ಮುದ್ದಾದ ಫೋಟೋ ಶೇರ್ ಮಾಡಿದ ತನಿಷಾ, ಪಕ್ಕದಲ್ಲಿ ವರ್ತೂರ್ ಇದ್ದಿದ್ರೆ ಇನ್ನೂ ಚೆಂದ ಎಂದ ಫ್ಯಾನ್ಸ್!

Published : Jun 24, 2024, 09:25 AM ISTUpdated : Jun 24, 2024, 12:13 PM IST

ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ಫೋಟೋ ಸೀರೀಸ್ ಶೇರ್ ಮಾಡಿದ್ದು, ಅಭಿಮಾನಿಗಳು ತನಿಷಾ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.   

PREV
16
ಮುದ್ದಾದ ಫೋಟೋ ಶೇರ್ ಮಾಡಿದ ತನಿಷಾ, ಪಕ್ಕದಲ್ಲಿ ವರ್ತೂರ್ ಇದ್ದಿದ್ರೆ ಇನ್ನೂ ಚೆಂದ ಎಂದ ಫ್ಯಾನ್ಸ್!

ಬಿಗ್ ಬಾಸ್ ಸೀಸನ್ 10ರಲ್ಲಿ (Bigg Boss 10) ಸ್ಪರ್ಧಿಸುವ ಮೂಲಕ ಬೆಂಕಿ ಅಂತಾನೆ ಫೇಮಸ್ ಆದ ನಟಿ ತನಿಷಾ ಕುಪ್ಪಂಡ ಸದ್ಯ ತಮ್ಮ ರೆಸ್ಟೋರೆಂಟ್, ಜ್ಯುವೆಲ್ಲರಿ ಅಂತಾ ತುಂಬಾ ಬ್ಯುಸಿಯಾಗಿದ್ದಾರೆ. 
 

26

ಹಲವು ಕಾರ್ಯಕ್ರಮಗಳಲ್ಲೂ ಮಿಂಚುವ ತನಿಷಾ (Thanisha Kuppanda), ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್. ಅಭಿಮಾನಿಗಳ ಜೊತೆಗೆ ಕನೆಕ್ಟ್ ಆಗಲು ನಟಿ ಹೆಚ್ಚಾಗಿ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. 
 

36

ತನಿಷಾ Do something today that your future self will thank you for ಎಂದು ಕ್ಯಾಪ್ಶನ್ ಹಾಕಿದ್ದು, ವಿವಿಧ ಪೋಸ್ ನೀಡಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ಟ್ರೆಡಿಶನಲ್ ಲುಕ್ (Traditional Look)ಗೆ ಫ್ಯಾನ್ಸ್ ಮನ ಸೋತಿದ್ದಾರೆ. 
 

46

ತನಿಷಾ ಫೋಟೊ ನೋಡಿ ನೆಟ್ಟಿಗರು, ಮುದ್ದು ಗೊಂಬೆ, ಬ್ಯೂಟಿಫುಲ್, ಕ್ವೀನ್, ಬೆಂಕಿ, ಕೆಂಪು ಗುಲಾಬಿ ಎಂದೆಲ್ಲಾ ಹಾಡಿ ಹೊಗಳಿದ್ದಾರೆ. ಅಲ್ಲದೇ ಟ್ರೆಡಿಶನಲ್ ಡ್ರೆಸ್ (Traditional Dress) ನಿಮಗೆ ಚೆನ್ನಾಗಿ ಸೂಟ್ ಆಗುತ್ತೆ ಎಂದು ಸಹ ಹೇಳಿದ್ದಾರೆ. 
 

56

ಇನ್ನು ಕೆಲವರು ತನಿಷಾಗೆ ನಿಮ್ಮ ಪಕ್ಕದಲ್ಲಿ ವರ್ತೂರ್ ಅಣ್ಣ ಇದ್ದಿದ್ರೆ, ಫೋಟೋ ಇನ್ನಷ್ಟು ಚೆನ್ನಾಗಿ ಬರ್ತಿತ್ತು ಅಂದಿದ್ದಾರೆ. ತನಿಷಾ ಮತ್ತು ವರ್ತೂರ್ ಸಂತೋಷ್ (Varthur Santhosh) ಜೋಡಿ ಬಿಗ್ ಬಾಸ್ ಸಮಯದಿಂದನೂ ತುಂಬಾನೆ ಫೇಮಸ್. 
 

66

ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ ನಟಿಗೆ ಸಿನಿಮಾಗಳಿಂದ ಸಿಕ್ಕಾಪಟ್ಟೆ ಆಫರ್ಸ್ ಬರ್ತಿದೆ ಅಂತೆ. ಅಲ್ಲದೇ ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕೋದಕ್ಕೂ ಇವರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಅಭಿಮಾನಿಗಳು ಯಾವಾಗ ತನಿಷಾರನ್ನು ಬಿಗ್ ಸ್ಕ್ರೀನ್ ನಲ್ಲಿ ನೋಡೋದು ಎಂದು ಕಾಯ್ತಾ ಇದ್ದಾರೆ. 
 

Read more Photos on
click me!

Recommended Stories