ಸೀರಿಯಲ್ ಬಿಟ್ಟು, ದೇಶ- ವಿದೇಶ ಸುತ್ತೋದ್ರಲ್ಲಿ ಬ್ಯುಸಿಯಾಗಿದ್ದಾರೆ ಕನ್ನಡತಿ ಫೇಮ್ ರಮೋಲ

Published : Jun 23, 2024, 05:26 PM IST

ಕನ್ನಡತಿ ಧಾರಾವಾಹಿಯಲ್ಲಿ ಸಾನಿಯಾ ಆಗಿ ಮಿಂಚಿದ್ದ ನಟಿ ರಮೋಲ ಸದ್ಯ ಸೀರಿಯಲ್ ಬಿಟ್ಟು ದೇಶ ವಿದೇಶ ಸುತ್ತೋದ್ರಲ್ಲೇ ಬ್ಯುಸಿಯಾಗಿದ್ದಾರೆ.   

PREV
17
ಸೀರಿಯಲ್ ಬಿಟ್ಟು, ದೇಶ- ವಿದೇಶ ಸುತ್ತೋದ್ರಲ್ಲಿ ಬ್ಯುಸಿಯಾಗಿದ್ದಾರೆ ಕನ್ನಡತಿ ಫೇಮ್ ರಮೋಲ

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ (Kannadathi serial) ವಿಲನ್ ಸಾನಿಯಾ ಪಾತ್ರಕ್ಕೆ ಜೀವ ತುಂಬಿದ ನಟಿ ರಮೋಲಾ. ಇವರು ಸೀರಿಯಲ್ ಅರ್ಧದಲ್ಲೇ ಬಿಟ್ಟರೂ ಸಹ ಇಂದಿಗೂ ಜನ ಇವರನ್ನ ಗುರುತಿಸೋದು ಕನ್ನಡತಿಯ ಸಾನಿಯಾ ಆಗಿ. 
 

27

ಕನ್ನಡತಿ ಧಾರಾವಾಹಿಯಲ್ಲಿ ಇವರ ನಟನೆಗೆ ಸಿಕ್ಕಾಪಟ್ಟೆ ಜನ ಫ್ಯಾನ್ಸ್ ಆಗಿದ್ರು. ಆ ಕೋಪ, ವಿಲನ್ ಲುಕ್, ಆ ಆಟಿಟ್ಯೂಡ್ ಸಾನಿಯಾ ಪಾತ್ರಕ್ಕೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತಿತ್ತು. ಹಾಗಾಗಿ ಮೊದಲ ಸೀರಿಯಲ್ ಮೂಲಕವೇ ನಟಿ ವಿಲನ್ (villain) ಪಾತ್ರವಾದರೂ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. 
 

37

ಕನ್ನಡತಿಯ ಬಳಿಕ ಕೆಲವೊಂದು ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಆದರೆ ಯಾವುದೂ ಇವರಿಗೆ ಹೆಸರು ತಂದು ಕೊಟ್ಟಿಲ್ಲ. ಸಿನಿಮಾ ವಿಚಾರದಲ್ಲಿ ಕೊಂಚ ಗಲಾಟೆಯೂ ನಡೆದಿದ್ದು, ಸಿನಿಮಾ ಬಿಡುಗಡೆಯಾಗಿದ್ಯಾ ಅನ್ನೋದು ತಿಳಿದಿಲ್ಲ. 
 

47

ಇನ್ನು ರಮೋಲ (Raamola) ಹಲವು ಸೀರಿಯಲ್ ನಲ್ಲಿ ಕಾಣಿಸಿಕೊಂಡಲು, ಎಲ್ಲವೂ ಒಂದೆರಡು ಎಪಿಸೋಡ್ ಗಳು ಅಷ್ಟೇ. ಅಮೃತಧಾರೆ, ಸೀತಾ ರಾಮ, ಅಂತರಪಟ ಹೀಗೆ ಮೂರು ಸೀರಿಯಲ್ ಗಳಲ್ಲಿ ಹೀಗೆ ಬಂದು ಹಾಗೇ ಹೋಗುವ ಪಾತ್ರದಲ್ಲಿ ರಮೋಲ ನಟಿಸಿದ್ದರು. 
 

57

ಸದ್ಯ ನಟಿ ಯಾವುದೇ ಸಿನಿಮಾ, ಸೀರಿಯಲ್ ಗಳಲ್ಲೂ ನಟಿಸುತ್ತಿಲ್ಲ. ಹಾಗಾಗಿ ಟ್ರಾವೆಲ್ ಮಾಡ್ತಾ, ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ರೀಲ್ಸ್ ಹಾಕುತ್ತಾ, ಸಖತ್ತಾಗಿ ಡ್ಯಾನ್ಸ್ ಮಾಡ್ತಾ ಸುದ್ದಿಯಲ್ಲಿರುತ್ತಾರೆ. 
 

67

ಈ ಬಾರಿ ನಟಿ ವಿಯೆಟ್ನಾಂ (Vietnam) ಪ್ರವಾಸಕ್ಕೆ ತೆರಳಿದ್ದು, ಕಳೆದ ಕೆಲವು ದಿನಗಳಿಂದ ಅಲ್ಲಿಯೇ ಎಂಜಾಯ್ ಮಾಡ್ತಿದ್ದಾರೆ.. ಜೊತೆಗೆ ಸುಂದರವಾದ ಜಾಗಗಳಲ್ಲಿ ಫೋಟೋಗಳನ್ನು ಕ್ಲಿಕ್ ಮಾಡುತ್ತಾ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ. 
 

77

ಸಾನಿಯಾ ತುಂಬಾನೆ ಸ್ಟೈಲಿಶ್ ಮತ್ತು ಸುಂದರವಾಗಿ ಕಾಣಿಸುತ್ತಿದ್ದು, ಅಭಿಮಾನಿಗಳು ಸುಂದರಿ, ಧರೆಗಿಳಿದ ಅಪ್ಸರೆ, ಅಂದ ಅಂದ್ರೆ ನೀವೆ ಇರಬೇಕು, ತುಂಬಾನೆ ಸೆಕ್ಸಿಯಾಗಿ ಕಾಣಿಸ್ತಿದ್ದೀರಾ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಫೋಟೋ ನೋಡಿ ನಿಮಗೆ ಏನು ಅನಿಸಿತು ಹೇಳಿ? 
 

Read more Photos on
click me!

Recommended Stories