Kannada TV Serial TRP: ಎಲ್ಲ ಅದಲು ಬದಲು; ಟಾಪ್‌ ಸೀರಿಯಲ್‌ಗಳನ್ನು ಹಿಂದಿಕ್ಕಿ, No 1 ಆದ ಹೊಸ ಧಾರಾವಾಹಿ

Published : Oct 09, 2025, 03:54 PM IST

Kannada Serial TV TRP 2025: ಈ ವಾರದ ಟಿಆರ್‌ಪಿ ಹೊರಬಿದ್ದಿದೆ. ವಾರದಿಂದ ವಾರಕ್ಕೆ ಟಿಆರ್‌ಪಿ ಬದಲಾಗುವುದು, ಈ ಬಾರಿ ಟಿಆರ್‌ಪಿಯಲ್ಲಿ ದೊಡ್ಡ ಬದಲಾವಣೆ ಆಗಿದ್ದು, ಹೊಸ ಸೀರಿಯಲ್‌ವೊಂದು ಟಾಪ್‌ 5 ಸ್ಥಾನದಲ್ಲಿ ಕೂತಿದೆ. ಟಾಪ್‌ 10 ಧಾರಾವಾಹಿಗಳು ಯಾವುವು? ಯಾವ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಸಿಗ್ತು? 

PREV
15
ಎಷ್ಟು TRP ಬಂದಿದೆ?

ಜೀ ಕನ್ನಡ, ಕಲರ್ಸ್‌ ಕನ್ನಡ, ಸ್ಟಾರ್‌ ಸುವರ್ಣ ವಾಹಿನಿಯ ಯಾವ ಧಾರಾವಾಹಿಗಳಿಗೆ ಎಷ್ಟು ಟಿಆರ್‌ಪಿ ಬಂದಿದೆ? ಟಾಪ್‌ 10 ಧಾರಾವಾಹಿಗಳು ಯಾವುವು? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

25
ಸ್ಟಾರ್‌ ಸುವರ್ಣ ಧಾರಾವಾಹಿಗಳು

ಆಸೆ ಧಾರಾವಾಹಿ 4.8

ನಿನ್ನ ಜೊತೆ ನನ್ನ ಕಥೆ ಧಾರಾವಾಹಿ 5.9

ವಸುದೈವ ಕುಟುಂಬ 3.6 TVR

ಶ್ರೀ ರೇಣುಕಾ ಯಲ್ಲಮ್ಮ 4.4 TVR

ಶ್ರೀ ದೇವಿ ಮಹಾತ್ಮೆ ಧಾರಾವಾಹಿ 3.4 TVR

ಶಾರದಾ ಧಾರಾವಾಹಿ 2.6

35
ಕಲರ್ಸ್‌ ಕನ್ನಡ ವಾಹಿನಿ ಧಾರಾವಾಹಿಗಳು

ಯಜಮಾನ ಹಾಗೂ ರಾಮಾಚಾರಿ ಧಾರಾವಾಹಿ ಮಿಲನ 2.0

ಪ್ರೇಮಕಾವ್ಯ ಧಾರಾವಾಹಿ 4.4

ಭಾಗ್ಯಲಕ್ಷ್ಮೀ ಧಾರಾವಾಹಿ 4.3

ಮುದ್ದು ಸೊಸೆ ಧಾರಾವಾಹಿ 4.4

ನಿನಗಾಗಿ ಧಾರಾವಾಹಿ 4.4

ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ 4.9

ನಂದಗೋಕುಲ ಧಾರಾವಾಹಿ 5.4

45
ಜೀ ಕನ್ನಡ ಧಾರಾವಾಹಿಗಳು

ಪುಟ್ಟಕ್ಕನ ಮಕ್ಕಳು ಧಾರಾವಾಹಿ 6 TVR

ಅಮೃತಧಾರೆ ಧಾರಾವಾಹಿ 9 TVR

ಅಣ್ಣಯ್ಯ ಧಾರಾವಾಹಿ 8.9 TVR

ಕರ್ಣ ಧಾರಾವಾಹಿ 8.7 TVR

ಲಕ್ಷ್ಮೀ ನಿವಾಸ ಧಾರಾವಾಹಿ 7.5 TVR

ರಾಘವೇಂದ್ರ ಮಹಾತ್ಮೆ ಧಾರಾವಾಹಿ 5.4

ನಾ ನಿನ್ನ ಬಿಡಲಾರೆ ಧಾರಾವಾಹಿ 5.5

ಬ್ರಹ್ಮಗಂಟು ಧಾರಾವಾಹಿ 5.2

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ 3.8

55
ಟಾಪ್‌ ಧಾರಾವಾಹಿಗಳಿವು

ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿಯಲ್ಲಿ ಐದು ವರ್ಷಗಳ ಬಳಿಕ ಭೂಮಿಕಾ ಹಾಗೂ ಮಗನನ್ನು ಗೌತಮ್‌ ನೋಡಿದ್ದಾನೆ. ಆದರೆ ಗೌತಮ್‌ನನ್ನು ಅವರು ದೂರ ಇಟ್ಟಿದ್ದಾರೆ. ಇನ್ನೊಂದು ಕಡೆ ಗೌತಮ್‌ ತನ್ನ ಮಗಳ ಹುಡುಕಾಟದಲ್ಲಿದ್ದಾನೆ. ಗೌತಮ್‌ಗೆ ಅಚಾನಕ್‌ ಆಗಿ ಒಂದು ಬಾಲಕಿ ಸಿಕ್ಕಿದ್ದು, ಅವಳೇ ತನ್ನ ಮಗಳು ಎನ್ನೋ ಸತ್ಯ ಯಾವಾಗ ಗೊತ್ತಾಗಲಿದೆ ಎಂದು ಕಾದು ನೋಡಬೇಕಿದೆ.

ಅಣ್ಣಯ್ಯ ಧಾರಾವಾಹಿ

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು-ಪಾರು, ರಾಣಿ-ಮನು, ಜಿಮ್‌ ಸೀನ-ಗುಂಡಮ್ಮ ಸುತ್ತ ಕಥೆ ಸಾಗುತ್ತಿದೆ. ಇವರೆಲ್ಲರ ಖುಷಿ ಹಾಳುಮಾಡಲು ವೀರಭದ್ರ ರೆಡಿ ಆಗಿದ್ದಾನೆ. ಈ ಕುರಿತು ಎಪಿಸೋಡ್‌ ಪ್ರಸಾರ ಆಗುತ್ತಿದೆ.

ಕರ್ಣ ಧಾರಾವಾಹಿ

ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಹಾಗೂ ತೇಜಸ್‌ ಮದುವೆ ಕಾರ್ಯ ನಡೆಯುತ್ತಿದೆ. ಈ ಮದುವೆ ಹಾಳಾಗಬೇಕು, ಕರ್ಣ, ನಿತ್ಯಾ ಮದುವೆ ಆಗಬೇಕು ಅಂತ ರಮೇಶ್‌ ಪ್ಲ್ಯಾನ್‌ ಮಾಡಿದ್ದಾರೆ. ಹೀಗಾಗಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಚಿನ್-ಸುಮಾ ಮದುವೆ ಆಗಲು ಪುಟ್ಟಕ್ಕ ಒಪ್ಪುತ್ತಿಲ್ಲ. ಈ ಕುರಿತು ಎಪಿಸೋಡ್‌ ಪ್ರಸಾರ ಆಗ್ತಿದೆ. ಉಮಾಶ್ರೀ, ಧನುಷ್‌, ರಮೇಶ್‌ ಪಂಡಿತ್‌ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ನಿನ್ನ ಜೊತೆ ನನ್ನ ಕಥೆ ಧಾರಾವಾಹಿ

ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ಭೂಮಿ ಹಾಗೂ ಅಜಿತ್‌ ಮದುವೆ ಸುಳ್ಳು ಎಂದು ಮನೆಯಲ್ಲಿ ಕೆಲವರು ಸಾಬೀತುಪಡಿಸಲು ಟ್ರೈ ಮಾಡುತ್ತಿದ್ದಾರೆ. ಅಶ್ವಿನಿ ಮುಖವಾಡ ಕಳಚಲು ಅಜಿತ್‌ ರೆಡಿಯಾಗಿದ್ದಾನೆ. ಹಾಗಾದರೆ ಮುಂದೆ ಏನಾಗುವುದು?

Read more Photos on
click me!

Recommended Stories