Viharika Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ನನ್ನರಸಿ ರಾಧೆ' ನಟಿ!

Suvarna News   | Asianet News
Published : Dec 09, 2021, 03:48 PM IST

ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ಜೋಡಿ. ಸೋಷಿಯಲ್ ಮೀಡಿಯಾದಲ್ಲಿ ಹರಿದು ಬರುತ್ತಿವೆ ಶುಭಾಶಯಗಳು. 

PREV
17
Viharika Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ನನ್ನರಸಿ ರಾಧೆ' ನಟಿ!

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುವ ನನ್ನರಸಿ ರಾಧೆ (Nannarasi Radhe) ಧಾರಾವಾಹಿಯ ವಿಲನ್ ವಿಹಾರಿಕಾ ಪೂಜಾ ಮತ್ತು ನಟ ಕಿರಣ್ ಬಗಡೆ ಮದುವೆಯಾಗಿದ್ದಾರೆ. 

27

ಡಿಸೆಂಬರ್ 6ರಂದು ಆಪ್ತರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಸರ್ಪ್ರೈಸ್‌ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

37

ಸಂಪ್ರದಾಯಿಕ ಸಿಲ್ಕ್ ಸೀರೆಯಲ್ಲಿ ವಿಹಾರಿಕಾ (Viharika Pooja) ಕಾಣಿಸಿಕೊಂಡರೆ, ಕಿರಣ್ ಟ್ರೆಡಿಷನಲ್ ಔಟ್‌ಫಿಟ್‌ನಲ್ಲಿ ಮಿಂಚುತ್ತಿದ್ದಾರೆ. 

47

ಹಿಂದು ಸಂಪ್ರದಾಯದಂತೆ ಮದುವೆ ನಡೆದಿದೆ. ಕಳೆದ ತಿಂಗಳು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿಯ ವಿಚಾರವನ್ನು ತೆರೆದಿಟ್ಟಿದ್ದರು. 

57

ಡೇಟಿಂಗ್ ಆ್ಯಪ್ ಮೂಲಕ ವಿಹಾರಿಕಾ ಮತ್ತು ಕಿರಣ್ (Kiran Bagade) ಪರಿಚಯವಾಗಿ, ಸ್ನೇಹಿತರಾದರು.  ಆನಂತರ ಇಬ್ಬರೂ ಸ್ನೇಹಿತರಾಗಿ ಪ್ರೀತಿಸಲು ಆರಂಭಿಸಿದ್ದಾರೆ. 

67

ಧಾರಾವಾಹಿ ಲೋಕದಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ. ಶಿವಾನಿ (Shivani) ಪಾತ್ರದಲ್ಲಿ ವಿಹಾರಿಕಾ ಅದ್ಭುತವಾಗಿ ನಟಿಸುತ್ತಿದ್ದಾರೆ. ಆತ್ಮಬಂಧನ ಧಾರಾವಾಹಿಯಲ್ಲಿ ಕಿರಣ್ ನಟಿಸುತ್ತಿದ್ದಾರೆ. 

77

ಧಾರಾವಾಹಿ ಮಾತ್ರವಲ್ಲ ಕಿರಣ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ, ರಾಮಾರ್ಜುನ, ಬಿಲ್‌ ಗೇಟ್ಸ್‌ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

Read more Photos on
click me!

Recommended Stories