ಸೀರಿಯಲ್ ವೀಕ್ಷಕರಿಗೆ ಕ್ರೇಜ್ ಹುಟ್ಟಿಸಿದ ಸೈಕೋ ಪ್ರೇಮಿಗಳಿವರು, ಸಿಟ್ಟು ಬಂದ್ರೂ ಇಷ್ಟವಾಗೋದ್ಯಾಕೆ?

First Published | Apr 16, 2024, 7:01 PM IST

ಕಿರುತೆರೆಯ ಸೈಕೋ ಪ್ರೇಮಿಗಳಾದ ಜಯಂತ್ ಮತ್ತು ಕೀರ್ತಿ ಸದ್ಯ ವೀಕ್ಷಕರ ಅಚ್ಚುಮೆಚ್ಚಿನ ನಟರಾಗಿದ್ದಾರೆ. ಇವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಸೀರಿಯಲ್ಸ್ ಮೂಲಕ ಮೆಂಟಲ್ ಹೆಲ್ತ್ ಬಗ್ಗೊ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗುತ್ತಿವೆಯಾ ಸೀರಿಯಲ್ಸ್?
 

ಒಬ್ಬರು ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸೀರಿಯಲ್ ನ ಜಯಂತ್, ಮತ್ತೊಬ್ಬರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಖ್ಯಾತಿಯ ಕೀರ್ತಿ. ಇಬ್ಬರ ಸೀರಿಯಲ್ ಬೇರೆ ಬೇರೆ, ಪಾತ್ರಗಳೂ ಬೇರೆಯದ್ದೆ, ಆದರೆ ಇಬ್ಬರೂ ಸೈಕೋ ಪ್ರೇಮಿಗಳು. 
 

ಲಕ್ಷ್ಮೀ ನಿವಾಸದ ಜಯಂತ್ ಪಾತ್ರದಲ್ಲಿ ನಟಿಸ್ತಿರೋದು ದೀಪಕ್ ಸುಬ್ರಹ್ಮಣ್ಯ (Deepak Subramanya). ಇವರು ಎಲ್ಲರ ಮುಂದೆ ತುಂಬಾನೆ ನಿಯತ್ತಿನ, ಪ್ರಾಮಾಣಿಕ, ತುಂಬಾ ವಿನಯತೆ ಇರುವ ಮನುಷ್ಯ. ಆದರೆ ನಿಜವಾಗಿಯೂ ಆತ ಒಬ್ಬ ಸೈಕೋ. ತಾನು ಇಷ್ಟಪಟ್ಟವಳನ್ನು ತಾನನ್ನಲ್ಲದೇ ಬೇರೊಬ್ಬರು ಮುಟ್ಟಾಬಾರದು ಎನ್ನುವ ಪಾಗಲ್ ಪ್ರೇಮಿ. 
 

Tap to resize

ಮತ್ತೊಂದೆಡೆ ಲಕ್ಷ್ಮೀ ಬಾರಮ್ಮ ಸೀರಿಯಲ್ ನ ಕೀರ್ತಿ ಪಾತ್ರದಲ್ಲಿ ನಟಿಸ್ತಿರೋ ತನ್ವಿ ರಾವ್ (Tanvi Rao). ತಾನಾಗಿಯೇ ಹಿಂದೆಬಿದ್ದು, ಪ್ರೀತಿಸಿದ ಹುಡುಗನನ್ನು ಬೇರೆಯವರೊಂದಿಗೆ ಮದುವೆಯಾಗಲು ಬಿಟ್ಟು, ಈಗ ಹೇಗಾದರೂ ಆತನನ್ನು ತಾನು ಪಡೆಯಲೇಬೇಕೆಂದು ಪ್ರತಿ ಹೆಜ್ಜೆಯಲ್ಲೂ ಪ್ಲ್ಯಾನ್ ಮಾಡೋ ಮತ್ತೊಬ್ಬ ಪಾಗಲ್ ಪ್ರೇಮಿ ಈಕೆ. 

ಜಯಂತ್ ನ ಗುಣ ಒಂದೊಂದಾಗಿ ಈಗ ಜನರೆದುರು ಅನಾವರಣವಾಗುತ್ತಿದೆ. ಜಾಹ್ನವಿಯ ಮೈಮೇಲೆ ಬಂದ ಜಿರಳೆಯನ್ನೆ, ನಮ್ಮಿಬ್ಬರ ಮಧ್ಯೆ ಯಾರೂ ಬರಬಾರದು ಎಂದು ಅದನ್ನು ಹಾಲಿಗೆ ಹಾಕಿ ಕುಡಿದ ಈತ, ಜಾಹ್ನವಿಯ ಮೈಮುಟ್ಟಿದ ಡಾಕ್ಟರ್ ನ ಕೈಕಾಲು ಮುರಿದು ಬಂದಿದ್ದಾನೆ. 
 

ಇನ್ನು ಕೀರ್ತಿ ವೈಷ್ಣವ್ ತಾಯಿ ಕಾವೇರಿ ಜೊತೆ ಸೇರಿ ತನ್ನಿಂದ ಏನೆಲ್ಲಾ ಸಾಧ್ಯವೇ ಅದನ್ನೆಲ್ಲಾ ಮಾಡಿ, ಲಕ್ಷ್ಮಿ ಮತ್ತು ವೈಷ್ಣವ್ ನನ್ನು ಬೇರೆ ಮಾಡಲು ಮುಂದಾಗುತ್ತಾಳೆ. ಸದ್ಯ ಲಕ್ಷ್ಮೀ ವೈಷ್ಣವ್ ಬೆಸ್ಟ್ ಜೋಡಿ ಗೆದ್ದಿದ್ದಕ್ಕೆ ಸೈಕೋ ಅಂತೆ ಆಡ್ತಾ, ಮಾಡರ್ನ್ ಡ್ರೆಸ್ ಬಿಟ್ಟು, ಸೀರೆಯುಟ್ಟು, ತಾನೇ ಲಕ್ಷ್ಮೀ ತರ ಆಡುತ್ತಿದ್ದಾಳೆ ಕೀರ್ತಿ. 

ಅದು ಜಯಂತ್ ಆಗಿರಲಿ ಅಥವಾ ಕೀರ್ತಿನೇ ಆಗಲಿ ಇಬ್ಬರ ನಟನೆ ಮಾತ್ರ ಅದ್ಭುತ ಅನ್ನೋದರಲ್ಲಿ ಎರಡು ಮಾತೇ ಇಲ್ಲ. ಯಾಕಂದ್ರೆ ಇಬ್ಬರನ್ನು ನೋಡಿದ್ರೆ ಈ ತರ ಸೈಕೋ ಪ್ರೇಮಿಗಳು (psycho lover) ಇರುತ್ತಾರೆಯೇ ಎನ್ನೋವಷ್ಟು ನೈಜ್ಯವಾಗಿ ಅಭಿನಯಿಸುತ್ತಾರೆ ದೀಪಕ್ ಮತ್ತು ತನ್ವಿ ರಾವ್.  ಸದ್ಯ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ. ಟ್ರೋಲ್ ಪೇಜ್ ಗಳು ಸೇಮ್ ಸೇಮ್ ಬಟ್ ಡಿಫರೆಂಟ್ ಎಂದು ಬರೆಯುತ್ತಾ, ಇವರಿಬ್ಬರು ಪ್ರೀತಿಸೋ ರೀತೀನೆ ಬೇರೆ ಅಲ್ವಾ ಅಂತಿದ್ದಾರೆ. 

ಇದಕ್ಕೆ ಜನರೂ ಪ್ರತಿಕ್ರಿಯಿಸಿದ್ದು, ಇಬ್ಬರೂ ಪ್ರೀತಿಸೋ ರೀತಿ ಬೇರೆ ನಿಜ ಆದರೆ ಕೀರ್ತಿ ಪ್ರೀತಿ ನಿಜವಾದುದು, ಜಯಂತ್ ಪ್ರೀತಿ ಸ್ವಾರ್ಥ ಮಾತ್ರ ಇದೆ. ಆದರೆ ಕೀರ್ತಿ, ಜಯಂತ್ ಆಕ್ಟಿಂಗ್ ಮಾತ್ರ ಚಿಂದಿ ಎಂದಿದ್ದಾರೆ. ಮತ್ತೊಬ್ಬರು ಈ ಇಬ್ಬರು ಸೈಕೋಗಳು ಒಂದಾದ್ರೆ ಚೆನ್ನಾಗಿದೆ ಅಂದಿದ್ದಾರೆ. ಇನ್ನೊಬ್ಬರು ಜಯಂತ್ ತನ್ನ ಪತ್ನಿಯನ್ನೇ ಹುಚ್ಚರಂತೆ ಪ್ರೀತಿಸ್ತಾನೆ, ಆದ್ರೆ ಕೀರ್ತಿ ಇನ್ನೊಬ್ಬರ ಗಂಡನನ್ನು ಹುಚ್ಚರ ಹಾಗೇ ಪ್ರೀತಿಸ್ತಾಳೆ ಇದು ಸರಿಯಲ್ಲ ಅಂತಿದ್ದಾರೆ. ನಿಮಗೆ ಏನ್ ಅನಿಸುತ್ತೇ? ಇವರಿಬ್ಬರಲ್ಲಿ ನಿಮ್ಮ ಫೇವರಿಟ್ ಯಾರು? 
 

Latest Videos

click me!