ಫ್ಲವರ್​ ಪ್ರಿಂಟೆಡ್ ಸೀರೆಯಲ್ಲಿ ಮಿಂಚಿದ ಶ್ವೇತಾ ಚೆಂಗಪ್ಪ: ನಿಜವಾದ ಸಂತೂರ್ ‌ಮಮ್ಮಿ ನೀವೆ ಎಂದ ಫ್ಯಾನ್‌!

Published : Jul 31, 2024, 06:25 PM ISTUpdated : Aug 01, 2024, 12:44 PM IST

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಇದೀಗ ಬಿಳಿ ಬಣ್ಣದ ಫ್ಲವರ್​ ಪ್ರಿಂಟೆಡ್​​ ಸೀರೆಯುಟ್ಟ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ. 

PREV
17
ಫ್ಲವರ್​ ಪ್ರಿಂಟೆಡ್ ಸೀರೆಯಲ್ಲಿ ಮಿಂಚಿದ ಶ್ವೇತಾ ಚೆಂಗಪ್ಪ: ನಿಜವಾದ ಸಂತೂರ್ ‌ಮಮ್ಮಿ ನೀವೆ ಎಂದ ಫ್ಯಾನ್‌!

ನಿರೂಪಕಿ ಶ್ವೇತಾ ಚಂಗಪ್ಪ ಅವರು ಸದ್ಯ ಸಿನಿಮಾ, ಟಿವಿ ಶೋ ನಿರೂಪಣೆಯಲ್ಲಿ ಬ್ಯುಸಿ ಆಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನ ಒಂದು ತಂಡದ ಮಾಲೀಕರು ಕೂಡಾ ಆಗಿದ್ದಾರೆ.

27

ಶ್ವೇತಾ ಚಂಗಪ್ಪ ಅವರು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದು, ಅವರು ತಮ್ಮ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಫ್ಯಾನ್ಸ್ ಬಳಿ ಶೇರ್ ಮಾಡಿಕೊಳ್ಳುತ್ತಾರೆ. ಜೊತೆಗೆ ತರೇಹವಾರಿ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

37

ಇದೀಗ ಶ್ವೇತಾ, ಬಿಳಿ ಬಣ್ಣದ ಫ್ಲವರ್​ ಪ್ರಿಂಟೆಡ್​​ ಸೀರೆಯುಟ್ಟ ಫೋಟೋಗಳನ್ನು ಹಂಚಿಕೊಂಡಿದ್ದು, ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಮೃಣಾಲ್ ಎಸ್ ಕಶ್ಯಪ್ ಫೋಟೋಗಳನ್ನು ಸೆರೆ ಹಿಡಿದಿದ್ದು, ಕೀರ್ತಿರಾಮ್ ಅವರು ಶ್ವೇತಾ ಚಂಗಪ್ಪರಿಗೆ ಮೇಕಪ್ ಮಾಡಿದ್ದಾರೆ.

47

ಸದ್ಯ ಶ್ವೇತಾ ಚಂಗಪ್ಪ ಲುಕ್ ನೋಡಿ ನೆಟ್ಟಿಗರು, ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ ಸೂಪರ್, ನಿಜವಾದ ಸಂತೂರ್ ‌ಮಮ್ಮಿ ನೀವೆ, ವೈಯಾರದ ಮುಗಿಲು, ಬ್ಯೂಟಿಫುಲ್, ದೇವತೆಯಂತೆ ಕಾಣ್ತೀರಾ ಅಂತೆಲ್ಲಾ ತರೇಹವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.

57

'ಕಾದಂಬರಿ' ಧಾರಾವಾಹಿ ಮೂಲಕ ಶ್ವೇತಾ ಚಂಗಪ್ಪ ಫೇಮಸ್ ಆಗಿದ್ದರು. ಸೃಜನ್ ಲೋಕೇಶ್ ಮಜಾ ಟಾಕೀಸ್‌ನಲ್ಲಿ ರಾಣಿಯಾಗಿ ಹೆಸರು ಮಾಡಿದ್ರು. ಸದ್ಯ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನಲ್ಲಿ ಕ್ಯಾಪ್ಟನ್ ಆಗಿ ಮಿಂಚುತ್ತಿದ್ದಾರೆ.

67

ಶ್ವೇತಾ ಚಂಗಪ್ಪಾ ಟಿವಿ ಹಾಗೂ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷಗಳಿಗೂ ಹೆಚ್ಚು ಕಳೆದಿದೆ. ಸುಮಾರು ಎರಡು ದಶಕಗಳಿಂದಲೂ ನಿರೂಪಕಿ ಶ್ವೇತಾ ತನ್ನ ಅಭಿನಯದಿಂದ ಅಭಿಮಾನಿಗಳ ಮನಸ್ಸು ಕದ್ದಿದ್ದಾರೆ. ಅನೇಕ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

77

ಮಜಾ ಟಾಕೀಸ್‌ನ ಸುಂದರ ಚೆಲುವೆ ರಾಣಿ ಅಲಿಯಾಸ್‌ ಶ್ವೇತಾ ಚಂಗಪ್ಪ ಸೆಪ್ಟೆಂಬರ್‌ 9, 2019ರಂದು ತಮ್ಮ ಮುದ್ದು ಕೃಷ್ಣನಿಗೆ ಜನ್ಮ ನೀಡಿದ್ದರು. ಇದೀಗ ಬಿಳಿ ಬಣ್ಣದ ಫ್ಲವರ್​ ಪ್ರಿಂಟೆಡ್​​ ಸೀರೆಯುಟ್ಟು ನಗು ಮುಖದಲ್ಲಿ ಕಂಗೊಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories