ಮಗು ನೇಹಾ ಗೌಡ ಫೋಸ್, ಇಷ್ಟು ಬೇಗ ಡೆಲಿವರಿ ಆಗೋಯ್ತ?!

First Published | Jul 30, 2024, 12:27 PM IST

ಕಿರುತೆರೆಯ ಗೊಂಬೆ ಖ್ಯಾತಿಯ ನಟಿ ನೇಹಾ ಗೌಡ ಮಗುವಿನ ಜೊತೆಗಿನ ಫೋಟೋ ಶೇರ್ ಮಾಡಿದ್ದು, ಅಭಿಮಾನಿಗಳು ಪ್ರೀತಿಯಿಂದ ನಟಿಗೆ ಹಾರೈಸಿದ್ದಾರೆ. 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಗೊಂಬೆ ಪಾತ್ರದ ಮೂಲಕ ಮಿಂಚಿದ ನಟಿ ನೇಹಾ ಗೌಡ ಸದ್ಯ ಶೀಘ್ರವೇ ತಾಯಿಯಾಗುವ ತಯಾರಿಯಲ್ಲಿದ್ದಾರೆ. ಗರ್ಭಿಣಿಯಾಗಿರುವ ನಟಿ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೇಬಿ ಬಂಪ್ ಫೋಟೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. 
 

ಗರ್ಭಿಣಿ (pregnant) ಎಂದು ಸೋಶಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ ಬಳಿಕ ನೇಹಾ ಗೌಡ ತಮ್ಮ ಗಂಡನ ಜೊತೆಗೆ, ಫ್ಯಾಮಿಲಿ ಜೊತೆಗೆ ತಮ್ಮ ಪ್ರೆಗ್ನೆನ್ಸಿ ಲೈಫ್ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಸದಾ ಹಂಚಿಕೊಳ್ಳುತ್ತಲೇ ಇರುತ್ತಾರೆ. 

Latest Videos


ಇತ್ತೀಚೆಗಷ್ಟೇ ಊರಿಗೆ ತೆರಳಿ ಅಲ್ಲಿ ಕುಟುಂಬದ ಎಲ್ಲಾ ಸದಸ್ಯರ ಜೊತೆ ಪೂಜೆ ಸಲ್ಲಿಸಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದರು. ಅಲ್ಲದೇ ಗಂಡ ಚಂದನ್ ಗೌಡ ಜೊತೆಗೆ ಮೆಟರ್ನಿಟಿ ಫೋಟೋ ಶೂಟ್ (maternity photoshoot) ಮಾಡಿಸಿ ಆ ಫೋಟೋಗಳನ್ನು ಸಹ ಹಂಚಿಕೊಂಡಿದ್ದರು. 
 

ಸೋಶಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ಒಂದಲ್ಲ ಒಂದು ಫೋಟೋಗಳ ಮೂಲಕ ಸದಾ ಆಕ್ಟಿವ್ ಆಗಿರುವ ನೇಹಾ ಇದೀಗ ಪುಟ್ಟ ಮಗುವಿನ ಜೊತೆಗಿನ ಫೋಟೋ ಶೇರ್ ಮಾಡಿದ್ದು, ಇದನ್ನ ಅಭಿಮಾನಿಗಳು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. 
 

ನೇಹಾ ಗೌಡ ತುಂಬು ಗರ್ಭಿಣಿ ನಿಜಾ, ಆದ್ರೆ ಅವರ ಡೆಲಿವರಿ ಆಗಿಲ್ಲ. ನಟಿ ತಮ್ಮ ಸ್ನೇಹಿತೆಯೊಬ್ಬರ ಮಗುವಿನ ಜೊತೆಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಸ್ನೇಹಿತೆ ಮತ್ತು ಇಬ್ಬರು ಮಕ್ಕಳ ಜೊತೆಗೆ ತಾವು ಮಗುವಾಗಿ ಮುದ್ದು ಮಾಡುತ್ತಿರುವ ಒಂದಷ್ಟು ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ. 
 

ಇದನ್ನ ನೋಡಿದ ಕೆಲವರು ಮೇಡಂ ಪಾಪು ನಿಮ್ಮದ ಅಂತ ಕೇಳಿದ್ರೆ, ಇನ್ನೂ ಕೆಲವರು ನಿಮಗೂ ಇಂತದ್ದೇ ಮುದ್ದಾದ ಪಾಪು ಬರಲಿ, ಪಾಪು ತುಂಬಾನೆ ಮುದ್ದಾಗಿದೆ, ನಿಮಗೂ ಆಲ್ ದ ಬೆಸ್ಟ್ ಎಂದು ಹಾರೈಸಿದ್ದಾರೆ. 
 

ಅಷ್ಟೇ ಅಲ್ಲ ಇನ್ನೂ ಕೆಲವರು ಗೊಂಬೆ ಕೈಯಲ್ಲಿ ಇನ್ನೊಂದು ಗೊಂಬೆ ಇದೆ, ನಿಮ್ಮನ್ನ ನೋಡೋದಕ್ಕೆ ತುಂಬಾನೆ ಖುಷೀಯಾಗ್ತಿದೆ ಎಂದು ಸಹ ಜನ ಹೇಳಿದ್ದಾರೆ. ಎರಡು ತಿಂಗಳ ಹಿಂದಷ್ಟೇ ನಟಿ ತಾವು ಗರ್ಭಿಣಿ ಅನ್ನೋದನ್ನ ತಿಳಿಸಿದ್ದರು. ಇದೀಗ ಇವರಿಗೆ 6 ತಿಂಗಳು ಆಗಿದೆ. 
 

click me!