ನನಗೆ ಯಾರೂ ಇಲ್ಲ; ನೆಗೆಟಿವ್ ಕಾಮೆಂಟ್‌ ನೋಡಿ ಸೋನು ಗೌಡ ತಾಯಿ ಆರೋಗ್ಯದಲ್ಲಿ ಏರುಪೇರು

Published : Apr 18, 2024, 10:58 AM IST

ನೆಗೆಟಿವ್ ಕಾಮೆಂಟ್‌ಗಳಿಂದ ಫ್ಯಾಮಿಲಿ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆ ಮಾತನಾಡಿದ ಸೋನು. ಎಲ್ಲಿ ನೋಡಿದರೂ ಈಗ ಪಾಸಿಟಿವ್....

PREV
110
ನನಗೆ ಯಾರೂ ಇಲ್ಲ; ನೆಗೆಟಿವ್ ಕಾಮೆಂಟ್‌ ನೋಡಿ ಸೋನು ಗೌಡ ತಾಯಿ ಆರೋಗ್ಯದಲ್ಲಿ ಏರುಪೇರು

ಬಿಗ್ ಬಾಸ್ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಜೈಲಿಗೆ ಹೋಗಿ ಬಂದ ಮೇಲೆ ತುಂಬಾನೇ ಪಾಸಿಟಿವ್ ರೆಸ್ಪಾನ್ಸ್‌ ಪಡೆಯುತ್ತಿದ್ದಾರೆ.

210

ಈ ನಡುವೆ ಸೋನು ಹಳೆ ವಿಡಿಯೋಗಳು ವೈರಲ್ ಆಗುತ್ತಿದೆ. ಸೋನು ಈ ಹಿಂದೆ ನೆಗೆಟಿವ್ ಕಾಮೆಂಟ್‌ಗಳನ್ನು ನೋಡಿ ತಾಯಿ ಬೇಸರ ಮಾಡಿಕೊಂಡಿದ್ದಾರೆ ಎಂದು ಮಾತನಾಡಿದ್ದರು. ಈಗ ಮತ್ತೊಮ್ಮೆ ಆ ಮಾತುಗಳು ವೈರಲ್ ಆಗುತ್ತಿದೆ. 

310

ನನ್ನ ಯುಟ್ಯೂಬ್ ಇನ್‌ಸ್ಟಾಗ್ರಾಂನಲ್ಲಿ ತೀರಾ ಕೆಟ್ಟ ಕಾಮೆಂಟ್‌ಗಳು ಬರುತ್ತಿದೆ. ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿದೆ ನಾನು ಯಾರೊಟ್ಟಿಗೂ ಶೇರ್ ಮಾಡಿಕೊಳ್ಳುವುದಿಲ್ಲ. 

410

ಒಂದು ಲಿಮಿಟ್ ವರೆಗೂ ಓಕೆ ಅದನ್ನೂ ಮೀರಿ ಮಾಡಿದರೆ ಕಷ್ಟವಾಗುತ್ತದೆ. ಒಂದು ವಾರದ ಹಿಂದೆ ನನ್ನ ತಾಯಿ ಯುಟ್ಯೂಬ್ ಚಾನೆಲ್‌ ಹೆಚ್ಚಿಗೆ ನೋಡುತ್ತಾರೆ ಆ ನನ್ನ ಬಗ್ಗೆ ಒಂದೆರಡು ಟ್ರೋಲ್ ವಿಡಿಯೋ ನೋಡುತ್ತಿದ್ದರು ಕೆಟ್ಟ ಕಾಮೆಂಟ್‌ ಮತ್ತು ಕೆಟ್ಟ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. 

510

ಮಾತಿಗೆ ಮುಂಚೆ ಬೀಪ್‌ ಪದಗಳನ್ನು ಬಳಸಿದ್ದಾರೆ. ಆ ವಿಡಿಯೋ ನಾನು ಕೇಳಿಸಿಕೊಂಡರೆ ಬೇಸರ ಆಗುತ್ತದೆ ಅಂತ ಸೌಂಡ್ ಕಡಿಮೆ ಮಾಡಿಕೊಂಡು ನೋಡುತ್ತಾ ಅಳುತ್ತಿದ್ದರು. 

610

ನನಗೆ ಕೇಳಿಸುತ್ತಿದ್ದರೂ ಸುಮ್ಮನಿದೆ. ನನ್ನಿಂದ ನನ್ನ ಕುಟುಂಬ ನೋವು ಪಡುತ್ತಿದೆ ದಯವಿಟ್ಟು ಹೀಗೆ ಮಾಡಬೇಡಿ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ ನಾನು 20 ವರ್ಷದ ಹುಡುಗಿ ಇದ್ದಾಗ ಮಾಡಿದ ತಪ್ಪಿಗೆ ಈಗಲೂ ಶಿಕ್ಷೆಯಾಗಿ ಕೊಡುತ್ತಿದ್ದೀರಾ? 4 ವರ್ಷ ಕಳೆದರೂ ನಾನು ಬೇಸರದಲ್ಲಿರುವೆ' ಎಂದು ಸೋನು ಗೌಡ ವಿಡಿಯೋದಲ್ಲಿ ಮಾತನಾಡಿದ್ದಾರೆ.

710

ನನ್ನ ಬಗ್ಗೆ ಅತಿ ಹೆಚ್ಚು ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ ಮಾಡುತ್ತಿರುವುದು ಹೆಣ್ಣು ಮಕ್ಕಳು. ಯಾರಿಗಾದರೂ ತೊಂದರೆ ಕೊಟ್ಟರೆ ಕಳ್ಳತನ ಮಾಡಿದರೆ ಅಥವಾ ಹೊಡೆದರೆ ತಪ್ಪು ಈ ರೀತಿ ಮಾತನಾಡಿ 

810

ಆದರೆ ನನ್ನ ವೈಯಕ್ತಿ ಜೀವನದಲ್ಲಿ ಆದ ತಪ್ಪನ್ನು ಯಾಕೆ ನೀವು ಪಬ್ಲಿಕ್ ಮಾಡುತ್ತಿರುವು? ಟ್ರೋಲ್ ಮಾಡಬೇಡಿ ಎನ್ನುತ್ತಿಲ್ಲ ಆದರೆ ಫ್ಯಾಮಿಲಿವರೆಗೂ ಬೇಡ. 

910

ನನ್ನ ಟ್ರೋಲ್ ವಿಡಿಯೋ ಅವಮಾನಗಳನ್ನು ನೋಡಿ ನನ್ನ ತಾಯಿ ಆರೋಗ್ಯ ಕೆಟ್ಟಿದೆ. ಈಗಲೂ ಟ್ರೋಲ್‌ಗಳನ್ನು ನೋಡಿ ನನ್ನ ಕುಟುಂಬಸ್ಥರು ನನ್ನನ್ನು ಮಾತನಾಡಿಸುವುದಿಲ್ಲ 

1010

ಕೆಲವರು ಮಾತ್ರ ನಮ್ಮ ಜೊತೆ ಚೆನ್ನಾಗಿರುವುದು. ನಾನು ತಪ್ಪು ಮಾಡಿರುವುದಕ್ಕೆ ಟ್ರೋಲ್ ಮಾಡಿ ಏನ್ ಏನೋ ಮಾಡಿ ಎಡಿಟ್ ಮಾಡಬೇಡಿ' ಎಂದು ಸೋನು ಗೌಡ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories