುಮಾರ್‌ ಸಾನು ವಿಡಿಯೋದಲ್ಲಿ ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಲಿಕ್,  ಕುಮಾರ್‌ ಸಾನು ಅವರ ಹಾಡಿನ ಮಧ್ಯದಲ್ಲಿ ತಾವು ನೀಡಿದ ಧ್ವನಿ   ಸಾನು ಅವರಿಗೆ ಹಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಅಮಿತ್ ಕುಮಾರ್ ಅವರು ತಮ್ಮ ತಂದೆ ಕಿಶೋರ್ ಕುಮಾರ್ ಅವರನ್ನು ನೆನಪಿಸಿಕೊಂಡರು. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಅವರು ತಮ್ಮ ಕೆಲವು ಹಾಡುಗಳನ್ನು ಹಾಡಿದರು ಮತ್ತು ಅದನ್ನು ಕೇಳಿ ಪ್ರೇಕ್ಷಕರು ತುಂಬಾ ಸಂತೋಷಪಟ್ಟರು. ಅಂದಹಾಗೆ, ಅನು ಮಲಿಕ್ ಅನೇಕ ಬಾರಿ ಈ ಶೋನಲ್ಲಿ ಕಾಣಿಸಿಕೊಂಡಿದ್ದಾರೆ ಆದರೆ ಸಾಧನಾ ಸರ್ಗಮ್ ಮತ್ತು ಅಮಿತ್ ಕುಮಾರ್ ಮೊದಲ ಬಾರಿಗೆ ಬಂದಿದ್ದಾರೆ.

click me!