ಇದೆಂಥಾ ಅನುಮಾನ! ತನಿಷಾ ಕುಪ್ಪಂಡ ಫಸ್ಟ್ ಲವ್ ಸ್ಟೋರಿ ಕೇಳಿದ್ರೆ 'ಲಕ್ಷ್ಮೀ ನಿವಾಸ'ದ ಜಯಂತ್ ನೆನಪಾಗುತ್ತೆ!

First Published | Apr 18, 2024, 12:31 PM IST

ತನಿಷಾ ಕುಪ್ಪಂಡ ಖಾಸಗಿ ರೇಡಿಯೋ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮೊದಲ ಪ್ರೀತಿ, ಬ್ರೇಕಪ್ ವಿಚಾರವಾಗಿ ವಿವರವಾಗಿ ಮಾತಾಡಿದ್ದಾರೆ. 

ಕನ್ನಡ ಕಿರುತೆರೆ ನಟಿ, ಉದ್ಯಮಿ ತನಿಷಾ ಕುಪ್ಪಂಡ ಬಿಗ್ ಬಾಸ್ ಸೀಸನ್ 10ಕ್ಕೆ ಹೋಗಿ ಬಂದ ನಂತರ ಹೆಚ್ಚು ಜನರ ಪ್ರೀತಿ ಗಳಿಸಿದ್ದಾರೆ. ಅವರ ನೇರ ನಡೆನುಡಿಗಳು ಬೆಂಕಿ ಎಂಬ ಬಿರುದನ್ನೂ ತಂದಿವೆ, ಜನರಿಗೆ ಇಷ್ಟವೂ ಆಗಿದೆ.

ಇದೀಗ ತನಿಷಾ ತಮ್ಮದೇ ಆದ ಹೋಟೆಲ್ ಅಪ್ಪುಸ್ ಕಿಚನ್, ಜುವೆಲ್ಲರಿ ಉದ್ಯಮ (ಕುಪ್ಪಂಡಾಸ್) ಎಲ್ಲವನ್ನೂ ಆರಂಭಿಸಿ ಉದ್ಯಮಿಯಾಗಿ ಮುಂದುವರಿಯುತ್ತಿದ್ದಾರೆ. 

Tap to resize

ನಟಿಯು ಖಾಸಗಿ ರೇಡಿಯೋ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮೊದಲ ಪ್ರೀತಿ, ಬ್ರೇಕಪ್ ವಿಚಾರವಾಗಿ ವಿವರವಾಗಿ ಮಾತಾಡಿದ್ದಾರೆ. ಅವರ ಮೊದಲ ಪ್ರೇಮಿಯ ಬಗ್ಗೆ ಕೇಳ್ತಿದ್ರೆ 'ಲಕ್ಷ್ಮೀ ನಿವಾಸ'ದ ಜಯಂತ್ ಪಾತ್ರ ನೆನಪಾಗುತ್ತೆ!

ಹೌದು, ತನಿಷಾ ಒಂದು ಕಾಲ್ದಲ್ಲಿ ಸ್ವಲ್ಪ ಜನಪ್ರಿಯ ಕುಟುಂಬದ ವ್ಯಕ್ತಿಯನ್ನು ಪ್ರೀತಿಸುತ್ತಿದ್ರು. ಅವ್ರೂ ಇವ್ರನ್ನ ಪ್ರೀತಿಸ್ತಿದ್ರು. ಸ್ನೇಹ ಪ್ರೀತಿಯಾದ ಮೇಲೆ 6 ವರ್ಷಗಳ ಕಾಲ ಪ್ರೇಮ ಮುಂದುವರಿದಿದೆ. 

ತಾನು ಯಾರಿಗೇ ಒಮ್ಮೆ ಕಮಿಟ್ ಆದ್ರೆ ಬಿಡೋ ಮಾತೇ ಇಲ್ಲ ಅನ್ನೋ ತನಿಷಾ, ಆತನನ್ನು ತನ್ನ ಜೀವನಸಂಗಾತಿ ಎಂದು ಒಪ್ಪಿಕೊಂಡಿದ್ದರಿಂದ, ಯಾವಾಗ ಆತ 'ನಿನಗೆ ನಾನ್ ಮುಖ್ಯನಾ ಧಾರಾವಾಹಿ ಮುಖ್ಯನಾ' ಕೇಳ್ದಾಗ - ನೀನೇ ಮುಖ್ಯ ಅಂತ ಧಾರಾವಾಹಿನೇ ಬಿಟ್ಟಿದ್ರಂತೆ.

ಆತನ ಸಮಸ್ಯೆ ಏನಂದ್ರೆ ಅನುಮಾನ. ತನಿಷಾ ಸೆಟ್‌ನಲ್ಲಿ ಯಾರೊಡನೆ ಮಾತಾಡಿದ್ರೂ ಅನುಮಾನ. ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಜೆಕೆಯ ಬಳಿ ಮಾತಾಡಿದ್ರೆ ಅದೂ ಸಮಸ್ಯೆ, ಆನ್‌ಸ್ಕ್ರೀನ್ ಯಾರೊಬ್ಬ ನಟನ ಜೊತೆ ಕೊಂಚ ಹತ್ತಿರ ಕಂಡರೂ ಸಮಸ್ಯೆ..

ಆದರೆ, ಅದೇನೇ ಇದ್ದರೂ ತನಿಷಾ ಆತನಿಗೆ ತಮ್ಮ ಜೀವನದ ಸಂಪೂರ್ಣ ವರದಿ ಒಪ್ಪಿಸುತ್ತಿದ್ದರು ಮತ್ತು, ಪ್ರತಿ ನಿರ್ಧಾರವನ್ನೂ ಆತನನ್ನು ಕೇಳಿಯೇ ತೆಗೆದುಕೊಳ್ಳುತ್ತಿದ್ದರಂತೆ. 

ಹೀಗೆ ಆತನ ನಿರ್ಧಾರ ಕೇಳುವಾಗ ಒಂದಾದ ಮೇಲೊಂದರಂತೆ ಧಾರಾವಾಹಿಯಲ್ಲಿ ನಟಿಸಲು ಅವಕಾಶಗಳು ಬಂದರೂ, ಆತ ಎಲ್ಲದಕ್ಕೂ ಬೇಡ ಎನ್ನುತ್ತಲೇ ಹೋದನಂತೆ. ಇದರಿಂದ ಹಲವಾರು ಧಾರಾವಾಹಿಯಲ್ಲಿ ಅವಕಾಶ ಕಳೆದುಕೊಂಡಿದ್ದಾರೆ ನಟಿ.

ಕಡೆಗೆ ತನಿಷಾಗೆ ಆತನೇ ಒಂದು ಸಂಸ್ಥೆಯಲ್ಲಿ ಜೂನಿಯರ್ ಎಚ್ಆರ್ ಕೆಲಸಕ್ಕೆ ಸೇರಿಸಿದ. ಅಲ್ಲಿಯೂ ಕಲೀಗ್ಸ್ ಜೊತೆ ಮಾತಾಡುವಾಗ ತನಿಷಾ ಫೋನ್ ಆನ್ ಇಡಬೇಕಿತ್ತು. ಆಕೆ ಯಾರ ಜೊತೆ ಏನು ಮಾತಾಡುತ್ತಾಳೆ ಕೇಳಿಸಿಕೊಳ್ಳುತ್ತಿದ್ದ ಎಂದು ನಟಿ ತಿಳಿಸಿದ್ದಾರೆ.

ಇಷ್ಟಾದರೂ, ನಟಿಗೆ ನಟನೆಯ ಸೆಳೆತ ಜೋರಾಗಿತ್ತು. ಮತ್ತೆ ಆತನಿಗೆ ಒಪ್ಪಿಸಿ ಸೈಡ್ ರೋಲ್ ಮಾಡ್ತೀನಿ, ರೊಮ್ಯಾನ್ಸ್ ಸೀನ್ಸ್ ಮಾಡಲ್ಲ ಎಂದೆಲ್ಲ ಹೇಳಿ ಧಾರಾವಾಹಿಗೆ ಬಂದರೆ, ಪತಿ ಪಾತ್ರ ಮಾಡುವವನಿಗೆ ಅಣ್ಣಎಂದು ಕರೀಬೇಕು ಎಂಬ ಷರತ್ತು ಹಾಕುತ್ತಿದ್ದ ಬಾಯ್‌ಫ್ರೆಂಡ್.

ಕಡೆಕಡೆಗೆ ಧಾರಾವಾಹಿ ಸೆಟ್‌ಗೆ ನಟಿಗೆ ಗೊತ್ತಾಗದಂತೆ ಬಂದು ಕದ್ದುಮುಚ್ಚಿ ಆತ ಗಮನಿಸುತ್ತಿರುವುದು ಗೊತ್ತಾಗುತ್ತಿದ್ದಂತೆ ಸಂಬಂಧದಲ್ಲಿ ಕಿರಿಕಿರಿಯಾಗಲು ಶುರುವಾಯ್ತು ಎಂದಿದ್ದಾರೆ ತನಿಷಾ. 

Latest Videos

click me!