ನನ್ನ ಬಕೆಟ್‌ ಅಂದರೂ ಪರ್ವಾಗಿಲ್ಲ ದರ್ಶನ್‌ ದೇವರು ಇದ್ದಂತೆ: ಅಭಿಜ್ಞಾ ಭಟ್‌

Published : Jul 21, 2025, 12:16 PM IST

ದರ್ಶನ್‌ ಅವರ ಕಷ್ಟಗಳ ಮುಂದೆ ನಮ್ಮ ಕಷ್ಟಗಳು ಯಾವ ಲೆಕ್ಕವೂ ಇಲ್ಲ. ಅವರು ನನ್ನ ಪಾಲಿಗೆ ದೇವರು ಇದ್ದಂತೆ ಎಂದರು ಕಿರುತೆರೆ ನಟಿ ಅಭಿಜ್ಞಾನ ಭಟ್‌.

PREV
15

‘ನನ್ನ ಬಕೆಟ್‌ ಅಂತ ಕರೆದರೂ ಪರ್ವಾಗಿಲ್ಲ. ನಟ ದರ್ಶನ್‌ ಅವರು ನನಗೆ ದೇವರು ಇದ್ದಂತೆ’. ಹೀಗೆ ದರ್ಶನ್‌ ಅವರ ಮೇಲೆ ತಮ್ಮ ಅಭಿಮಾನ ವ್ಯಕ್ತಪಡಿಸಿರುವುದು ಕಿರುತೆರೆ ನಟಿ ಅಭಿಜ್ಞಾನ ಭಟ್‌ ಅವರು.

25

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಭಿಜ್ಞಾ ಭಟ್‌, ‘ದರ್ಶನ್‌ ಅವರು ನನ್ನ ಫೇವರಿಟ್‌, ನನ್ನ ಹೀರೋ, ನನ್ನ ಪ್ರೇರಣೆ. ನಾನು ನನ್ನ ಜೀವನದಲ್ಲಿ ಸಿಕ್ಕಾಪಟ್ಟೆ ಏರಿಳಿತಗಳನ್ನು ನೋಡಿದರೂ ಕೂಡ ಮುಂದಿನ ದಿನಗಳಲ್ಲಿ ನನ್ನ ಜೀವನ ಚೆನ್ನಾಗಿರುತ್ತದೆ ಎನ್ನುವ ನಂಬಿಕೆ ಮತ್ತು ಭರವಸೆಯಲ್ಲಿ ಬದುಕುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ದರ್ಶನ್‌ ಅವರೇ’ ಎಂದಿದ್ದಾರೆ.

35

ದರ್ಶನ್‌ ಅವರ ಕಷ್ಟಗಳ ಮುಂದೆ ನಮ್ಮ ಕಷ್ಟಗಳು ಯಾವ ಲೆಕ್ಕವೂ ಇಲ್ಲ. ಅವರು ನನ್ನ ಪಾಲಿಗೆ ದೇವರು ಇದ್ದಂತೆ. ನನ್ನ ಈ ಮಾತು ಕೇಳಿ ಕೆಲವರು ನನ್ನ ಬಕೆಟ್‌ ಅಂದುಕೊಳ್ಳುತ್ತಾರೆ. ಆದರೂ ಪರ್ವಾಗಿಲ್ಲ. ನನ್ನ ಅಭಿಮಾನ, ಕ್ರೇಜ್‌ ಏನಂತ ಅವರ ಅಭಿಮಾನಿಗಳಿಗೆ ಗೊತ್ತು.

45

ಜೀವನ ಇರುವವರೆಗೂ ನಾನು ಡಿ ಬಾಸ್‌ ಅಭಿಮಾನಿ. ಅವರ ಜೊತೆಗೆ ನಟಿಸುವ ಅವಕಾಶ ನನ್ನಷ್ಟು ಖುಷಿ ಪಡುವವರು ಯಾರು ಇಲ್ಲ. ಅವರ ಜೊತೆಗೆ ನಟಿಸುವ ಅವಕಾಶ ಬೇಗ ಎಂದರು ನಾನು ಆ ರಾಯರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದು ಅಭಿಜ್ಞಾ ಭಟ್‌ ಹೇಳಿಕೊಂಡಿದ್ದಾರೆ.

55

ಅಭಿಜ್ಞಾ ಭಟ್‌ ಅವರು ‘ಸ್ನೇಹದ ಕಡಲಲ್ಲಿ’, ‘ರಾಮಾಚಾರಿ’, ‘ಗೌರಿಶಂಕರ’ ಧಾರಾವಾಹಿ ಹಾಗೂ ‘ಹುಡುಗ್ರು’ ಸಿನಿಮಾದಲ್ಲಿ ನಟಿಸಿದ್ದಾರೆ. ‘ಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫು’ ರಿಯಾಲಿಟಿ ಶೋ ಒಂದಿಷ್ಟು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories