ಗುಂಡಮ್ಮ, ಪಿಂಕಿನಾ ಬಿಟ್ಟು…. ಗೌರಿಗೆ ನಾಯಕನಾಗೋದಕ್ಕೆ ರೆಡಿಯಾದ್ರು ನಮ್ ಜಿಮ್ ಸೀನಾ

Published : Aug 18, 2025, 05:48 PM IST

ಅಣ್ಣಯ್ಯ ಧಾರಾವಾಹಿಯಲ್ಲಿ ಗುಂಡಮ್ಮನ ಗಂಡ ಹಾಗೂ ಪಿಂಕಿಯ ಬಾಯ್ ಫ್ರೆಂಡ್ ಜಿಮ್ ಸೀನಾ ಆಗಿ ಜನಮನ ಗೆದ್ದ ಸುಷ್ಮಿತ್ ಜೈನ್ ಸದ್ಯದಲ್ಲೇ ಗೌರಿಗೆ ನಾಯಕನಾಗ್ತಿದ್ದಾರೆ. ಏನಿದು ವಿಷಯ ನೋಡೋಣ.

PREV
17

ಝೀ ವಾಹಿನಿಯ ಅಣ್ಣಯ್ಯ ಸೀರಿಯಲ್  (Annayya serial)ನೋಡುಗರಿಗೆ ಜಿಮ್ ಸೀನಾ ಮತ್ತು ಗುಂಡಮ್ಮ ರಶ್ಮಿ ಜೋಡಿ ಸಖತ್ ಫೇವರಿಟ್. ತದ್ವಿರುದ್ಧ ಗುಣಗಳುಳ್ಳ ಈ ಜೋಡಿಯನ್ನು ಜನ ಮೆಚ್ಚಿಕೊಂಡಿದ್ದಾರೆ. ಇವರಿಬ್ಬರ ಕಿತ್ತಾಟ, ಜಗಳ ಎಲ್ಲವನ್ನೂ ಜನ ಇಷ್ಟಪಟ್ಟಿದ್ದಾರೆ. ಆದರೆ ಇದೀಗ ಗೌರಿಗೆ ನಾಯಕನಾಗಲು ಹೊರಟಿದ್ದಾರೆ ಜಿಮ್ ಸೀನಾ.

27

ಯಾರಪ್ಪಾ ಈ ಗೌರಿ ಎಂದು ಯೋಚನೆ ಮಾಡುತ್ತಿದ್ದೀರಾ? ಹೊಸದಾಗಿ ಆರಂಭವಾಗಲಿರುವ ಝಿ ಪವರ್ ಧಾರಾವಾಹಿಯಲ್ಲಿ ಝೀ ಕನ್ನಡದ ಪ್ರತಿಭೆಗಳಿಗೆ ಮುಖ್ಯ ಪಾತ್ರಗಳನ್ನು ನೀಡುತ್ತಿದ್ದಾರೆ. ಈಗಾಗಲೇ ಜೈದೇವ್ ಖ್ಯಾತಿಯ ರಾಣವ್ ಗೌಡ, ಪಾರ್ಥ ಖ್ಯಾತಿಯ ಕರಣ್ ನಾಯಕರಾಗಿ ಎಂಟ್ರಿ ಕೊಟ್ಟಾಗಿದೆ. ಇದೀಗ ಸುಷ್ಮಿತ್ ಜೈನ್ (Sushmith Jain) ಕೂಡ ನಾಯಕನಾಗಿ ಎಂಟ್ರಿ ಕೊಡ್ತಿದ್ದಾರೆ.

37

ಹೌದು, ಝೀ ಪವರ್ ನಲ್ಲಿ ಪ್ರಸಾರವಾಗಲಿರುವ ಗೌರಿ ಧಾರಾವಾಹಿಗೆ  (Gouri serial) ಸುಷ್ಮಿತ್ ಜೈನ್ ನಾಯಕನಾಗಲಿದ್ದಾರೆ. ಎರಡನೆ ನಾಯಕನ ಪಾತ್ರವೋ? ಅಥವಾ ಮುಖ್ಯ ನಾಯಕನ ಪಾತ್ರವೋ ತಿಳಿದಿಲ್ಲ. ಆದರೆ ನಾಯಕಿ ಗೌರಿ ಜೊತೆಗೆ ಸುಷ್ಮಿತ್ ಜೈನ್ ಕಾಣಿಸಿಕೊಂಡಿದ್ದಾರೆ.

47

ಗೌರಿ ಸೀರಿಯಲ್ ತೆಲುಗು ಧಾರಾವಾಹಿಯ ರಿಮೇಕ್ ಆಗಿದ್ದು, ಇದು ಅಕ್ಕ ತಂಗಿಯರ ಕಥೆಯಾಗಿದೆ. ಅಕ್ಕನಿಗಾಗಿ ಮನೆ ಮನೆ ಕೆಲಸ ಮಾಡಿ ಕಷ್ಟಪಡುವ ತಂಗಿ, ಅಕ್ಕ ಪೇಟೆಯಲ್ಲಿ ಶ್ರೀಮಂತ ಬದುಕು ನಡೆಸುತ್ತಾರೆ. ನಂತರ ಏನೇನು ಆಗುತ್ತೆ ಅನ್ನೋದು ಕಥೆ. ಈ ಧಾರಾವಾಹಿಯಲ್ಲಿ ಸುಷ್ಮಿತ್ ಜೈನ್ ಕೂಡ ನಟಿಸುತ್ತಿದ್ದಾರೆ ಅನ್ನೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

57

ಇನ್ನು ಸುಷ್ಮಿತ್ ಜೈನ್ ಬಗ್ಗೆ ಹೇಳೊದಾದರೆ, ಮೈಸೂರಿನ ಹುಡುಗನಾಗಿರುವ ಸುಷ್ಮಿತ್ ಜೈನ್ ಮೆಕ್ಯಾನಿಕ್ ಇಂಜಿನಿಯರಿಂಗ್ ಮಾಡಿದ್ದಾರೆ. ಸತ್ಯಂ ಶಿವಂ ಸುಂದರಂ ಧಾರಾವಾಹಿಯ ಸ್ಯಾಂಡಿ, ಆಲಿಯಾಸ್ ಸುಂದರನಾಗಿ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಧಾರಾವಾಹಿಯ ನಂತರ ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.

67

ಸುಶ್ಮಿತ್ ನಾಯಕನಾಗಿ ಭಡ್ತಿ ಪಡೆದದ್ದು, ಭೂಮಿ ತಾಯಾಣೆ ಧಾರಾವಾಹಿ ಮೂಲಕ. ಬಳಿಕ ಮನಸೆಲ್ಲಾ ನೀನೆ ಧಾರಾವಾಹಿಯಲ್ಲಿ ಖಳ ನಾಯಕನಾಗಿ ಅಬ್ಬರಿಸಿದರು. ನಂತರ ದೊರೆಸಾನಿ ಸೀರಿಯಲ್ ನಲ್ಲಿ ಅತಿಥಿ ಪಾತ್ರದಲ್ಲಿ . ಕನ್ಯಾದಾನ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು ಸುಷ್ಮಿತ್ ಜೈನ್.

77

ಅಷ್ಟೇ ಅಲ್ಲ ಸುಷ್ಮಿತ್ ಜೈನ್ ಕಿರುಚಿತ್ರವೊಂದರಲ್ಲಿ ಕೂಡ ನಟಿಸಿದ್ದಾರೆ. ರಘು ಚರಣ್ ನಿರ್ದೇಶನ ಮಾಡಿರುವ ವರ್ಜಿನ್ ಎನ್ನುವ ಕನ್ನಡ ಕಿರುಚಿತ್ರದಲ್ಲಿ ಇವರು ನಟಿಸಿದ್ದರು. ಆದರೆ ಸುಷ್ಮಿತ್ ಗೆ ಹೆಚ್ಚಿನ ಜನಪ್ರಿಯತೆ ಕೊಟ್ಟಿದ್ದು ಅಣ್ಣಯ್ಯ ಧಾರಾವಾಹಿಯ ಜಿಮ್ ಸೀನನ ಪಾತ್ರ.

Read more Photos on
click me!

Recommended Stories