ಸಮಯ ಕಳೆದಂತೆ ಗಂಡ, ಅತ್ತೆ ಸೇರಿ ಮನೆಯವರೆಲ್ಲರ ಪ್ರೀತಿ ಗಳಿಸುವ ಸತ್ಯ, ಮನೆಯವರೆಲ್ಲರ ಬೆಂಬಲದ ಮೇರೆಗೆ ಮತ್ತೆ ಕಾಲೇಜು ಕಲಿತು, ತನ್ನ ಕನಸಿನ ಪೊಲೀಸ್ ಉದ್ಯೋಗಕ್ಕೆ ಆಯ್ಕೆಯಾಗಿ, ಸದ್ಯಕ್ಕೆ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಹಲವು ರೌಡಿ, ಪುಂಡರ ಹುಟ್ಟಡಗಿಸಿದ್ದಾಳೆ ಸತ್ಯ. ಇದೆಲ್ಲಾ ಆಗಿ ಸದ್ಯಕ್ಕೆ ಮನೆಮಂದಿ ಎಲ್ಲಾ ಮೊಮ್ಮಗುವಿನ ಆಸೆಯಲ್ಲಿರುವಾಗ್ಲೇ ಸತ್ಯಾ ಪ್ರೆಗ್ನೆಂಟ್ ಅನ್ನೋದು ಗೊತ್ತಾಗಿದೆ. ಇದೆಲ್ಲಾ ನೋಡ್ತಿದ್ರೆ, ಸತ್ಯಾಗೆ ಮಗುವಾಗುವ ಮೂಲಕ ಸೀರಿಯಲ್‌ಗೆ ಹ್ಯಾಪಿ ಎಂಡಿಂಗ್ ಕೊಡ್ತಾರೆನೋ ಅನಿಸ್ತಿದೆ, ಯಾವುದಕ್ಕೂ ಕಾದು ನೋಡಬೇಕು.