"ಈಗಲೇ ಮದುವೆ ಬೇಡ" ಅಂದ ವಿಶ್ವ; ಡಿಟೆಕ್ಟಿವ್ ಆದ್ಲು ತನು, ವೀಕ್ಷಕರಿಂದಲೂ ಸಿಕ್ತು ಗ್ರೀನ್ ಸಿಗ್ನಲ್

Published : Nov 06, 2025, 02:43 PM IST

Lakshmi Nivasa serial: ಜಾಹ್ನವಿಯನ್ನ ಪತ್ತೆ ಮಾಡುವ ಉದ್ದೇಶದಿಂದ ಪತ್ತೇದಾರಿಗಳಾಗಿದ್ದಾರೆ ಜಯಂತ್-ತನು. ಆದರೆ ತನು ಹುಡುಕುತ್ತಿರುವ ರೇಂಜ್‌ ನೋಡಿದರೆ, ಹೇಗಿದ್ದರೂ ಚಂದನ ಹೆಸರಿನಲ್ಲಿ ಜಾಹ್ನವಿ ವಿಶ್ವನ ಮನೆಯಲ್ಲಿ ಇರುವುದರಿಂದ ಸದ್ಯದರಲ್ಲೇ ಎಲ್ಲ ವಿಷಯ ಬಯಲಾದರೂ ಆಶ್ಚರ್ಯವಿಲ್ಲ.

PREV
15
ಅವರನ್ನೂ ವಿಚಾರಿಸಿದ್ದಾಳೆ ತನು

ಈ ಮಧ್ಯೆ ವಿಶ್ವನ ಹುಟ್ಟುಹಬ್ಬ ಆಚರಿಸಲು ಆತನ ಸ್ನೇಹಿತರು ಮನೆಗೆ ಬಂದಿದ್ದಾರೆ. ಸ್ನೇಹಿತರ ಬಳಿ ಕೇಳಿದರೆ ಸತ್ಯ ಗೊತ್ತಾಗಬಹುದು ಎಂದು ಅವರನ್ನೂ ವಿಚಾರಿಸಿದ್ದಾಳೆ ತನು. ಆದರೆ ಮೊದಲೇ ವಿಶ್ವನಿಗೆ ಈ ಬಗ್ಗೆ ಅನುಮಾನವಿದ್ದರಿಂದ ಸ್ನೇಹಿತರಿಗೆ "ಜಾಹ್ನವಿ ಫೋಟೋವನ್ನ ನೀವು ತನುಗೆ ತೋರಿಸಬೇಡಿ" ಎಂದು ಕೇಳಿಕೊಂಡಿದ್ದಾನೆ.

25
ಶಪಥ ಮಾಡಿದ ತನು

ವಿಶ್ವನ ಸ್ನೇಹಿತರ ಪೈಕಿ ಒಬ್ಬ ತನುಗೆ ಯಾರದ್ದೋ ಫೋಟೋ ತೋರಿಸಿ ಅದನ್ನ ಜಾಹ್ನವಿ ಎಂದೇ ನಂಬಿಸಿದ್ದಾನೆ. ಅಂದು ಕಾಲೇಜಿನಲ್ಲಿ ಆ ವ್ಯಕ್ತಿ ತೋರಿಸಿದ ಫೋಟೋಗೂ, ಇದಕ್ಕೂ ಹೋಲಿಕೆ ಇದ್ದುದರಿಂದ ತನು ಸದ್ಯಕ್ಕೆ ನಂಬಿದ್ದಾಳೆ. ಆದರೆ ಅವಳ ಅನುಮಾನ ಕಡಿಮೆಯಾಗಿಲ್ಲ. ಯಾವಾಗ ವಿಶ್ವ ಮದುವೆ ದಿನಾಂಕ ಮುಂದೂಡಿದನೋ ಅಂದೇ ಆಕೆ ಜಾಹ್ನವಿ ಹೇಗಿದ್ದಾಳೆ, ಎಲ್ಲಿದ್ದಾಳೆ ಎಂದು ಪತ್ತೆ ಹಚ್ಚುವೆ ಎಂದು ಶಪಥ ಮಾಡಿದ್ದಾಳೆ.

35
ಪತ್ತೆ ಹಚ್ಚಿದರೂ ಆಶ್ಚರ್ಯವಿಲ್ಲ

ಆದರೆ ಈಗಾಗಲೇ ವಿಶ್ವ-ಜಾಹ್ನವಿ ಬೆನ್ನಿಗೆ ಬೇತಾಳದಂತೆ ಅಂಟಿಕೊಂಡಿದ್ದಾನೆ ಜಯಂತ್. ಜಯಂತ್ ಕೂಡ ವಿಶ್ವನ ಸ್ನೇಹಿತನನ್ನು ಬುಟ್ಟಿ ಹಾಕಿಕೊಂಡು ಜಾಹ್ನವಿ ಹುಡುಕುವ ತಯಾರಿಯಲ್ಲಿದ್ದಾನೆ. ಇದೇ ಸಲುವಾಗಿಯೇ ವಿಶ್ವನ ಮನೆಗೆ ಅವನ ಸ್ನೇಹಿತ ಬಂದಿದ್ದಾನೆ. ಆದರೆ ಈ ವಿಚಾರ ಸದ್ಯಕ್ಕೆ ವಿಶ್ವನಿಗೆ ಗೊತ್ತಿಲ್ಲದಿದ್ದರೂ ಆತನ ನಡವಳಿಕೆಯೇ ಮೇಲೆ ವಿಶ್ವ ಪತ್ತೆ ಹಚ್ಚಿದರೂ ಆಶ್ಚರ್ಯವಿಲ್ಲ.

45
ತನು ಪರವಾಗಿದ್ದಾರೆ ವೀಕ್ಷಕರು

ಒಟ್ಟಾರೆ ಜಾಹ್ನವಿಯನ್ನ ಪತ್ತೆ ಮಾಡುವ ಉದ್ದೇಶದಿಂದ ಪತ್ತೇದಾರಿಗಳಾಗಿದ್ದಾರೆ ಜಯಂತ್-ತನು. ಆದರೆ ತನು ಹುಡುಕುತ್ತಿರುವ ರೇಂಜ್‌ ನೋಡಿದರೆ, ಹೇಗಿದ್ದರೂ ಚಂದನ ಹೆಸರಿನಲ್ಲಿ ಜಾಹ್ನವಿ ವಿಶ್ವನ ಮನೆಯಲ್ಲಿ ಇರುವುದರಿಂದ ಸದ್ಯದರಲ್ಲೇ ಎಲ್ಲ ವಿಷಯ ಬಯಲಾದರೂ ಆಶ್ಚರ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ವೀಕ್ಷಕರು ಸಹ ತನು ಪರವಾಗಿದ್ದಾರೆ.

55
ಕುತೂಹಲ ಕೆರಳಿಸಿದ ಧಾರಾವಾಹಿ

ತನು-ವಿಶ್ವ ಮದುವೆಯಾಗಬೇಕು. ಹಾಗೆಯೇ ಜಾಹ್ನವಿ ಆ ಮನೆಯಲ್ಲಿರುವುದು ನಮಗೆ ಸುತಾರಾಂ ಇಷ್ಟವಿಲ್ಲವೆಂದೇ ವೀಕ್ಷಕರು ಒತ್ತಿ ಹೇಳಿದ್ದಾರೆ. ಹಾಗಾಗಿ ಈ ಕಣ್ಣಾಮುಚ್ಚಲೆಯಾಟ ಮುಗಿದು ಜಾಹ್ನವಿಯೇ ತನು-ವಿಶ್ವನನ್ನ ಒಂದು ಮಾಡಿ ಆ ಮನೆಯಿಂದ ಹೊರನಡೆದರೂ ನಡೆಯಬಹುದು. ಇದೆಲ್ಲಾ ವೀಕ್ಷಕರ ಗೆಸ್ ಆದರೂ ತನು ಕೂಡ ಜಾಹ್ನವಿ ಪತ್ತೆಗಿಳಿದಿರುವುದು ಒಂಥರಾ ಕುತೂಹಲ ಕೆರಳಿಸಿದೆ.

Read more Photos on
click me!

Recommended Stories