ಟೀಚರ್ ಆಗಿದ್ದ ಲಕ್ಷ್ಮಿ ಬಾರಮ್ಮ ಸುಪ್ರೀತಾಗೆ 8 ವರ್ಷದ ಮಗನಿದ್ದರೂ, ಫಿಟ್ ಆಗಿರೋದು ಹೇಗೆ?

Published : Apr 22, 2023, 01:34 PM IST

ಲಕ್ಷ್ಮೀ ಬಾರಮ್ಮ ಸೀರಿಯಲ್ ನೋಡುವವರಿಗೆ ಅದರಲ್ಲಿರುವ ಕೊಂಕು ಬುದ್ದಿಯ ಸುಪ್ರಿತಾ ಖಂಡಿತಾ ಗೊತ್ತಿರಬಹುದು. ಆದರೆ ಇವರ ರಿಯಲ್ ಹೆಸರು ಏನು? ಇವರ ಬಗ್ಗೆ ಪೂರ್ತಿ ಡೀಟೇಲ್ಸ್ ತಿಳಿಯೋಣ. 

PREV
18
ಟೀಚರ್ ಆಗಿದ್ದ ಲಕ್ಷ್ಮಿ ಬಾರಮ್ಮ ಸುಪ್ರೀತಾಗೆ 8 ವರ್ಷದ ಮಗನಿದ್ದರೂ, ಫಿಟ್ ಆಗಿರೋದು ಹೇಗೆ?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ವಿಲನ್ ಪಾತ್ರ ನಿರ್ವಹಿಸುತ್ತಿರುವ ಸುಪ್ರಿತಾ ಅವರ ನಿಜವಾದ ಹೆಸರು ರಜನಿ ಪ್ರವೀಣ್ (Rajani Praveen). ಇವರು ತಮ್ಮ ಸ್ಟೈಲಿಶ್ ಲುಕ್ ನಿಂದಲೇ ಬಹಳ ಜನಪ್ರಿಯತೆ ಪಡೆದಿದ್ದಾರೆ. 

28

ಹಿಂದೆಲ್ಲಾ ವಿಲನ್ ಗಳಿಗೆ ಸೀರಿಯಲ್ ಗಳಲ್ಲಿ ಅಷ್ಟೊಂದು ಲುಕ್ ನೀಡುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸೀರಿಯಲ್ ನ ನಾಯಕಿಯರಿಗಿಂತ ವಿಲನ್ ಗಳ ಲುಕ್ ಬಹಳ ಸ್ಟೈಲಿಶ್ ಆಗಿರುತ್ತೆ. ವಿಲನ್ ಗಳೇ ಫ್ಯಾಷನ್ ಐಕಾನ್ (fashion Icon) ಗಳಾಗಿ ಮೆರೆಯುತ್ತಾರೆ. ಅಂತಹ ಸ್ಟೈಲಿಶ್ ವಿಲನ್ ಗಳಲ್ಲಿ ಒಬ್ಬರು ರಜನಿ ಪ್ರವೀಣ್. 

38

ರಜನಿ ಅವರು ನಟನೆಯನ್ನು ಆರಿಸಿಕೊಂಡಿದ್ದು ಅವರಿಗೇ ಸರ್ಫ್ರೈಸ್ ಆಗಿದೆ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ಬಯಸಿ, ಕೊನೆಗೆ ಟೀಚರ್ (Teacher) ಆಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ರಜನಿ ಪ್ರವೀಣ್ ಅವರು ಕೊನೆಗೆ ಕಿರುತೆರೆಯಲ್ಲಿ ವಿಲನ್ ಆಗಿ ಸಖತ್ ಸದ್ದು ಮಾಡುತ್ತಿದ್ದಾರೆ. 

48

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿರುವ ಸುಪ್ರೀತಾ ಇದಕ್ಕೂ ಮೊದಲು ರಂಗನಾಯಕಿ ಸೀರಿಯಲ್ ನಲ್ಲೂ ಸಹ ನಾಯಕಿಯಾಗಿ ಮಿಂಚಿದ್ದರು. ಅಲ್ಲೂ ಸಹ ನಾಯಕಿಗೆ ತುಂಬಾನೆ ಕಾಟಕೊಡುವ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದರು. 

58

ಉಷಾ ಭಂಡಾರಿ ಅವರ ನಟನಾ ಶಾಲೆಯಲ್ಲಿ ಕಲಿತ ಇವರು, ರಂಗಭೂಮಿ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದರು. ಇವರ ನಟನೆಯ ಮೊದಲ ಧಾರಾವಾಹಿ ಹರ ಹರ ಮಹಾದೇವ.  ಇದಾದ ನಂತರ ಇವರು ಕನ್ನಡದ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. 

68

ಇನ್ನು ತುಂಬಾ ಸ್ಟ್ರಿಕ್ಟ್ ಪರಿವಾರದಲ್ಲಿ ಬೆಳೆದ ರಜನಿ ಅವರಿಗೆ ನಟನೆಗೆ ಎಂಟ್ರಿ ನೀಡಲು ತುಂಬಾನೆ ಸಪೋರ್ಟ್ ನೀಡಿದ್ದು, ತಮ್ಮ ಎಲ್ಲಾ ಕೆಲಸದಲ್ಲೂ ಪತಿಯ ಸಹಕಾರ ಪಡೆದಿರುವ ರಜನಿಗೆ ಮದುವೆಯಾಗಿ 10 ವರ್ಷವಾಗಿದ್ದು, 8 ವರ್ಷದ ಮಗ ಕೂಡ ಇದ್ದಾನೆ. 

78

ಫಿಟ್ ನೆಸ್ ಫ್ರೀಕ್ (Fitness freek)  ಆಗಿರುವ ಇವರು ಪ್ರೆಗ್ನೆನ್ಸಿಯಲ್ಲಿ 12 0ಕೇಜಿ ಇದ್ದರಂತೆ. ಬಳಿಕ ವರ್ಕೌಟ್ ಮಾಡಿ ಈಗ ಸ್ಲಿಮ್ ಲುಕ್ ನಲ್ಲಿ ಮಾಡೆಲ್ ನಂತೆ ಮಿಂಚುತ್ತಿದ್ದಾರೆ ನಟಿ.  ನಿಯಮಿತವಾಗಿ ವರ್ಕೌಟ್ ಮಾಡುವುದು, ಆರೋಗ್ಯಕರ ಡಯಟ್ ಇವರ ಫಿಟ್ ನೆಸ್ ಸೀಕ್ರೆಟ್.

88

ಇಲ್ಲಿವರೆಗೆ ರಜನಿಯವರು ಹರ ಹರ ಮಹಾದೇವ್, ಮಹಾದೇವಿ, ರಾಜಿ, ಅಮ್ಮನ್ ಸೇರಿದಂತೆ ಒಟ್ಟು 7 ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹೆಚ್ಚಿನ ಎಲ್ಲಾ ಸೀರಿಯಲ್ ಗಳಲ್ಲೂ ಇವರು ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದಾರೆ. ವಿಲನ್ ಪಾತ್ರಕ್ಕೆ ನ್ಯಾಯ ಒದಗಿಸುವ ಈ ನಟಿಗೆ ಇನ್ನಷ್ಟು ಅವಕಾಶಗಳು ಒದಗಿ ಬರಲಿ ಎಂದು ಹಾರೈಸೋಣ. 
 

click me!

Recommended Stories