ಬಲು ದುಬಾರಿ ಉಡುಗೊರೆ ಕೊಡೋಕೆ ರೆಡಿಯಾದ 'ಟಾಲೆಂಟೆಡ್‌ ಕಲಾವಿದ'; ನಿರಾಕರಿಸಿದ ಅನುಪಮಾ ಗೌಡ!

Published : Jul 21, 2025, 01:29 PM ISTUpdated : Jul 21, 2025, 02:02 PM IST

ನಟಿ, ನಿರೂಪಕಿ ಅನುಪಮಾ ಗೌಡಗೆ 'ಕ್ವಾಟ್ಲೆ ಕಿಚನ್'‌ ಸ್ಪರ್ಧಿ ಪ್ರಶಾಂತ್‌ ಅವರು ಕಾಲ್ಗೆಜ್ಜೆಯನ್ನು ನೀಡಿದ್ದಾರೆ. ಇದರ ಹಿಂದೆ ದೊಡ್ಡ ಕತೆಯೇ ಇದೆಯಂತೆ. ಏನದು?

PREV
16
ಅಕ್ಕ-ತಮ್ಮ ಸಂಬಂಧ

ನಟಿ, ನಿರೂಪಕಿ ಅನುಪಮಾ ಗೌಡ ಅವರು ಸದ್ಯ ' ಕ್ವಾಟ್ಲೆ ಕಿಚನ್'‌ ಶೋ ನಿರೂಪಣೆ ಮಾಡುತ್ತಿದ್ದಾರೆ. ಕೆಲ ವರ್ಷಗಳಿಂದ ನಿರೂಪಣೆ ಮಾಡುತ್ತಿರುವ ಅವರು ಟಿವಿ ಕಲಾವಿದರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. 'ಗಿಚ್ಚಿ ಗಿಲಿಗಿಲಿ' ಶೋ ಸ್ಪರ್ಧಿ, ಟಾಲೆಂಟೆಡ್‌ ಕಲಾವಿದ ಪ್ರಶಾಂತ್‌ ಜೊತೆಯೂ ಇವರು ಅಕ್ಕ-ತಮ್ಮನ ಬಾಂಧವ್ಯ ಹೊಂದಿದ್ದಾರೆ.

26
ಅನುಪಮಾ ಗೌಡಗೆ ಕಾಲ್ಗೆಜ್ಜೆ ಕೊಟ್ಟ ತಮ್ಮ!

ಈ ಪ್ರಶಾಂತ್‌ ಅವರು ಅನುಪಮಾ ಗೌಡ ಮನೆಗೆ ಹೋಗಿ ಕಾಲ್ಗೆಜ್ಜೆಯನ್ನು ಉಡುಗೊರೆ ನೀಡಿದ್ದಾರೆ. ಈ ಕಾಲ್ಗೆಜ್ಜೆ ಹಿಂದೆಯೂ ದೊಡ್ಡ ಕಥೆ ಇದೆಯಂತೆ. ಇವರಿಬ್ಬರು ಈ ವಿಷಯದ ಬಗ್ಗೆ ವಿಡಿಯೋದಲ್ಲಿ ಮಾತನಾಡಿದ್ದಾರೆ. ಒಟ್ಟಿನಲ್ಲಿ ಈ ಅಕ್ಕ-ತಮ್ಮನ ಬಾಂಧವ್ಯ ನೋಡಿ ವೀಕ್ಷಕರು ಖುಷಿಪಟ್ಟಿದ್ದಾರೆ.

36
ತಮಾಷೆ ಹೋಗಿ ಸೀರಿಯಸ್‌ ಆಯ್ತು!

ಹೀಗೆ ಸೆಟ್‌ನಲ್ಲಿ ಮಾತನಾಡುವಾಗ ಅನುಪಮಾ ಗೌಡ ಅವರು ಪ್ರಶಾಂತ್‌ಗೆ, “ನೀನು ನನ್ನ ತಮ್ಮ, ಕಾಲ್ಗೆಜ್ಜೆ ಕೊಡಿಸು” ಅಂತ ತಮಾಷೆಯಾಗಿ ಹೇಳಿದ್ದಾರೆ. ಆಮೇಲೆ ಇದೇ ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದೆ. ಅನುಪಮಾ ಗೌಡ ಜನ್ಮದಿನಕ್ಕೆ ಕಾಲ್ಗೆಜ್ಜೆ ಉಡುಗೊರೆ ಕೊಡಬೇಕಿತ್ತು. ಆದರೆ ಕೆಲ ತಿಂಗಳುಗಳ ಬಳಿಕವಾದರೂ ಕಾಲ್ಗೆಜ್ಜೆ ಕೊಟ್ಟಿರೋದು ಖುಷಿಯ ವಿಷಯ.

46
ಗೋಲ್ಡ್‌ ಬೇಡ!

“ಇಂದು ಯಾವುದೋ ಅಂಗಡಿಗೆ ಹೋಗಿ ಕಾಲ್ಗೆಜ್ಜೆ ತಂದಿರೋದು, ಈ ಕಾಲ್ಗೆಜ್ಜೆ ಕೊಡಿಸೋಕೆ ಒಂದು ವರ್ಷ ತಗೊಂಡಿದ್ದೀಯಾ, ಇನ್ನು ಗೋಲ್ಡ್‌ ಕಡ ಕೊಡಿಸೋಕೆ ಎಷ್ಟು ವರ್ಷ ತಗೋತೀಯೋ ಏನೋ” ಎಂದು ಅನುಪಮಾ ಗೌಡ ಅವರು ಪ್ರಶಾಂತ್‌ರ ಕಾಲೆಳೆದಿದ್ದಾರೆ. ಆಮೇಲೆ 18 ಕ್ಯಾರೆಟ್‌ ಗೋಲ್ಡ್‌ ಕಡ ಕೊಡಿಸೋಕೆ ಇವರಿಬ್ಬರು ಒಪ್ಪಂದ ಮಾಡಿಕೊಂಡಿದ್ದಾರೆ. 

56
ಮಂಗಳೂರಿನಿಂದ ಗೆಜ್ಜೆ ತಂದ್ರಾ?

ಅಂದಹಾಗೆ ಪ್ರಶಾಂತ್‌ ಅವರು “ನಾನು ಮಂಗಳೂರಿನಿಂದ ಕಾಲ್ಗೆಜ್ಜೆ ತಂದೆ. ನಾವು ನಮ್ಮ ಮನೆಯ ದೇವರನ್ನು, ಬೆಳ್ಳಿಯ ಸಾಮಗ್ರಿಗಳನ್ನು ಅಲ್ಲಿಂದಲೇ ತಂದೆವು. ನಿಮಗೂ ಒಳ್ಳೆಯದಾಗಲಿ ಎಂದು ತಂದಿದ್ದೇನೆ” ಎಂದು ಹೇಳಿದ್ದಾರೆ. ಇದು ಸತ್ಯವೋ? ಸುಳ್ಳೋ ಎಂಬ ಅನುಪಮಾ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿಲ್ಲ.

66
‌ಕೋಳಿ ಜಗಳ ಮುಗೀತು, ತಮ್ಮನಿಗಾಗಿ ಚಿಕನ್ ತಯಾರಿಸಿದ ಅಕ್ಕ!

ಎರಡು ವಾರಗಳ ಹಿಂದೆ ಅನುಪಮಾ ಗೌಡ ಅವರ ಆಂಕರಿಂಗ್‌ ಬಗ್ಗೆ ಪ್ರಶಾಂತ್‌ ಕಾಲೆಳೆದು ಮಾತನಾಡಿದ್ದಾರೆ. ಈ ವಿಷಯಕ್ಕೆ ಅನುಪಮಾ ಬೇಸರ ಮಾಡಿಕೊಂಡ್ರು ಅಂತ ಪ್ರಶಾಂತ್‌ ಶಾಕ್‌ ಆಗಿದ್ದರು. ಆ ಬಳಿಕ ಇವರಿಬ್ಬರ ಕೋಳಿ ಜಗಳ ಮುಕ್ತಾಯವಾಗಿದೆ. ತನ್ನ ಮನೆಗೆ ಬಂದು ಕಾಲ್ಗೆಜ್ಜೆ ಕೊಟ್ಟ ಎಂಬ ಕಾರಣಕ್ಕೆ ಅನುಪಮಾ ಗೌಡ ಅವರು ಪ್ರಶಾಂತ್‌ಗೆ ಬಿಸಿ ಬಿಸಿ ಚಿಕನ್‌, ಬಸ್ಸಾರು ತಯಾರಿಸಿದ್ದರಂತೆ. ಒಟ್ಟಿನಲ್ಲಿ ಈ ಅಕ್ಕ-ತಮ್ಮನ ಬಾಂಧವ್ಯ ಹೀಗೆ ಚೆನ್ನಾಗಿರಲಪ್ಪಾ…!

Read more Photos on
click me!

Recommended Stories