Puttakkana Makkalu: ತಾಳಿ ಬಿಚ್ಚಿಕೊಟ್ಟ ಸಹನಾ, ಬೇಷ್ ಅಂತಿದ್ದಾರೆ ಫ್ಯಾನ್ಸ್, ಬದಲಾಗ್ತಿದೆ ವೀಕ್ಷಕರ ಮನಸ್ಸು

First Published Mar 27, 2024, 10:07 PM IST

ತಾಳಿನೇ ಸರ್ವಸ್ವ ಅನ್ನೋ ತಾಯಿ ಎದುರೇ.. ಮಾಂಗಲ್ಯ ತೆಗೆದಿದ್ದಾಳೆ ಸಹನಾ. ಇದನ್ನು ನೋಡಿ ಕೋಪಗೊಂಡಿರುವ ಪುಟ್ಟಕ್ಕ, ಮಗಳ ಕೆನ್ನೆಗೆ ನಾಲ್ಕು ಬಾರಿಸಿದ್ದಾಳೆ. ತಾಳಿ ಮಹತ್ವ ಹೇಳಿದ್ದಾಳೆ. ಆದರೆ ಪ್ರೇಕ್ಷಕರು ಮಾತ್ರ ಸಹನಾ ಮಾಡಿದ್ದೆ ಸರಿ ಅಂತಿದ್ದಾರೆ. ನೀವೇನಂತೀರಿ… 
 

ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಇದೀಗ ಬಹಳ ಕುತೂಹಲದ ಹಂತ ತಲುಪಿದೆ. ಪುಟ್ಟಕ್ಕನ ಮನೆಯವರ ವಿರುದ್ಧ ದೂರು ನೀಡಿ ಪಂಚಾಯಿತಿಗೆ ಬರುವಂತೆ ಮಾಡಿರುವ ಮುರಳಿ ಮತ್ತು ಅವರ ಅಮ್ಮ, ಸಹನಾ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದ್ದಾರೆ. ಸಹನಾ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಸಹ ಹೇಳಿದ್ದಾರೆ. ಆದರೆ ಇದನ್ನೆಲ್ಲಾ ಕೇಳಿಸಿಕೊಂಡಿರುವ ಸಹನಾ ಗಂಡ ಮುರಳಿ ಮಾತ್ರ ಸುಮ್ಮನಿದ್ದಾನೆ. 
 

ತಾನು ಯಾವ ತಪ್ಪು ಮಾಡಿಲ್ಲ ಎಂದು ಸಹನಾ ಹೇಳಿದ್ರೂ, ಇರ್ಲಿ ಬಿಡು ಕೂತು ಮಾತಾಡೋಣ ಎನ್ನುವ ಮುರಳಿಯ ಮಾತು ಸಹನಾಗೆ ಕೋಪ ತರಿಸಿದೆ. ಜೊತೆಗೆ ಅತ್ತೆಯ ಚುಚ್ಚು ಮಾತು, ಕೊನೆಗೆ ಅತ್ತೆ ತಾಳಿ ಬಿಚ್ಚಿ ಕೊಡುವಂತೆ ಸಹನಾಗೆ ಸವಾಲು ಹಾಕಿದಾಗ ಸಹನಾ ಯೋಚನೆ ಮಾಡದೇ, ತನ್ನ ತಾಳಿಯನ್ನು ಕಿತ್ತು ಅತ್ತೆಯ ಕೈಯಲ್ಲಿಡುತ್ತಾಳೆ. 
 

ಗಂಡ ದೂರ ಹೋದರೂ ತಾಳಿಯೆಂದರೆ ಸರ್ವಸ್ವ ಅನ್ನೋ ಪುಟ್ಟಕ್ಕನ ಎದುರೇ ಸಹನಾ ಮಾಂಗಲ್ಯವನ್ನು ಬಿಚ್ಚಿ ಕೊಟ್ಟಿರೋದು ಪುಟ್ಟಕ್ಕನಿಗೆ ಕೋಪ ತರಿಸಿದ್ದು, ಸಹನಾ ಕೆನ್ನೆಗೆ ನಾಲ್ಕು ಬಾರಿಸಿದ್ದಾಳೆ. ಪವಿತ್ರವಾದ ಮಾಂಗಲ್ಯವನ್ನು ಪಂಚಾಯತಿಯಲ್ಲಿ ಎಲ್ಲರೆದುರು ಬಿಚ್ಚಿ ನಮ್ಮ ಮರ್ಯಾದೆ ತೆಗೆದಿರೋದಾಗಿ ಹೇಳಿ, ಹಣೆ ಹಣೆ ಚಚ್ಚಿಕೊಂಡಿದ್ದಾಳೆ ಪುಟ್ಟಕ್ಕ. 
 

ಆದರೆ ವೀಕ್ಷಕರು ಸಂಪೂರ್ಣವಾಗಿ ಸಹನಾಗೆ ಬೆಂಬಲ ನೀಡಿದ್ದು, ಸಹನ ಮಾಡಿದ್ದು ಒಳ್ಳೇದೇ ಆಯ್ತು . ಇಂತಹ ಕೆಟ್ಟ ಗಂಡ, ಅತ್ತೆ ಮನೆ ಬೇಡ ಸಹನ ಮತ್ತೆ ಓದಿ ಧೈರ್ಯವಂತಳಾಗಬೇಕು. ಇದು ದಾರವಾಹಿನೆ ಆದ್ರೂ, ತುಂಬಾ ಅರ್ಥ ಪೂರ್ಣವಾಗಿ ತಿಳಸಿದ್ದೀರ. ಈ ತರ ಬೇರೆವರ ಮಾತು ಕೇಳಿ ಸೊಸೆ ನ ಕೆಟ್ಟವಳಾಗಿ ನೋಡುವ ಅತ್ತೆಗೆ ಬುದ್ದಿ ಕಲಿಸುವ ಒಂದು ಒಳ್ಳೆಯ ದೃಶ್ಯ ಕೂಡ ಇರಲಿ ಎಂದು ಸಹ ಜನ ಹೇಳಿದ್ದಾರೆ. 
 

ಕೆಲವರು ಅತ್ತೆ ಮಾವ ಸರಿ ಇಲ್ಲದಿದ್ರೂ, ಗಂಡ ಸರಿ ಇದ್ರೆ ಹೆಣ್ಣು ಎಷ್ಟೇ ನೋವಿದ್ರು ಸಹಿಸ್ಕೊಂಡು ಹೋಗಬಹುದು. ಆದರೆ ಗಂಡನೇ ಹೆಂಡ್ತಿನ ನಂಬದೇ ಇದ್ರೆ, ಅವಳ ಮಾತನ್ನು ಸುಳ್ಳು ಅಂದ್ಕೊಂಡು, ಸತ್ಯ ತಿಳಿಯೋ ಪ್ರಯತ್ನಾನೆ ಮಾಡದಿದ್ರೆ, ಅಂತಹ ಗಂಡನಿಂದ ದೂರ ಇರೋದೇ ಒಳ್ಳೆದು ಸಹನಾ ಮಾಡಿರೋದು ಸರಿಯಾಗಿಯೇ ಇದೆ ಎಂದು ಕೆಲವರು ಹೇಳಿದ್ದಾರೆ. 
 

ಮತ್ತೆ ಕೆಲವರು, ಒಳ್ಳೆ ನಿರ್ಧಾರ ಸಹನಾ ಯಾವುದೇ ಕಾರಣಕ್ಕೂ ನೀನು ಸೋಲಬಾರದು ಈ ಸಮಾಜ ಗಂಡ ಬಿಟ್ಟೋಳು ಅಂದ್ರು ಪರವಾಗಿಲ್ಲ ಇಂಥ ಗಂಡ ಬೇಡ. ಸಹನಾ ಹೋರಾಟ ಕ್ಕೆ ಜಯ ಸಿಗಲಿ ಎಂದು ಮತ್ತೆ ಕೆಲವರು ಹಾರೈಸಿದ್ದಾರೆ. ಅಲ್ಲದೇ ಮುರಳಿ ಗಿಂತ ಕಾಳಿ ನೇ ಗ್ರೇಟ್... ಪಾಪ ಎಷ್ಟೊಂದು ಪ್ರೀತಿ ಮಾಡುತ್ತಾನೆ.. ಅವನ ಹುಡಗಿ ಬೇರೇ ಮದುವೆ ಆದರೂ ಅವನ ಪ್ರೀತಿ ಚೂರು ಕಡಿಮೆ ಆಗಿಲ್ಲ ಎಂದಿದ್ದಾರೆ.
 

ಮತ್ತೊಬ್ಬ ವೀಕ್ಷಕರು ಇವತ್ತಿನ ದಿನಗಳಲ್ಲಿ ಈ ಸಂಗತಿಗಳು ಸಾಕಷ್ಟು ನಡೆಯುತ್ತಿದೆ. ಹೆಣ್ಣಿನವರು ವರದಕ್ಷಿಣೆ (dowry harrasement) ಕೊಡುವುದನ್ನು ನಿರಾಕರಿಸಿದರೆ ಅವಳ ಮೇಲೆ ಈ ರೀತಿಯ ಅಪವಾದವನ್ನು ಹೊರೆಸುತ್ತಾರೆ. ಇಂತಹ ಧಾರಾವಾಹಿಗಳ ಮೂಲಕ ಇದನ್ನು ತಡೆಯಲು ಮಾರ್ಗದರ್ಶನ ಅಥವಾ ಹೆಣ್ಣಿಗೆ ಹೇಗೆ ಶ್ರೀರಕ್ಷೆ ನೀಡಬಹುದು ಎಂದು ಅಥವಾ ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಕೇಳುವ ಜನರಿಗೆ ಹೇಗೆ ಬುದ್ಧಿ ಕಲಿಸಬಹುದು ಎಂದು ತಿಳಿಸಿ
 

ಸಹನಾ ಅಕ್ಕನ ನಿರ್ಧಾರ ಸರಿ ಆಗಿ ಇದೆ ಇತರ ಚುಚ್ಚು ಮಾತುಗಳು, ಅವಮಾನ, ನೋವು ಗಂಡನೇ ನಂಬದಿರುವ ಪರಿಸ್ಥಿತಿ ಎಲ್ಲವನ್ನು ಸಹಿಸಿಕೊಂಡು ಅವರ ನಡುವೆ ಬದುಕುವುದಕ್ಕಿಂತ ಒಬ್ಬಂಟಿಯಾಗಿ ಬದುಕುವುದೇ ಉತ್ತಮ. ಸಹನಾಳನ್ನು ಅವಳ ಪಾಡಿಗೆ ಬಿಟ್ಟುಬಿಡಿ ಸ್ವಲ್ಪ ಸಮಯ ಎಂದು ಮತ್ತೊಬ್ಬ ಪ್ರೇಕ್ಷಕ ಕಾಳಜಿ ವ್ಯಕ್ತಪಡಿಸಿದ್ದಾರೆ. 
 

click me!