ಕನ್ನಡ ಕಿರುತೆರೆಯಲ್ಲಿ ಸದ್ಯ ಒಂದಕ್ಕಿಂತ ಒಂದು ಅದ್ಭುತವಾದ ಸೀರಿಯಲ್ ಗಳು (Serials) ಪ್ರಸಾರವಾಗುತ್ತಿವೆ. ಅಷ್ಟೇ ಯಾಕೆ ಅದರಲ್ಲಿ ಟಾಪ್ ನಟ -ನಟಿಯರು ನಟಿಸುತ್ತಿದ್ದಾರೆ. ಈ ನಟರು ಎಷ್ಟು ಸಂಭಾವನೆ ಪಡೆಯುತ್ತಿರಬಹುದು ಅನ್ನೋದನ್ನು ತಿಳಿಯೋ ಕುತೂಹಲ ನಿಮಗೂ ಇರುತ್ತೆ ಅಲ್ವಾ? ಹಾಗಿದ್ರೆ ನಿಮ್ಮ ಕುತೂಹಲಕ್ಕೆ ಬ್ರೇಕ್ ಹಾಕುವ ಮಾಹಿತಿ ಇಲ್ಲಿದೆ.
ಉಮಾಶ್ರೀ (Umashree)
ಕನ್ನಡ ಹಿರಿಯ ನಟಿ ಹಾಗೂ ಸದ್ಯ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕ ಆಗಿ ಮಿಂಚುತ್ತಿರುವ ನಟಿ ಉಮಾಶ್ರೀ ಒಂದು ಎಪಿಸೋಡ್ ಗೆ ಬರೋಬ್ಬರಿ 35 ಸಾವಿರ ರೂಪಾಯಿ ಪಡೆಯುತ್ತಾರೆ.
ರಾಜೇಶ್ ನಟರಂಗ (Rajesh Nataranga)
ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚುತ್ತಿರುವ ಈಗ ಅಮೃತಧಾರೆಯ ಗೌತಮ್ ದಿವಾನ್ ಆಗಿ ಮೋಡಿ ಮಾಡುತ್ತಿರುವ ನಟ ರಾಜೇಶ್ ನಟರಂಗ ಪ್ರತಿ ಎಪಿಸೋಡ್ ಗೆ 20 ಸಾವಿರ ಪಡೆಯುತ್ತಾರೆ.
ಸುಧಾರಾಣಿ (Sudharani)
ಕನ್ನಡ ಚಿತ್ರರಂಗದ ಎವರ್ ಗ್ರೀನ್ ಬ್ಯೂಟಿ, ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿಯಾಗಿ ಮಿಂಚುತ್ತಿರುವ ನಟಿ ಸುಧಾರಾಣಿ ಪ್ರತಿ ಎಪಿಸೋಡಿಗೆ 25 ಸಾವಿರ ರೂಪಾಯಿ ಪಡೆಯುತ್ತಾರೆ.
ವಿಜಯ್ ಸೂರ್ಯ (Vijay Surya)
ಅಗ್ನಿ ಸಾಕ್ಷಿ ಮೂಲಕ ಜನಪ್ರಿಯತೆ ಪಡೆದ ಡಿಂಪಲ್ ಹುಡುಗ ವಿಜಯ್ ಸೂರ್ಯ ನಮ್ಮ ಲಚ್ಚಿಯಲ್ಲಿ ಸಂಗಮ್ ಆಗಿ ಮಿಂಚಿದರು. ಇವರು ಪ್ರತಿ ಎಪಿಸೋಡ್ ಗೆ 15 ಸಾವಿರ ಪಡೆಯುತ್ತಿದ್ದರಂತೆ. ಇದೀಗ ಇವರ ಸೀರಿಯಲ್ ಅಗ್ನಿಸಾಕ್ಷಿಯ ಅನೇಕ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈಷ್ಣವಿ ಜೊತೆ ಮತ್ತೊಂದು ಸೀರಿಯಲ್ ಮಾಡಿ ಅಂತ ಸೀರಿಯಲ್ ಪ್ರೇಮಿಗಳು ಒತ್ತಾಯಿಸುತ್ತಲೇ ಇದ್ದಾರೆ.
ಛಾಯಾ ಸಿಂಗ್ (Chaya Singh)
ಕನ್ನಡ, ತೆಲಗು ಮತ್ತು ತಮಿಳು ಸಿನಿಮಾಗಳಲ್ಲಿ ಮಿಂಚಿ, ಸದ್ಯ ಎರಡೂ ಭಾಷೆಯ ಕಿರುತೆರೆಯಲ್ಲಿ ಸದ್ದು ಮಾಡ್ತಾ, ಅಮೃತಧಾರೆಯಲ್ಲಿ ಭೂಮಿಕಾ ಆಗಿ ನಟಿಸುತ್ತಿರುವ ಛಾಯಾ ಸಿಂಗ್ ಪ್ರತಿ ಎಪಿಸೋಡ್ ಗೆ 20 ಸಾವಿರ ರೂಪಾಯಿ ಪಡೆಯುತ್ತಾರೆ.
ವೈಷ್ಣವಿ ಗೌಡ (Vaishnavi Gowda)
ಇನ್ನು ಅಗ್ನಿಸಾಕ್ಷಿಯಲ್ಲಿ ಸನ್ನಿಧಿಯಾಗಿ ಜನಮನ ಗೆದ್ದು, ಇದೀಗ ಸೀತಾ ರಾಮಾ ಧಾರಾವಾಹಿಯಲ್ಲಿ ಸೀತಾ ಆಗಿ ಅಮೋಘ ಅಭಿನಯ ನೀಡುತ್ತಿರುವ ವೈಷ್ಣವಿ ಗೌಡ 15 ಸಾವಿರ ಪ್ರತಿ ಎಪಿಸೋಡ್ ಗೆ ಪಡೆಯುತ್ತಿದ್ದಾರೆ.
ಗಗನ್ ಚಿನ್ನಪ್ಪ (Gagan Chinnappa)
ಮಂಗಳ ಗೌರಿ ಮದುವೆ ಮೂಲಕ ಕನ್ನಡ ಸೀರಿಯಲ್‌ಗೆ ಎಂಟ್ರಿ ಕೊಟ್ಟು, ಇದೀಗ ಸೀತಾ ರಾಮ ಸೀರಿಯಲ್ ನಲ್ಲಿ ರಾಮ ಆಗಿ ಮಿಂಚುತ್ತಿರುವ ನಟ ಗಗನ್ ಚಿನ್ನಪ್ಪ ಪ್ರತಿ ಎಪಿಸೋಡ್ ಗೆ 15 ಸಾವಿರ ರೂಪಾಯಿ ಪಡೆಯುತ್ತಾರೆ.
ಅಮೂಲ್ಯ ಗೌಡ (Amulya Gowda)
ಕಮಲಿ ಧಾರಾವಾಹಿಯಲ್ಲಿ ಕಮಲಿಯಾಗಿ ಮಿಂಚಿದ ಮುದ್ದು ಮುಖದ ಚೆಲುವೆ ಅಮೂಲ್ಯ ಗೌಡ, ಈಗ ಶ್ರೀಗೌರಿ ಧಾರಾವಾಹಿಯಲ್ಲಿ ಗೌರಿಯಾಗಿ ನಟಿಸುತ್ತಿದ್ದಾರೆ. ಇವರು ಪ್ರತಿ ಎಪಿಸೋಡ್ ಗೆ 12 ಸಾವಿರ ಪಡೆಯುತ್ತಾರೆ.