ಸದ್ದಿಲ್ಲದೇ ಮದುವೆಗೆ ರೆಡಿಯಾದ್ರಾ ನಟಿ ಶೋಭಾ ಶೆಟ್ಟಿ…. ಅರಶಿನ ಶಾಸ್ತ್ರದ ಫೋಟೊಗಳು ವೈರಲ್

Published : Aug 18, 2025, 03:53 PM IST

ಕನ್ನಡ ಕಿರುತೆರೆ ಹಾಗೂ ಬಿಗ್ ಬಾಸ್ ಸೀಸನ್ 11 ರ ಮೂಲಕ ಸಖತ್ ಸದ್ದು ಮಾಡಿದ ಚೆಲುವೆ ಶೋಭಾ ಶೆಟ್ಟಿ ಸದ್ದಿಲ್ಲದೆ ಮದುವೆಗೆ ತಯಾರಿ ನಡೆಸುತ್ತಿದ್ದಾರೆಯೇ? ಇಲ್ಲಿದೆ ವೈರಲ್ ಫೋಟೋಗಳು.

PREV
19

ಬಿಗ್ ಬಾಸ್ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಭರ್ಜರಿ ಮನರಂಜನೆ ಕೊಟ್ಟಿದ್ದ ನಟಿ ಶೋಭಾ ಶೆಟ್ಟಿ. ಕನ್ನಡದಲ್ಲಿ ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಮೊದಲು ಶೋಭಾ ತೆಲುಗು ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದು, ಅಲ್ಲಿ ತಮ್ಮ ಮಾತಿನ ಮೂಲಕವೇ ಎದುರಾಳಿಗಳನ್ನು ನಡುಗಿಸಿದ್ದರು.

29

ತೆಲುಗು ಬಿಗ್ ಬಾಸ್ ಮನೆಯಲ್ಲಿರುವಾಗಲೇ ಶೋಭಾ ಶೆಟ್ಟಿ ತಾವು ತಮ ಸಹ ನಟನನ್ನು ಪ್ರೀತಿಸುತ್ತಿರುವುದಾಗಿ ಸಹ ಹೇಳಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಇಬ್ಬರು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಅದೆಲ್ಲಾ ನಡೆದು ವರ್ಷಗಳು ಕಳೆದರೂ ಸಹ ಶೋಭಾ ಶೆಟ್ಟಿ ತಮ್ಮ ಮದುವೆಯ ಬಗ್ಗೆ ಮಾತನಾಡಿರಲಿಲ್ಲ.

39

ಇದೀಗ ಶೋಭಾ ಶೆಟ್ಟಿ  (Shobha Shetty)ತಮ್ಮ ಇನ್’ಸ್ಟಾಗ್ರಾಂನಲ್ಲಿ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ಅದನ್ನು ನೋಡಿದ್ರೆ ಸದ್ದಿಲ್ಲದೇ ಶೋಭಾ ಶೆಟ್ಟಿ ಮದುವೆಯ ತಯಾರಿ ನಡೆಯುತ್ತಿದೆ ಎಂದು ಅನಿಸುತ್ತಿದೆ. ಯಾಕಂದ್ರೆ ಸದ್ಯ ವೈರಲ್ ಆಗಿರುವ ಫೋಟೊಗಳನ್ನು ನೋಡಿದ್ರೆ ಅರಶಿನ ಶಾಸ್ತ್ರದ ಫೋಟೊಗಳಂತೆ ಕಾಣಿಸುತ್ತಿವೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

49

ಅಗ್ನಿ ಸಾಕ್ಷಿ ಎನ್ನುವ ಕನ್ನಡ ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಶೋಭಾ ಶೆಟ್ಟಿ, ಬಳಿಕ ತೆಲುಗು ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದರು. ಕಾರ್ತಿಕ ದೀಪಂ ಧಾರವಾಹಿ ಅವರಿಗೆ ಹೆಸರು ತಂದುಕೊಟ್ಟಿತು. ಇದೇ ಧಾರವಾಹಿಯಲ್ಲಿ ಆದಿತ್ಯ ಪಾತ್ರ ಮಾಡಿದ್ದ ಯಶ್ವಂತ್ ರೆಡ್ಡಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ಶೋಭಾ ಶೆಟ್ಟಿ.

59

ಕಳೆದ ವರ್ಷ ಎಪ್ರಿಲ್ ನಲ್ಲಿ ಯಶ್ವಂತ್ ರೆಡ್ಡಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಶೋಭಾ, ಈ ವರ್ಷ ಎಂಗೇಜ್ ಮೆಂಟ್ ಆನಿವರ್ಸರಿ ಕೂಡ ಆಚರಿಸಿಕೊಂಡಿದ್ದರು. ಈ ವರ್ಷವೇ ಮದುವೆಯಾಗುವುದಾಗಿ ಕೂಡ ಹೇಳಿದ್ದರು. ಹಾಗಾಗಿ ಈ ಫೋಟೊಗಳನ್ನು ನೋಡಿದರೆ, ಮದುವೆಯ ಶಾಸ್ತ್ರಗಳು ನಿಧಾನವಾಗಿ ಸದ್ದಿಲ್ಲದೆ ಆರಂಭವಾಗಿದೆಯೇನೋ ಎಂದೆನಿಸುತ್ತಿದೆ.

69

ಸದ್ಯ ವೈರಲ್ ಆಗುತ್ತಿರುವ ಫೋಟೊಗಳಲ್ಲಿ ಶೋಭಾ ಶೆಟ್ಟಿ ಹಳದಿ ಬಣ್ಣದ ಜರಿ ಸೀರೆಯುಟ್ಟು, ಅದಕ್ಕೆ ಕಾಂಟ್ರಾಸ್ಟ್ ಆಗಿರುವ ಹಸಿರು ಬಣ್ಣದ ಬ್ಲೌಸ್ ಧರಿಸಿದ್ದಾರೆ. ಮೈತುಂಬಾ ಒಡವೆಗಳನ್ನು ಧರಿಸಿದ್ದಾರೆ. ಜೊತೆಗೆ ಕೆನ್ನೆ ಮೇಲೆ , ಕೈಯಲ್ಲಿ ಅರಿಶಿನವನ್ನು ಕಾಣಬಹುದು.

79

ಕೆಲವು ಫೋಟೊಗಳಲ್ಲಿ ಶೋಭಾ ಶೆಟ್ಟಿ ದೇವರಿಗೆ ಪೂಜೆ ಮಾಡುತ್ತಿದ್ದರೆ, ಇನ್ನೂ ಕೆಲವು ಫೋಟೊಗಳಲ್ಲಿ ಶೋಭಾ ಹೂವಿನ ಅಲಂಕಾರದ ಮುಂದೆ ಕುಳಿತುಕೊಂಡಿದ್ದಾರೆ. ಇನ್ನೂ ಕೆಲವು ಫೋಟೊಗಳಲ್ಲಿ ಶೋಭಾ ಸಹೋದಿಯರ ಜೊತೆಗೆ ನಗುತ್ತಾ ಫೋಟೊಗೆ ಪೋಸ್ ಕೊಟ್ಟಿದ್ದಾರೆ.

89

ಇದನ್ನೆಲ್ಲಾ ನೋಡುತ್ತಿದ್ದರೆ, ಹಳದಿ ಕಾರ್ಯಕ್ರಮದ ಫೋಟೊಗಳಂತೆ ಕಾಣುತ್ತಿವೆ. ಹಾಗಾಗಿಯೇ ಶೋಭಾ ಅಭಿಮಾನಿಗಳು ನಟಿಗೆ ಅಭಿನಂದನೆಗಳನ್ನು ಸೂಚಿಸಿದ್ದು, ಸದ್ಯದಲ್ಲೇ ಮದುವೆ ಜೋರಾಗಿಯೇ ನಡೆಯಲಿದೆ ಎನ್ನುವ ಸೂಚನೆ ಇದಾಗಿದೆ ಎನ್ನುತ್ತಿದ್ದಾರೆ.

99

ಆದರೆ ಶೋಭಾ ಫೋಟೊಗಳ ಜೊತೆಗೆ ಕೊಟ್ಟ ಮಾಹಿತಿಯ ಪ್ರಕಾರ ಇದು ನಟಿಯ ಮನೆಯಲ್ಲಿ ನಡೆಯ ವರಮಹಾಲಕ್ಷ್ಮೀ ಹಬ್ಬದ ಸಂಬ್ರಮದ ಫೋಟೊಗಳಾಗಿವೆ. ನಟಿಯ ಮದುವೆ ಯಾವಾಗ? ಎಲ್ಲಿ ನಡೆಯಲಿದೆ ಎನ್ನುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Read more Photos on
click me!

Recommended Stories