ಹೆಂಡ್ತಿ ಜೊತೆ ಭಾಗ್ಯಲಕ್ಷ್ಮಿ ಸೀರಿಯಲ್ ಸುದರ್ಶನ್ ರಂಗಪ್ರಸಾದ್ ಕಲರ್ ಫುಲ್ ಫೋಟೋ ಶೂಟ್

Published : Mar 27, 2024, 02:40 PM IST

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಪಾತ್ರದ ಮೂಲಕ ಮನೆಮಾತಾಗಿರುವ ನಟ ಸುದರ್ಶನ್ ರಂಗಪ್ರಸಾದ್ ತಮ್ಮ ಪತ್ನಿ ಜೊತೆ ಹೊಸ ಫೋಟೋ ಶೂಟ್ ಹಂಚಿಕೊಂಡಿದ್ದಾರೆ.   

PREV
17
ಹೆಂಡ್ತಿ ಜೊತೆ ಭಾಗ್ಯಲಕ್ಷ್ಮಿ ಸೀರಿಯಲ್  ಸುದರ್ಶನ್ ರಂಗಪ್ರಸಾದ್ ಕಲರ್ ಫುಲ್ ಫೋಟೋ ಶೂಟ್

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಭಾಗ್ಯಲಕ್ಷ್ಮೀಯಲ್ಲಿ ಹೀರೋ ಕಮ್ ವಿಲನ್ ಆಗಿ ತಾಂಡವ್ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿರುವ ನಟ ಸುದರ್ಶನ್ ರಂಗಪ್ರಸಾದ್. 
 

27

ಮಾಡೋದು ನೆಗಟಿವ್ ಪಾತ್ರವಾದರೂ ಸಹ, ತಮ್ಮ ಅದ್ಭುತ ನಟನೆ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದಿರುವ ನಟ ಸುದರ್ಶನ್ (Sudarshan Rangaprasad). ಪತ್ನಿ ಭಾಗ್ಯಳಿಗೆ ತಾಂಡವ್ ಕೆಟ್ಟದು ಮಾಡ್ತಿದ್ದರೂ, ಅವರ ಅಭಿನಯಕ್ಕೆ ಸೋತಿರುವ ಜನರು ವಾವ್ ವಾವ್ ಎನ್ನುತ್ತಲೇ ಇರುತ್ತಾರೆ. 
 

37

ಇದೀಗ ತಾಂಡವ್ ಖ್ಯಾತಿಯ ಸುದರ್ಶನ್ ರಂಗಪ್ರಸಾದ್ ತಮ್ಮ ರಿಯಲ್ ಲೈಫ್ ಪತ್ನಿಯಾಗಿರುವ ಸಂಗೀತ ಭಟ್ (Sangeetha Bhat) ಜೊತೆ ಫೋಟೊ ಶೂಟ್ ಮಾಡಿಸಿದ್ದು, ಆ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

47

ಸುದರ್ಶನ್ ರಂಗಪ್ರಸಾದ್ ಪಿಂಕ್ ಬಣ್ಣದ ಗೋಲ್ಡನ್ ವರ್ಕ್ ಇರುವ ಕುರ್ತಾ ಮತ್ತು ಪ್ಯಾಂಟ್ ಧರಿಸಿದರೆ, ಸಂಗೀತ ನೀಲಿ ಬಣ್ಣದ ಇಳ್ಕಲ್ ಸೀರೆಯುಟ್ಟಿದ್ದಾರೆ. ಇಬ್ಬರೂ ಸಾಂಪ್ರದಾಯಿಕ ಉಡುಗೆಯಲ್ಲಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. 
 

57

ಸುದರ್ಶನ್ ಮತ್ತು ಸಂಗೀತ ಹಿಂದೆ ‘ಪ್ರೀತಿ ಗೀತಿ ಇತ್ಯಾದಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು, ಇದೇ ಸಂದರ್ಭದಲ್ಲಿ ಇಬ್ಬರು ಲವ್ ಮಾಡಿದ್ದರು ಎನ್ನಲಾಗುತ್ತೆ, ಬಳಿಕ ಈ ಜೋಡಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು, ಬಳಿಕ ಮದುವೆಯಾಗಿ, ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು.
 

67

ಸುದರ್ಶನ್ ಸದ್ಯ ಸೀರಿಯಲ್ ನಲ್ಲಿ (serial) ಬ್ಯುಸಿಯಾಗಿದ್ದು, ಸಿನಿಮಾಗಳತ್ತಲೂ ಮುಖ ಮಾಡಿದ್ದಾರೆ. ಇನ್ನು ಸಂಗೀತ ಭಟ್ ಮಾಮು ಟೀ ಅಂಗಡಿ, ಎರಡನೇ ಸಲ, ದಯವಿಟ್ಟು ಗಮನಿಸಿ, ಕಿಸ್ಮತ್, ಕಕಕ, ಖಾಖಿ ಸೌಂಡ್ ಅಫ್ ವಾರ್ನಿಂಗ್ ಎನ್ನುವ ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. 

77

ಸಂಗೀತ್ ಭಟ್ ಕೊನೆಯದಾಗಿ ಆದ್ಯಾಂತರ, ಕ್ಲಾಂತ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋ ಶೂಟ್ (Photoshoot) ಶೇರ್ ಮಾಡುವ ಮೂಲಕವೂ ಸದಾ ಸುದ್ದಿಯಲ್ಲಿರುತ್ತಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories