Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ವೀಕ್ಷಕರು ತುದಿಗಾಲಲ್ಲಿ ಕಾಯುತ್ತಿದ್ದ ಆ ಮಧುರ ಗಳಿಗೆ ಬಂದೇ ಬಿಟ್ಟಿತು. ಒಂಟಿಯಾಗಿದ್ದ ಜಂಟಿ ಜೀವಗಳು ಇದೀಗ ಆನಿವರ್ಸರಿಯ ದಿನದಂದೇ ಮತ್ತೆ ಜೊತೆಯಾಗಿ, ಅಮೃತಧಾರೆ ಹರಿಸುವ ಕಾಲ ಬಂದೇ ಬಿಟ್ಟಿದೆ.
ಅಮೃತಧಾರೆ ಧಾರಾವಾಹಿಯಲ್ಲಿ ಇದೀಗ ಸಖತ್ ಇಂಟ್ರೆಸ್ಟಿಂಗ್ ಎಪಿಸೋಡ್ ನಡೆಯುತ್ತಿದೆ. ವೀಕ್ಷಕರು ಇಲ್ಲಿವರೆಗೂ ತುದಿಕಾಲಲ್ಲಿ ನಿಂತು ಕಾಯುತ್ತಿದ್ದ ಒಲವ ಅಮೃತಧಾರೆ ಹರಿಯುವ ಸಮಯ ಬಂದೇ ಬಿಟ್ಟಿದೇ. ಮಲ್ಲಿ ಮತ್ತು ಕಾವೇರಿ ಸೇರಿ ಮಾಡಿರುವ ಪ್ಲಾನ್ ವರ್ಕೌಟ್ ಆಗಿದೆ. ಇನ್ನೇನಿದ್ದರೂ ಗೌತಮ್ ಮತ್ತು ಭೂಮಿಕಾ ಜೊತೆ ಸೇರುವುದೊಂದೇ ಬಾಕಿ.
27
ಗೌತಮ್- ಭೂಮಿಕಾ ಆನಿವರ್ಸರಿ
ಗೌತಮ್ ಮತ್ತು ಭೂಮಿಕಾ ಆನಿವರ್ಸರಿ ಸಂಭ್ರಮದಲ್ಲಿದ್ದಾರೆ. ಒಬ್ಬರ ಮೇಲೆ ಇನ್ನೊಬ್ಬರಿಗೆ ಬೆಟ್ಟದಷ್ಟೂ ಪ್ರೀತಿ ಇದ್ದರೂ ಕೂಡ, ಇಬ್ಬರೂ ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ಆನಿವರ್ಸರಿ ವಿಶೇಷವಾಗಿ ಗೌತಮ್ ಕೊಡಿಸಿದ ಮಲ್ಲಿಗೆ ಹೂವು, ಮಲ್ಲಿ ಮುಖಾಂತರ ಭೂಮಿಕಾ ಮನೆ ಸೇರಿದೆ.
37
ಕೊನೆಗೂ ಮಲ್ಲಿಗೆ ಮುಡಿದ ಭೂಮಿಕಾ
ಗೌತಮ್ ನಿಂದ ಬೇರೆ ಆದ ಮೇಲೆ ಭೂಮಿಕಾ ಯಾವತ್ತೂ ತಾನು ಇನ್ನು ಹೂವು ಮುಡಿಯೋದಿಲ್ಲ ಎನ್ನುತ್ತಾಳೆ. ಅದೇ ಕಾಟನ್ ಸೀರೆ, ಹೈಪೋನಿಟೇಲ್ ಹಾಕಿ ಒಂದೇ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾಳೆ. ಆದರೆ ಹೂವು ಕೊಟ್ಟದ್ದು ಗೌತಮ್ ಹಾಗೂ ಆನಿವರ್ಸರಿಯ ಸಲುವಾಗಿ ಹೂವು ಮುಡಿದು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವ ಭೂಮಿಕಾಳನ್ನು ನೋಡಿ ಮಲ್ಲಿ ಹಾಗೂ ಆಕಾಶ್ ಗೆ ಶಾಕ್ ಆಗುತ್ತೆ.
ಕಾವೇರಿ ಮತ್ತು ಮಲ್ಲಿ ಮಾಡಿದ ಪ್ಲ್ಯಾನ್ ಪ್ರಕಾರ ಭೂಮಿಕಾ ಮತ್ತು ಗೌತಮ್ ಇದೀಗ ಒಂದೇ ಹೊಟೇಲ್ ನಲ್ಲಿ, ಒಬ್ಬರನ್ನೊಬ್ಬರು ಭೇಟಿ ಮಾಡುವ ಹಾಗೂ ಮಾತನಾಡುವ ಸಂದರ್ಭ ಬಂದಿದೆ. ಇಬ್ಬರು ತಮ್ಮ ಮನದಾಳಾದ ಮಾತುಗಳನ್ನು ಆಡುವ ಸಮಯ ಕೂಡ ಬಂದಾಗಿದೆ.
57
ಹಳೆಯ ನೆನಪುಗಳನ್ನು ಬಿಚ್ಚಿಟ್ಟ ಗೌತಮ್
ಹೊಟೇಲ್ ನಲ್ಲಿ ಭೂಮಿಕಾ ಬಳಿ ಗೌತಮ್. ಭೂಮಿಕಾ ನನಗೆ ಹಳೆಯ ನೆನಪುಗಳು ಬರುತ್ತಿವೆ. ನಮ್ಮಿಬ್ಬರ ಜೀವನ ಶುರುವಾಗಿದ್ದೇ ಇದೇ ಒಂದು ಹೊಟೇಲ್ ನಲ್ಲಿ ಅಲ್ವಾ? ಒಂದು ಹಿಡಿ ಪ್ರೀತಿಗೆ ನಾನು ಹಂಬಲಿಸ್ತಾ ಇದ್ದೆ, ಆದರೆ ಈಗ ನನಗೆ ಸಿಕ್ಕಿರುವ ಪ್ರೀತಿಯನ್ನು ನಾನು ಕಳೆದುಕೊಂಡು ನಿಂತಿದ್ದೇನೆ ಎನ್ನುತ್ತಾ ತನ್ನ ದುಃಖವನ್ನು ತೋಡಿಕೊಳ್ಳುತ್ತಾನೆ ಗೌತಮ್.
67
ಕೊನೆಗೂ ಮನಸ್ಸು ಬಿಚ್ಚಿ ಮಾತನಾಡಿದ ಭೂಮಿಕಾ
ಗೌತಮ್ ಹೇಳುವುದನ್ನೆಲ್ಲಾ ಕೇಳಿ ಭೂಮಿಕಾ ಕೂಡ ಕಣ್ಣೀರಿಡುತ್ತಾಳೆ. ಹ್ಯಾಪಿ ಅನಿವರ್ಸರಿ ಭೂಮಿಕಾ ಎಂದು ಗೌತಮ್ ಹೇಳಿದ್ರೆ, ಅದಕ್ಕೆ ಉತ್ತರವಾಗಿ ಭೂಮಿಕಾ ಕೂಡ ನಿಮಗೂ ಹ್ಯಾಪಿ ಆನಿವರ್ಸರಿ ಗೌತಮ್ ಅವರೇ ಎನ್ನುತ್ತಾ ಅಳುತ್ತಾಳೆ. ಆದರೆ ಅವರಿಬ್ಬರು ಈಗಲಾದರೂ ಒಂದಾಗುತ್ತಾರ ಅನ್ನೋದು ಮಾತ್ರ ಎಪಿಸೋಡ್ ನೋಡಿದ ಮೇಲಷ್ಟೇ ತಿಳಿಯಬೇಕು.
77
ವೀಕ್ಷಕರು ಫುಲ್ ಖುಷ್
ಭೂಮಿಕಾ ಮತ್ತು ಗೌತಮ್ ಅವರ ಮಧುರ ಸಮ್ಮಿಲನ ನೋಡಿ ವೀಕ್ಷಕರಂತೂ ತುಂಬಾನೆ ಖುಷೀ ವ್ಯಕ್ತಪಡಿಸಿದ್ದಾರೆ. ಅಂತೂ ಇಂತೂ ನಾವು ಕಾಯುತ್ತಿರುವ ಗಳಿಗೆ ಬಂದಿದೆ. ಭೂಮಿಕಾ ಪ್ರೀತಿ ಇಟ್ಟುಕೊಂಡು ಒಬ್ಬಂಟಿಯಾಗಿ ಬದುಕೋದು ಸಾಕು ಇಬ್ಬರು ಇನ್ನಾದರೂ ಜೊತೆಯಾಗಿ ಬಾಳಿ ಎಂದು ಹಾರೈಸಿದ್ದಾರೆ.